Thursday, May 14, 2026
Homeಟಾಪ್ ನ್ಯೂಸ್ಪ್ರಾಥಮಿಕ ಶಾಲೆ ಪದವೀಧರ ಸಹಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ತರಬೇತಿ ಒಂದೇ ಆಗಿದ್ದರೂ ಸಹ...

ಪ್ರಾಥಮಿಕ ಶಾಲೆ ಪದವೀಧರ ಸಹಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ತರಬೇತಿ ಒಂದೇ ಆಗಿದ್ದರೂ ಸಹ ಮತದಾನದ ಹಕ್ಕಿನಲ್ಲಿ ಅನ್ಯಾಯ!

ಭಾಸ್ಕರ ಎಂ ಮುದೇನೂರು ನ್ಯಾಯವಾದಿಗಳು ಹಾಗೂ ರಾಜ್ಯಾಧ್ಯಕ್ಷರು ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ- ಕರ್ನಾಟಕ

ಭಾರತೀಯ ಸಂವಿಧಾನದ ಅನುಚ್ಛೇದ 171(3)(C) ರಾಜ್ಯ ವಿದಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾರರ ಅರ್ಹತೆಯ ಬಗ್ಗೆ ವಿವರಿಸುತ್ತದೆ!

ಈ ಅನುಚ್ಛೇದದ ಪ್ರಕಾರ ಹೈಯರ್ ಸೆಕೆಂಡರಿ ಶಾಲೆಗಿಂತ ಕಡಿಮೆ ಇಲ್ಲದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕನಿಷ್ಟ ಮೂರು ವರ್ಷಗಳ ಬೋಧನಾ ಅನುಭವವಿರುವ ಶಿಕ್ಷಕರು ಮಾತ್ರ ಮತದಾನದ ಹಕ್ಕನ್ನು ಹೊಂದಿದ್ದಾರೆ!

ಆದರೆ 2009 ರ ರಾಷ್ಟ್ರೀಯ ಶಿಕ್ಷಣ ಹಕ್ಕು ಕಾಯ್ದೆ (RTE) ಜಾರಿಯಾದ ನಂತರ 1 ರಿಂದ 5 ನೇ ತರಗತಿಯನ್ನು ಪ್ರಾಥಮಿಕ ಶಿಕ್ಷಣ ಎಂತಲೂ,
6 ರಿಂದ 8 ನೇ ತರಗತಿ ವರೆಗೆ ಮಾಧ್ಯಮಿಕ ಶಿಕ್ಷಣ ಎಂತಲೂ, 9 ರಿಂದ 12 ಶಿಕ್ಷಣವನ್ನು ಪ್ರೌಢಶಾಲೆ ಎಂತಲೂ ವಿಂಗಡಿಸಲಾಗಿದೆ!

ಸರಕಾರವು 6 ರಿಂದ 8 ನೇ ತರಗತಿಗೆ ಬೋಧಿಸುವ ಶಿಕ್ಷಕರನ್ನು 2015-16 ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆ ಪದವೀಧರ ಸಹ ಶಿಕ್ಷಕರು ಅಥವಾ ಜಿಪಿಟಿ ಶಿಕ್ಷಕರು ಎಂಬ ಹೊಸ ವೃಂದವನ್ನೇ ಸೃಷ್ಟಿಸಿದೆ!

ವಿಪರ್ಯಾಸವೆಂದರೆ ಬಿ.ಇಡಿ ತರಬೇತಿ ಪಡೆದ ಶಿಕ್ಷಕರು 6 ರಿಂದ 8 ನೇ ತರಗತಿಗೆ ನೇಮಕಾತಿಯಾದರೆ ಅವರಿಗೆ ವಿದಾನ ಪರಿಷತ್‌ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನದ ಹಕ್ಕು ಇಲ್ಲ!
ಆದರೆ ಅದೇ ಬಿ.ಇಡಿ ತರಬೇತಿ ಪಡೆದ ಶಿಕ್ಷಕರು ಪ್ರೌಢಶಾಲೆಗೆ ನೇಮಕಗೊಂಡರೆ ವಿದಾನ ಪರಿಷತ್‌ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹತೆ ಇದೆ!

8 ನೇ ತರಗತಿಯು ಇಂದಿಗೂ ಪ್ರೌಢಶಾಲಾ ಶಿಕ್ಷಣದ ವ್ಯಾಪ್ತಿಯಲ್ಲೇ ಬರುತ್ತದೆ!
ಆದರೆ ರಾಷ್ಟ್ರೀಯ ಶಿಕ್ಷಣ ಹಕ್ಕು ಜಾರಿಯಾದ ನಂತರ ಮಾಧ್ಯಮಿಕ ಶಾಲೆಯಲ್ಲಿ 6,7, ಮತ್ತು 8 ನೇ ತರಗತಿ ಯು ಮಾಧ್ಯಮಿಕ ಶಿಕ್ಷಣ ದ ವ್ಯಾಪ್ತಿಯಲ್ಲಿ ಬರುವುದರಿಂದ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ!

ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪ್ರೌಢ ಶಾಲಾ ಶಿಕ್ಷಣದ ಅಡಿಯಲ್ಲಿ ಬರುವ 8 ನೇ ತರಗತಿ ಬೋಧಿಸಲು ಮತ್ತು ಮಾಧ್ಯಮಿಕ ಶಿಕ್ಷಣ ದ ವ್ಯಾಪ್ತಿಯಲ್ಲಿ ಬರುವ 8 ನೇ ತರಗತಿಗೆ ಬೋಧಿಸಲು ಬಿ.ಇಡಿ ತರಬೇತಿ ಪಡೆಯಲೇಬೇಕು!
ಒಂದೇ ತರಗತಿ, ಒಂದೇ ತರಬೇತಿ ಆದರೆ ಹಕ್ಕುಗಳು ಮಾತ್ರ ತಾರತಮ್ಯದಿಂದ ಕೂಡಿದೆ!
ಇದು ಒಂದು ರೀತಿಯ ತಾರತಮ್ಯವಾದರೆ ಡಿ.ಇಡಿ ತರಬೇತಿ ಪಡೆದು 6, 7, 8 ನೇ ತರಗತಿ ಬೋಧಿಸುವ ಡಿ.ಇಡಿ ಶಿಕ್ಷಣ ತರಬೇತಿ ಪಡೆದವರು ಸಹ ಪ್ರಾಥಮಿಕ ಶಾಲೆ ಶಿಕ್ಷಣ ತರಬೇತಿ ಆಗಿದ್ದರಿಂದ ಮತದಾನದ ಹಕ್ಕನ್ನು ಹೊಂದಲು ಸಾಧ್ಯವಾಗುವುದಿಲ್ಲ!

ಇನ್ನೂ ಟಿ.ಇ.ಟಿ ಉತ್ತೀರ್ಣರಾದ ಬಳಿಕ ಸರಕಾರವೇ ತಿಳಿಸಿದಂತೆ ಶಿಕ್ಷಕರ ಅರ್ಹತೆ ಹೊಂದಿದರು ಸಹ ನೇಮಕಾತಿ ಆಗದ ಏಕೈಕ ಕಾರಣದಿಂದ ಮತದಾನದ ಹಕ್ಕಿನಿಂದ ವಂಚಿತರಾಗುತ್ತಾರೆ!
ಟಿ.ಇ.ಟಿ ಪರೀಕ್ಷೆಗೆ ಹಾಜರಾದವರ ಸಂಖ್ಯೆಯೇ 3.5 ಲಕ್ಷ!
ಪ್ರಾಥಮಿಕ ಶಾಲೆ ಶಿಕ್ಷಕರು ( ನೇಮಕಾತಿ ಆದವರು) ಸಂಖ್ಯೆ 1.60 ಸಾವಿರ!
ಅತಿಥಿ ಶಿಕ್ಷಕರು 50 ಸಾವಿರ!
ಅತಿಥಿ ಉಪನ್ಯಾಸಕರು 15 ಸಾವಿರದಷ್ಟಿದ್ದಾರೆ!
ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಶಿಕ್ಷಕರು ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರಣ ಮತ್ತು ಪ್ರತಿವರ್ಷ ಸೇವೆಯ ನವೀಕರಣ ಅಥವಾ ಮರು ಅರ್ಜಿಯ ಸಲ್ಲಿಕೆಯ ಪ್ರಕ್ರಿಯೆಗೆ ಒಳಪಡುವುದರಿಂದ ಅತಿಥಿ ಉಪನ್ಯಾಸಕರು ಸಹ ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ!
ಆದರೆ ರಾಜ್ಯ ವಿದಾನ ಪರಿಷತ್‌ ನ ಏಳು ಶಿಕ್ಷಕರ ಕ್ಷೇತ್ರಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಶಿಕ್ಷಕರ ಸಂಖ್ಯೆ ಅಂದಾಜು ಕೇವಲ ಒಂದು ಲಕ್ಷದ ವರೆಗೆ ಮಾತ್ರ!

ಅಂದರೆ ಒಂದು ಲಕ್ಷದಷ್ಟಿರುವ ಶಿಕ್ಷಕ ಮತದಾರರು ಲಕ್ಷ ಲಕ್ಷ ಸಂಖ್ಯೆಯಲ್ಲಿರುವ ಶಿಕ್ಷಕರ ಕ್ಷೇತ್ರವನ್ನು ನಿರ್ಧರಿಸುತ್ತಾರೆ!
ಪ್ರಜಾಪ್ರಭುತ್ವ ವ್ಯವಸ್ಥೆಯ ಬಹುಮುಖ್ಯ ಆಶಯವೇ ತಮ್ಮ ಪ್ರತಿನಿಧಿಗಳನ್ನು ತಾವು ಆಯ್ಕೆ ಮಾಡಿಕೊಳ್ಳುವುದಾಗಿದೆ!
ಆದರೆ ಈ ನಿಯಮ ಶಿಕ್ಷಕರ ವಿಷಯದಲ್ಲಿ ಸುಳ್ಳಾಗಿದೆ!
ಇದು ಕೇವಲ ಶಿಕ್ಷಕರ ಕ್ಷೇತ್ರದ ಚುನಾವಣೆಯ ವಿಷಯವಲ್ಲ!
ಪದವೀಧರರ ಕ್ಷೇತ್ರದ ವಿಷಯದಲ್ಲೂ ಸಹ ಪದವೀಧರ ಯುವ ಸಮೂಹವನ್ನು ಚುನಾವಣಾ ವ್ಯವಸ್ಥೆಯಿಂದಲೇ ದೂರ ಇಡಲಾಗಿದೆ!
ಬೌದ್ಧಿಕ ಸಂಪತ್ತಿನ ಶಿಕ್ಷಕರು, ಪದವೀಧರರು, ನ್ಯಾಯವಾದಿಗಳು, ವೈದ್ಯರು ಹೀಗೆ ನಾನಾ ವಿಭಾಗಗಳಿಂದ ತಜ್ಞರನ್ನು ವಿದಾನ ಪರಿಷತ್‌ ಗೆ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಅಳಿಸಿಹಾಕಿ ನೇರ ಚುನಾವಣೆಯಲ್ಲಿ ಸೋತವರನ್ನು ತಂದು ವಿದಾನ ಪರಿಷತ್‌ ಗೆ ಆಯ್ಕೆ ಮಾಡಲಾಗುತ್ತಿದೆ!
ಒಟ್ಟಾರೆ ಚಿಂತಕರ ಛಾವಡಿಯಾಗಿದ್ದ ವಿದಾನ ಪರಿಷತ್ತನ್ನು ರಾಜಕೀಯ ನಿರಾಶ್ರಿತರ ಶಿಬಿರವನ್ನಾಗಿ ಮಾಡಲಾಗಿದೆ!

ಮಕ್ಕಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಪಾಟ ಮಾಡುವ ಶಿಕ್ಷಕರೇ ಮತದಾನದ ಹಕ್ಕಿನಿಂದ ವಂಚಿತರಾದರೆ ವಿದಾನ ಪರಿಷತ್‌ ಶಿಕ್ಷಕರ ಕ್ಷೇತ್ರದ ಪರಿಪೂರ್ಣವಾಗಿ ಶಿಕ್ಷಕರ ಕ್ಷೇತ್ರವಾಗುತ್ತದೆಯೇ?

ಪದವೀಧರರು, ಪ್ರಶಿಕ್ಷಣಾರ್ಥಿಗಳು, ವಯೋಮಿತಿ ಮೀರುತ್ತಿರುವ ಶಿಕ್ಷಕರು, ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ವಿದಾನ ಪರಿಷತ್‌ ನಲ್ಲಿ ಏಕೆ ಧ್ವನಿ ಕೇಳುವುದಿಲ್ಲ?

ಯೋಚಿಸಿ ಸಾರ್ವತ್ರಿಕ ಚುನಾವಣೆಗಳೆಂದರೆ ಷೇರುದಾರರ ಚುನಾವಣೆಯಂತೆ ನಿಯಮಿತ ವರ್ಗಕ್ಕೆ ಮಾತ್ರ ಸೀಮಿತವಲ್ಲ, ಯಾರ ಪರವಾಗಿ ಪ್ರತಿನಿಧಿಗಳ ಅವಶ್ಯಕತೆ ಇದೆಯೋ ಅಂತಹವರನ್ನು ಆಯ್ಕೆ ಮಾಡುವ ಅವಕಾಶ ನೀಡಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಹತ್ವ ಬರುತ್ತದೆ!

ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ – ಕರ್ನಾಟಕ ಗಂಭೀರವಾಗಿ ಯೋಚಿಸುತ್ತಿದೆ!

ಭಾರತ ಸಂವಿಧಾನದ ಅನುಚ್ಛೇದ 171(3) ಅವೈಜ್ಞಾನಿಕವಾಗಿದ್ದು ಸಂಪೂರ್ಣವಾಗಿ ತಿದ್ದುಪಡಿಯಾಗಲೇಬೇಕಿದೆ! ಎಂದು ಭಾಸ್ಕರ ಎಂ ಮುದೇನೂರು ಅವರು ತಿಳಿಸಿದರು.

ಸಂಪಾದಕರು: ರಾಮಚಂದ್ರಪ್ಪ ಪೂಜೇರ

ವರದಿ:ಭಾಸ್ಕರ ಎಂ ಮುದೇನೂರು

ಹೆಚ್ಚಿನ ಸುದ್ದಿ