ಬೆಳಗಾವಿ: ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಕೆಂಪು ಸಾಂತಾ ಕ್ಲಾಸ್ ಟೋಪಿ ಹಾಕಿ ಅವಮಾನ ಮಾಡಿದ ಘಟನೆ ಅತ್ಯಂತ ಖೇದಕರ ಸಂಗತಿಯಾಗಿದೆ,
ಬೆಳಗಾವಿಯ CPED ನಿಂದ ಹಿಂಡಲಗಾ ಗಣಪತಿ ಮಂದಿರದ ಮಧ್ಯದಲ್ಲಿ ಇರುವ ಗಾಂಧಿ ಪ್ರತಿಮೆಗೆ ಕಿಡಿಗೇಡಿಗಳು ಅವಮಾನ ಮಾಡಿದ್ದು ಖಂಡನೀಯ. ಕೆಲವರು ಇದನ್ನು “ತಮಾಷೆ” ಎಂದುಕೊಳ್ಳಬಹುದು, ಆದರೆ ಇದು ರಾಷ್ಟ್ರಪಿತ, ಮಹಾತ್ಮ ಅಂತ ಉದ್ಬೋಧಿಸುವವರಿಗೆ ಮಾಡಿದ ಅವಮಾನ ಎಂದು ಹೇಳಬಹುದು.
ಗಾಂಧೀಜಿ ಅವರ ಪ್ರತಿಮೆ ಅಂದರೆ – ಸತ್ಯ, ಅಹಿಂಸೆ ಮತ್ತು ನಮಗೆ ದೊರೆತ ಸ್ವಾತಂತ್ರ್ಯದ ಮೌಲ್ಯಗಳನ್ನು ನೆನಪಿಸುವ ಸಂಕೇತಗಳು. ಇಂತಹ ಮಹಾನ್ ವ್ಯಕ್ತಿತ್ವವನ್ನು ಕ್ಷಣಿಕ ಮನರಂಜನೆಗಾಗಿ ಹಾಸ್ಯಕ್ಕೆ ಒಳಪಡಿಸುವುದು ಸ್ವಾತಂತ್ರ್ಯ ಹೋರಾಟಗಾರರ ಪರಂಪರೆಗೆ ಅವಮಾನ.
1925ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಗಾಂಧೀಜಿ ಅಧ್ಯಕ್ಷರಾಗಿದ್ದರು. ಆ ವಿಶೇಷ ವರ್ಷದ ಶತಮಾನೋತ್ಸವ ಸಂಭ್ರಮದ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಇತಿಹಾಸ ಹೊಂದಿರುವ ಬೆಳಗಾವಿಯಲ್ಲಿ ಈ ರೀತಿಯ ಕೃತ್ಯ ಆಕ್ಷೇಪಾರ್ಹ; ಇದನ್ನು ನಾವು ಸ್ಪಷ್ಟವಾಗಿ ಖಂಡಿಸಬೇಕು.
ಈ ವಿಷಯವನ್ನು ಬೆಳಗಾವಿ ಮಹಾನಗರ ಪಾಲಿಕೆ ಮತ್ತು ಸ್ಥಳೀಯ ಪೊಲೀಸರು ತಕ್ಷಣ ಗಂಭೀರವಾಗಿ ಗಮನಿಸಬೇಕು ಎಂದು ಆಗ್ರಹ. ಪ್ರತಿಮೆಯ ಗೌರವವನ್ನು ಕೂಡಲೇ ಮರುಸ್ಥಾಪಿಸಬೇಕು ಮತ್ತು ಇದಕ್ಕೆ ಕಾರಣರಾದವರನ್ನು ಗುರುತಿಸಿ, ತಕ್ಕ ಕಾನೂನು ಕ್ರಮ ಕೈಗೊಳ್ಳಬೇಕು. ಮುಂದೆಯೂ ಇಂತಹ ಘಟನೆಗಳು ನಡೆಯದಂತೆ ಪ್ರಮುಖ ಸ್ಮಾರಕಗಳ ಸುತ್ತ ನಿಗಾವ್ಯವಸ್ಥೆಯನ್ನು ಹೆಚ್ಚಿಸುವಂತೆ ಮನವಿ ಮಾಡುತ್ತೇವೆ. ನಮ್ಮ ರಾಷ್ಟ್ರೀಯ ಸಂಕೇತಗಳ ಗೌರವವನ್ನು ಕಾಪಾಡೋಣ; ಸಾರ್ವಜನಿಕ ಸ್ಥಳಗಳು ಗೌರವ ಮತ್ತು ಶಿಸ್ತು ಕಾಪಾಡುವ ಜಾಗಗಳಾಗಿರಲಿ, ಅವಮಾನ, ತಮಾಷೆ ಮಾಡುವ ವೇದಿಕೆಯಾಗಬಾರದು ಎಂದು ಸ್ಥಳೀಯ ನಾಗರಿಕರು ತಿಳಿಸಿದರು
ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದೆ..
ಸಂಪಾದಕರು: ರಾಮಚಂದ್ರಪ್ಪ ಪೂಜೇರ
