
ಸುರಪುರ ಸುದ್ದಿ :
ಮಹಾನ್ ಸಂತ ಭಕ್ತಿಯ ಹರೀಕಾರ ಭಕ್ತ ಕನಕದಾಸರ ಜಯಂತಿಯನ್ನು ತಳ್ಳಳ್ಳಿ (ಕೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಶೆಟ್ಟಿ ಸತೀಶ್ ಪಾಟೀಲ್ ರವರು ಮಾತನಾಡಿ ಸಂತ ಭಕ್ತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನಾಡಿನೆಲ್ಲೆಡೆ ಜನಮಾನಸದಲ್ಲಿ ಅಜರಾಮರಾಗಿ ಅಚ್ಚಳಿಯದಂತೆ ಉಳಿದಿದ್ದಾರೆ, ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ ನಂತರದ ದಿನಗಳಲ್ಲಿ ಕನಕದಾಸರಾಗಿ ಬದಲಾದರು, ಕನಕದಾಸರ ಹೆತ್ತವರು ತಿರುಪತಿ ತಿಮ್ಮಪ್ಪನಿಗೆ ಹರಕೆಯನ್ನು ಹೊತ್ತಿದ್ದರು, ಹರಕೆಯ ಪ್ರತಿ ಫಲವಾಗಿ ಕನಕದಾಸರು ಜನಿಸಿದರೆಂದು ಪ್ರತೀತಿ ಇದೆ ಎಂದರು.
ಯುವ ಪತ್ರಕರ್ತ ರಾಘವೇಂದ್ರ ಮಾಸ್ತರ ಮಾತನಾಡಿ ಕನಕದಾಸರ ಕೀರ್ತನೆಗಳಿಗೆ ಅಗಾಧವಾದ ಶಕ್ತಿಯಿದ್ದು, ತಮ್ಮ ಕೀರ್ತನೆಗಳಿಂದ ಸಾಕ್ಷಾತ್ ಶ್ರೀ ಕೃಷ್ಣನನ್ನೆ ಒಲಿಸಿಕೊಂಡು ತನ್ನತ್ತ ಹಿಂದಿರುಗಿ ದರ್ಶನ ನೀಡುವಂತೆ ಮಾಡಿದವರು, ಹಾಗಾಗಿ ಈಗಲೂ ಕೂಡ ಉಡುಪಿಯಲ್ಲಿ ನೋಡಲು ಶ್ರೀ ಕೃಷ್ಣನ ದೇವಸ್ಥಾನದ ಹಿಂಬದಿಯಲ್ಲಿ ಕನಕನ ಕಿಂಡಿ ನೋಡಲು ಸಿಗುತ್ತದೆ ಎಂದರು. ಕನಕದಾಸರು
ಮನುಕುಲಕ್ಕೆ ಸಾರ್ವಕಾಲಿಕವಾದ ಜೀವನಾದರ್ಶ ನೀಡಿದವರಾಗಿದ್ದು ವಿಧ್ಯಾರ್ಥಿಗಳೆಲ್ಲರೂ ಭಕ್ತ ಕನಕದಾಸರ ತತ್ವ, ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಏಳಿಗೆ ಹೊಂದುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಗೋಪರೆಡ್ಡಿ ಕಾಕರಕಲ್, ಮೌನೇಶ ಆಲಗೂರ, ರಾಚಪ್ಪ ಕಮತಗಿ, ದೇವಿಂದ್ರಪ್ಪ ದೊರಿ, ಯಂಕಣ್ಣ ದೇವಿಕೇರಿ,ಸಾಬಣ್ಣ ದೊರೆ, ಮುದಕಪ್ಪ ಕಡಿಮನಿ, ರೇವಣ್ಣ ಮುತ್ಯಾ ಗುಂಡಳ್ಳಿ, ಕರೆಪ್ಪ ಮಾಲಗತ್ತಿ, ಚನ್ನಪ್ಪಗೌಡ,ಮಲ್ಲು ದೇವಿಕೇರಿ, ಮಲ್ಲು ಮಾಲಗತ್ತಿ,ವಿಶ್ವ,ಅಪ್ಪು ಸೇರಿದಂತೆ ಇತರರು ಇದ್ದರು.
ಅತಿಥಿ ಶಿಕ್ಷಕರಾದ ಮಲ್ಲಿಕಾರ್ಜುನ,ಪಾರ್ವತಿ ದೇವರಮನಿ, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಅತಿಥಿ ಶಿಕ್ಷಕರಾದ ಬಸನಗೌಡರವರು ನಿರೂಪಿಸಿ, ವಂದಿಸಿದರು.
ವರದಿಗರರು : ಶಿವು ರಾಠೋಡ್ ಯಾದಗಿರಿ
