ಲೇಖಕರು: ಭಾಸ್ಕರ ಮುದೇನೂರು ರಾಜ್ಯಾಧ್ಯಕ್ಷರು ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ
ಒಂದಾನೊಂದು ಕಾಲದಲ್ಲಿ ವಿದಾನ ಪರಿಷತ್ತು ಚಿಂತಕರ ಛಾವಡಿಯಾಗಿತ್ತು! ಆದರೆ ಇಂದು ರಾಜಕೀಯ ನಿರಾಶ್ರಿತರ ಶಿಬಿರವಾಗಿದೆ!
ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ, ಪ್ರಜೆಗಳಿಂದ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ವ್ಯವಸ್ಥೆಯೇ ಹೊರತು ಪ್ರತಿನಿಧಿಗಳು ತಮ್ಮ ಪರವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಾದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವಿರುತ್ತದೆಯೇ??
ಪ್ರತಿನಿಧಿಗಳು ( ಶಾಸಕರು) ತಮ್ಮ ಪ್ರತಿನಿಧಿಗಳಾಗಿ ವಿದಾನ ಪರಿಷತ್ ಗೆ ಆಯ್ಕೆ ಮಾಡುವುದಾದರೆ ಇಲ್ಲಿ ನಮಗೆ ಯಾರ ಅವಶ್ಯಕತೆ ಇದೆ?
ಶಾಸಕರದ್ದೋ ಅಥವಾ ಶಾಸಕರು ಆಯ್ಕೆ ಮಾಡಿದ ಪ್ರತಿನಿಧಿಗಳದ್ದೋ? ( ವಿದಾನ ಪರಿಷತ್ ಸದಸ್ಯರು) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಪರವಾಗಿ, ಪ್ರಜೆಗಳ ಧ್ವನಿಯಾಗಲು ಪ್ರತಿನಿಧಿಗಳು ಇರಬೇಕಾಗುತ್ತದೆ, ಆದರೆ ಇಂದು ವಿದಾನ ಪರಿಷತ್ ನ ಆಯ್ಕೆ ಪ್ರಕ್ರಿಯೆಯನ್ನು ಗಮನಿಸಿದರೆ ಯಾರ ಪರವಾಗಿ ಧ್ವನಿ ಇರಬೇಕಾಗಿತ್ತೋ, ಯಾರ ಸಮಸ್ಯೆಗಳನ್ನು ಪರಿಹರಿಸಲು ಪ್ರತಿನಿಧಿಗಳು ಆಯ್ಕೆಯಾಗಬೇಕಾಗಿತ್ತೋ ಆ ಎಲ್ಲಾ ಬಹುಸಂಖ್ಯಾತ ಸಮೂಹಗಳು ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗುಳಿದಿವೆ!
ಯಾರು ವ್ಯವಸ್ಥೆಯ ಭಾಗವಾಗಿದ್ದಾರೋ ಅವರೆಲ್ಲರೂ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದಾರೆ!
ವಯೋಮಿತಿ ಮೀರುತ್ತಿರುವ ಪದವೀಧರರು, ನೇಮಕಾತಿ ನಿರೀಕ್ಷೆಯಲ್ಲಿರುವ ಶಿಕ್ಷಣ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳು, ಚುನಾವಣಾ ಪ್ರಕ್ರಿಯೆಯಿಂದಲೇ ಹೊರಗುಳಿದಿದ್ದಾರೆ! ಅತಿಥಿ ಉಪನ್ಯಾಸಕರು, ಅತಿಥಿ ಶಿಕ್ಷಕರು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ಪದವೀಧರರು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಇವರ ಪರವಾಗಿ ಯಾರಿದ್ದಾರೆ?
ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು, ಪದವೀಧರ ಸರಕಾರಿ ಉದ್ಯೋಗಿಗಳು ಚುನಾವಣೆಯ ಭಾಗವಾಗಿದ್ದಾರೆ.
ಜನರಿಂದಲೇ ಆಯ್ಕೆಯಾದ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು, ಜನರಿಂದಲೇ ಆಯ್ಕೆಯಾದ ಶಾಸಕರು ವಿದಾನ ಪರಿಷತ್ ಚುನಾವಣೆಯ ಭಾಗವಾಗಿದ್ದಾರೆ!
ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಾಗಲಿ, ಶಾಸಕರಾಗಲಿ ಇವರೆಲ್ಲರೂ ಜನರ ಪರವಾಗಿ ಆಯ್ಕೆಯಾದ ಪ್ರತಿನಿಧಿಗಳು!
ಇವರ ಪರವಾಗಿ ವಿದಾನ ಪರಿಷತ್ ನಲ್ಲಿ 50 ಜನರಿದ್ದಾರೆ!
ಅನುಚ್ಛೇದ 171(3)(a) ಮತ್ತು (d) ಅಡಿಯಲ್ಲಿ 1/3 ರಷ್ಟು ಜನಪ್ರತಿನಿಧಿಗಳು ಸ್ಥಳೀಯ ಸಂಸ್ಥೆ ಹಾಗೂ ವಿದಾನ ಸಭೆ ಸದಸ್ಯರಿಂದ ಆಯ್ಕೆಯಾಗುತ್ತಿದ್ದಾರೆ!
ಇದರಲ್ಲಿ ಎಷ್ಟು ಜನ ಸಂಶೋಧಕರು, ವಿಷಯ ತಜ್ಞರು ಆಯ್ಕೆಯಾಗುತ್ತಾರೆ?
ಅಧಿಕಾರ ವಂಚಿತ ರಾಜಕಾರಣಿಗಳು ರಾಜಕಾರಣಿಗಳ ಪರವಾಗಿ ನೇರವಾಗಿ ವಿದಾನ ಪರಿಷತ್ ನಲ್ಲಿ ಆಯ್ಕೆಯಾಗುವುದಾದರೆ
ಜನಸಾಮಾನ್ಯರ ಪರವಾಗಿ, ಪದವೀಧರರ ಪರವಾಗಿ, ಶಿಕ್ಷಣ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳ ಪರವಾಗಿ ರೈತರ ಪರವಾಗಿ, ವೈದ್ಯರ ಪರವಾಗಿ, ನ್ಯಾಯವಾದಿಗಳ ಪರವಾಗಿ ಯಾರು ಆಯ್ಕೆಯಾಗುತ್ತಿದ್ದಾರೆ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಪರವಾಗಿ ಪ್ರತಿನಿಧಿಗಳು ಇರಬೇಕೇ ಹೊರತು ಪ್ರತಿನಿಧಿಗಳ ಪರವಾಗಿ ಪ್ರತಿನಿಧಿಗಳು ಅಲ್ಲ!
ಯೋಚಿಸಿ ಅನುಚ್ಛೇದ 171(3) ತಿದ್ದುಪಡಿ ಗೆ ಆಗ್ರಹಿಸಿ!
ಭಾಸ್ಕರ ಮುದೇನೂರು
ರಾಜ್ಯಾಧ್ಯಕ್ಷರು
ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿ
