Wednesday, June 3, 2026
HomeUncategorizedನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್ ಮುಂಡಗೋಡದಲ್ಲಿ ಸಂಭ್ರಮಾಚರಣೆ..

ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ ಶಿವಕುಮಾರ್ ಮುಂಡಗೋಡದಲ್ಲಿ ಸಂಭ್ರಮಾಚರಣೆ..

ಮುಂಡಗೋಡ: ಕರ್ನಾಟಕ ಅಭಿವೃದ್ಧಿ ಕಾಣಲು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು ಸಂತೋಷದ ಸುದ್ದಿ, ಕಾಂಗ್ರೆಸ್ ಪಕ್ಷ ಮುನ್ನಡಿಸಲು ಇವರಂತಹ ನಾಯಕರು ಬೇಕು ಮುಂಡಗೋಡ್ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಎಚ್ ಹಿರೇಹಳ್ಳಿಅವರು ಹೇಳಿದರು.

ತಾಲೂಕಿನ ಶಿವಾಜಿ ಸರ್ಕಲ್ ನಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಅಧ್ಯಕ್ಷರಾದ ಕೃಷ್ಣ ಎಚ್ ಹಿರೇಹಳ್ಳಿಯವರ ಅವರ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಹರ್ಷ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಬಡ ಹಾಗೂ ದಲಿತರ ಮೇಲೆ ಕಾಳಜಿ ತೋರಿ ಎಲ್ಲರಿಗೂ ಸಹಕರಿಸುವ ಭಾವನೆ ಮೂಡಿಸುವವರು. ಗ್ಯಾರೆಂಟಿ ಸರ್ಕಾರಕ್ಕೆ ಹೊಸ ಅಧ್ಯಾಯ ಸೃಷ್ಟಿಯಲ್ಲಿ ಇವರ ಪಾತ್ರ ಮುಖ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ. ಧರ್ಮರಾಜ್ ನಡಿಗೇರಿ ಸಿದ್ದಪ್ಪ ಹಡಪದ. ರವಿ ಗೌಡ ಪಾಟೀಲ್. ಕೆಂಜೊಡಿ ಗಲಬಿ . ಎಚ್ ಎಂ ನಾಯಕ್. ಪಕ್ಷದ ಕಾರ್ಯಕರ್ತರು ಉಪಸ್ಥಿತಿ ಇದ್ದರು..

ವರದಿ. ಬಸಯ್ಯ ಎಸ್ ತೋಟಯ್ಯನವರ .

ಹೆಚ್ಚಿನ ಸುದ್ದಿ