ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಪ್ರಕರಣದಲ್ಲಿ ಫೈರಿಂಗ್ ಆಗಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ SP ಪವನ್ ನಜ್ಜುರು ಅವರನ್ನು ಕರ್ತವ್ಯ ಲೋಪ ಆರೋಪದ ಅಡಿ ಸಸ್ಪೆಂಡ್ ಮಾಡಲಾಗಿತ್ತು ಇದೀಗ ಮಾತ್ರೆ ನುಂಗಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ನಿದ್ರೆ ಮಾತ್ರೆಗಳನ್ನು ಸೇವಿಸಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನೂ ನೀಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊನ್ನೆ SP ಆಗಿ ಚಾರ್ಜ್ ತೆಗೆದುಕೊಂಡಿದ್ದ ಪವನ್ ನೆಜ್ಜೂರು ನಿನ್ನೆ ಅಮಾನತು!
ಶಾಸಕ ಜನಾರ್ದನ ರೆಡ್ಡಿಯ (Janardhan Reddy) ಬಳ್ಳಾರಿಯ (Bellary) ಮನೆ ಬಳಿ ವಾಲ್ಮೀಕಿ ಮಹರ್ಷಿ ಅವರ ಬ್ಯಾನರ್ ಕಟ್ಟುವ ವಿಚಾರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಬ್ಯಾನರ್ ಕಟ್ಟುವ ಸಂದರ್ಭದಲ್ಲಿ ಕಾಂಗ್ರೆಸ್ (Congress) ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವೇ ಕಲ್ಲು ತೂರಾಟ, ಗಲಾಟೆ, ಗುಂಡಿನ ದಾಳಿ ವೇಳೆ ಭರತ್ ರೆಡ್ಡಿ ಆಪ್ತ, ಯುವ ಕಾರ್ಯಕರ್ತ ರಾಜಶೇಖರ್ ಅವರು ಗುಂಡೇಟಿಗೆ ಬಲಿಯಾಗಿದ್ದರು.
ಈ ಪ್ರಕರಣ ಸಂಬಂಧ ನೂತನವಾಗಿ ಬಳ್ಳಾರಿ ಎಸ್ಪಿಯಾಗಿ ಬಂದಿದ್ದ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಮೊನ್ನೆಯಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಚಾರ್ಜ್ ತೆಗೆದುಕೊಂಡಿದ್ದ ಪವನ್ ನೆಜ್ಜೂರು ಅವರನ್ನು ನಿನ್ನೆ ಸಸ್ಪೆಂಡ್ ಮಾಡಲಾಗಿದೆ.
ಮೊನ್ನೆ ಬೆಳಗ್ಗೆ ಎಸ್ಪಿಯಾಗಿ ಚಾರ್ಜ್ ತೆಗೆದುಕೊಂಡ ಬಳಿಕ ಕೆಲವೇ ಗಂಟೆಗಳಲ್ಲಿ ಅಂದರೆ ಅದೇ ದಿನ (ಗುರುವಾರ) ಸಾಯಂಕಾಲ ಘೋರ ಗಲಾಟೆಯಾಗಿದೆ. ಆ ಸಂಘರ್ಷ ಹಿನ್ನೆಲೆಯಲ್ಲಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಲಾಗಿದೆ. ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸದ ಆರೋಪದಡಿ ಸಸ್ಪೆಂಡ್ ಮಾಡಲಾಗಿದ್ದು, IGP ವರ್ತಿಕಾ ಕಟಿಯಾರ್ ಅವರ ವರದಿ ಆಧರಿಸಿ ರಾಜ್ಯ ಸರ್ಕಾರ ಅಮಾನತು ಮಾಡಿತು.
ಒಂದೇ ದಿನಕ್ಕೆ ಎಸ್ಪಿ ಸಸ್ಪೆಂಡ್ ಮಾಡಿದ್ದಕೆ ಕಾರಣ ಕೊಟ್ಟ ಸಿಎಂ!
ಬ್ಯಾನರ್ ಕಟ್ಟುವ ವಿಚಾರವಾಗಿ ಓರ್ವ ಕಾಂಗ್ರೆಸ್ ಯುವಕ ಮೃತಪಟ್ಟಿದ್ದಾನೆ. ಈ ಘಟನೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪವನ್ ನೆಜ್ಜೂರು ಅವರನ್ನು (ಜ.2) ಸಸ್ಪೆಂಡ್ ಮಾಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಅವರು ಹಾಜರಿರದ ಕಾರಣ, ಕರ್ತವ್ಯ ಲೋಪದಡಿ ಅಮಾನತು ಮಾಡಲಾಗಿದೆ ಎಂದು ಹೇಳಿದ್ದಾರೆ.
ವರದಿಗಾರರು ಬೇಕಾಗಿದ್ದಾರೆ. ಆಸಕ್ತಿ ಹೊಂದಿರುವ ಪ್ರಾಮಾಣಿಕ ವರದಿಗಾರರು ನಮ್ಮನ್ನು ಸಂಪರ್ಕಿಸಿ..
kolinewstv.com@gmail.com
www.kolinewstv.com/
ಮೋ.ನಂಬರ್ –9035262956
(ಸುದ್ದಿ ಮತ್ತು ಜಾಹಿರಾತುಗಳಿಗೆ ನಮ್ಮನ್ನು ಸಂಪರ್ಕಿಸಿ.)
