
ಲಿಂಗಸೂಗೂರು ವರದಿ
ಲಿಂಗಸುಗೂರ. ತಾಲೂಕಿನ ಅಧಿಕಾರಿಗಳ ಬೇಜವಾಬ್ದಾರಿಯಿಂದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿಕಾರಿಗಳ ಸಭೆಗೆ ಸ್ಥಳೀಯ ಪತ್ರಕರ್ತರನ್ನು ಮಾಧ್ಯಮದವರನ್ನು ಆಹ್ವಾನಿಸದೆ ದೂರವಿಟ್ಟು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಗೌಪ್ಯ ಸಭೆ ನಡೆಸಿದ್ದು ವಿಶೇಷವಾಗಿತ್ತು
ತಾಲೂಕು ಪಂಚಾಯತ ಹಾಗೂ ಸಿಡಿಪಿಒ ತಾಲೂಕು ಅಡಳಿತ ಸಹಯೋಗದಲ್ಲಿ ತಾಲೂಕು ಪಂಚಾಯತ ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆ ಆಯೋಜಿಸಲಾಗಿತ್ತು ಮಕ್ಕಳ ಹಕ್ಕುಗಳ ಆಯೋಗದ ಸದ್ಯಸರಾದ ವೆಂಕಟೇಶ ಹಾಗೂ ಡಾ.ತಿಪ್ಪೆಸ್ವಾಮಿ ಭಾಗವಹಿಸಿ ಸಭೆಗೆ ಪರ್ತ್ರಕರ್ತರನ್ನು ಆಹ್ವಾನಿಸಲು ತಿಳಸಲಾಗಿತ್ತು. ಆದರೆ ಸಭೆಗೆ ಮಾತ್ರ ಪತ್ರಕರ್ತರನ್ನು ಆಹ್ವನಿಸದಿರುವುದು ಸ್ಥಳಿಯ ಅಧಿಕಾರಿಗಳ ಕೈವಾಡವೊ ಅಥವ ತನಿಖಾಧಿಕಾರಿಗಳ ಮುಂದೆ ತಮ್ಮ ಇಲಾಖೆಗಳ ಬಂಡವಾಳ ಹೊರಬರಬಹುದೆಂಬ ಭಯವೊ ತಿಳಿಯದಾಗಿದೆ ಯಾವುದೇ ಸರಕಾರಿ ಸಭೆಗಳಿಗೆ ಪತ್ರಕರ್ತ ರನ್ನು ಆಹ್ವಾನಿಸದೆ ಕೇವಲ ವ್ಯಾಟ್ಸಾಪ್ ಗ್ರೂಪ್ ಗಳಿಗೆ ಮೆಸೇಜ ಗಳನ್ನು ಹಾಕಿ ಬಿಟ್ಟು ಬಿಡುತ್ತಾರೆ ಲಿಂಗಸೂಗೂರು ತಾಲೂಕಿನ ಸರಕಾರಿ ಕಚೇರಿಗಳ ಅಧಿಕಾರಿಗಳ ನಿರ್ಲಕ್ಷ ಎನ್ನಬಹುದು ? ಅಷ್ಟೇ.
