
- ನೇಮಕಾತಿಯ ನೇತೃತ್ವವನ್ನು ಕಲ್ಬುರ್ಗಿ ಜಿಲ್ಲಾಧ್ಯಕ್ಷರು ರಾಜು ದೊರೆ ವಹಿಸಿದರು.
- ಚಿತ್ತಾಪೂರ ತಾಲೂಕು ಘಟಕದ ನೂತನ ಅಧ್ಯಕ್ಷರು ಬಾಬು, ಉಪಾಧ್ಯಕ್ಷರು ಶಿರಶಪ್ಪ, ಪ್ರಧಾನ ಕಾರ್ಯದರ್ಶಿ ಮಹಬೂಬ್, ಸಹಕಾರ್ಯದರ್ಶಿ ಶರಪ್ಪ,ಸಹಕಾರ್ಯದರ್ಶಿ ವಿಶ್ವನಾಥ, ಸಂಘಟನಾ ಕಾರ್ಯದರ್ಶಿ ಮಲ್ಲಣ್ಣ, ಜಂಟಿ ಕಾರ್ಯದರ್ಶಿ ಶಿವಕುಮಾರ್ ರವರನ್ನು ನೇಮಕ ಮಾಡಲಾಯಿತು.
- ಪದಾಧಿಕಾರಿಗಳ ಮಹತ್ವದ ನೇಮಕಾತಿ ಘೋಷಣೆ ಕಾರ್ಯಕ್ರಮದ ನಂತರ ಮಾತನಾಡಿದ ಕಲಬುರ್ಗಿ ಜಿಲ್ಲಾಧ್ಯಕ್ಷರಾದ ರಾಜು ದೊರೆ ರವರು, ರಾಜ್ಯದ ಕಟ್ಟಕಡೆಯ ಕಾರ್ಮಿಕರಿಗೆ ಸರ್ಕಾರದಿಂದ ಮೂಲಭೂತ ಸವಲತ್ತುಗಳನ್ನು ತಲುಪಿಸಬೇಕೇಂಬುದೆ ನೆರವು ಸಂಸ್ಥೆಯ ಗುರಿ ಹಾಗೂ “ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ನಮ್ಮ ನೆರವು ಸಂಘಟನೆ ಸದಾಕಾಲ ಕಾರ್ಮಿಕರ ಜೊತೆಯಾಗಿ ನಿಲ್ಲುತ್ತದೆ,” ಎಂದು ಹೇಳಿದರು.

- ಈ ಸಂಧರ್ಭದಲ್ಲಿ ಸಭೆಯಲ್ಲಿ ಯಾದಗಿರಿ ಜಿಲ್ಲಾಧ್ಯಕ್ಷರು ಗೋಪಾಲ್ ದೊರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ, ರಾಯಚೂರ್ ಜಿಲ್ಲಾ ಕಾರ್ಯದರ್ಶಿ ಈರಪ್ಪ ವಲ್ಕಂದಿನ್ನಿ,
ಮಾನವಿ ತಾಲೂಕು ಅಧ್ಯಕ್ಷರು ರಮೇಶ ಕವಿತಾಳ, ಜೇವರ್ಗಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಂದೇ ನವಾಜ್, ಉಪಾಧ್ಯಕ್ಷರು ಶಿವಕುಮಾರ್, ಸಹ ಕಾರ್ಯದರ್ಶಿ ಬಾವುದ್ದೀನ್ ಸಿದ್ದು ಮದನ್ಕರ್ ರಾಜಶೇಖರ್ ವಿಶ್ವನಾಥ್ ಶರಣಪ್ಪ ಇನ್ನು ಮುಂತಾದ ಗಣ್ಯರು ಮತ್ತು ತಾಲೂಕಿನ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.

ವರದಿ : ಶಿವು ರಾಠೋಡ.
