Monday, February 9, 2026
Homeಟಾಪ್ ನ್ಯೂಸ್ನಾನು ಕಾಂಗ್ರೆಸ್ ನಿಯಮವನ್ನು ಉಲ್ಲಂಘಿಸಿಲ್ಲ: ಶಶಿ ತರೂರ್ ಮಹತ್ವದ ಹೇಳಿಕೆ...

ನಾನು ಕಾಂಗ್ರೆಸ್ ನಿಯಮವನ್ನು ಉಲ್ಲಂಘಿಸಿಲ್ಲ: ಶಶಿ ತರೂರ್ ಮಹತ್ವದ ಹೇಳಿಕೆ…

ನವದೆಹಲಿ: ಕಾಂಗ್ರೆಸ್ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಲಹದ ನಡುವೆ, ಪಕ್ಷದ ಹಿರಿಯ ನಾಯಕ ಮತ್ತು ತಿರುವನಂತಪುರಂ ಸಂಸದ ಶಶಿ ತರೂರ್ ಮೌನ ಮುರಿದಿದ್ದಾರೆ. ಟೀಕಾಕಾರರಿಗೆ ಸ್ಪಷ್ಟವಾಗಿ ತಿರುಗೇಟು ನೀಡಿದ್ದು ನಾನು ಎಂದಿಗೂ ಪಕ್ಷದ ರೇಖೆಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಸಂಸದ ಆಪರೇಷನ್ ಸಿಂಧೂರ್ ಬಗ್ಗೆ ಹೇಳಿಕೆಗಳನ್ನು ನೀಡಿದ್ದು ಅದು ಪಕ್ಷದ ನಾಯಕತ್ವಕ್ಕೆ, ವಿಶೇಷವಾಗಿ ರಾಹುಲ್ ಗಾಂಧಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಆಪರೇಷನ್ ಸಿಂಧೂರ್ ಬಗ್ಗೆ ತರೂರ್ ಅವರ ನಿಲುವು ಪಕ್ಷದೊಳಗಿನ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಬಹುದು.

ಕೇರಳ ಸಾಹಿತ್ಯ ಉತ್ಸವದ ಸಂದರ್ಭದಲ್ಲಿ ಕೋಝಿಕ್ಕೋಡ್‌ನಲ್ಲಿ ನಡೆದ ಸಂವಾದ ಅಧಿವೇಶನದಲ್ಲಿ ಮಾತನಾಡಿದ ತರೂರ್, ಸಂಸತ್ತಿನಲ್ಲಿ ನಾನು ಕಾಂಗ್ರೆಸ್ ನಿಮಯವನ್ನು ಉಲ್ಲಂಘಿಸಿಲ್ಲ. ರಾಷ್ಟ್ರೀಯ ಭದ್ರತಾ ವಿಷಯಗಳ ಬಗ್ಗೆ ತಮ್ಮ ನಿಲುವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ವಿಷಯದ ಬಗ್ಗೆ ಸಾರ್ವಜನಿಕವಾಗಿ ತಾತ್ವಿಕ ಭಿನ್ನಾಭಿಪ್ರಾಯವನ್ನು ಮಾತ್ರ ವ್ಯಕ್ತಪಡಿಸಿದ್ದೇನೆ. ಆ ನಿಲುವಿನ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಎಂದು ಸ್ಪಷ್ಟಪಡಿಸಿದರು. ಪಕ್ಷದ ನಾಯಕತ್ವದೊಂದಿಗಿನ ಅವರ ಭಿನ್ನಾಭಿಪ್ರಾಯಗಳ ಬಗ್ಗೆ ಇತ್ತೀಚೆಗೆ ಊಹಾಪೋಹಗಳು ತೀವ್ರಗೊಂಡಿರುವ ಸಮಯದಲ್ಲಿ ಅವರ ಹೇಳಿಕೆ ಬಂದಿದೆ.

ಹೆಚ್ಚಿನ ಸುದ್ದಿ