Sunday, September 13, 2026
Homeಕ್ರೈಂ ಸುದ್ದಿಗಳುಅಪರಾಧ ಪ್ರಕರಣಗಳುಟಿಬೆಟಿಯನ್ ಕಾಲೋನಿಯಲ್ಲಿ ಕಳ್ಳತನ : ಪರಿಶೀಲಿಸಿದ ಪೊಲೀಸ ಅಧಿಕಾರಿಗಳು

ಟಿಬೆಟಿಯನ್ ಕಾಲೋನಿಯಲ್ಲಿ ಕಳ್ಳತನ : ಪರಿಶೀಲಿಸಿದ ಪೊಲೀಸ ಅಧಿಕಾರಿಗಳು

… ಮುಂಡಗೋಡ್ : ಬೌದ್ಧ ಬೀಕ್ಕುಗಳ ನಿರಾಶ್ರಿತ ವಸತಿ ಕೇಂದ್ರವಾಗಿರುವ ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಲ್ಲಿ ಮನೆ ಕಳ್ಳತನ ನಡೆದಿದೆ…….. ಟಿಬೆಟಿಯನ್ ಕ್ಯಾಂಪ್ ನಂಬರ್ 4 ಮನೆ ನಂಬರ್ 76 ರಲ್ಲಿ ನೋವಾಂಗ ತೆಂಡೂನ ಹಾಗೂ ತoಜನ್ ಜೋರ ಗಾಲ್ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಮುಂದಿನ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು. ರೂಮನಲ್ಲಿ ನ ಟಿಜೇರಿ ಬಾಗಿಲ ಹೊಡೆದು ಒಂದುವರೆ ಲಕ್ಷ ರೂಪಾಯಿ ಮೌಲ್ಯದ 15 ಗ್ರಾ o ಬಂಗಾರದ ಸರ . ಎರಡುವರೆ ಲಕ್ಷ ರೂಪಾಯಿ ಮೌಲ್ಯದ 25 ಗ್ರಾಂ ಬಂಗಾರದ ಬಿಸ್ಕೆಟ್ ಚೈನ್ , 40,000 ಮೌಲ್ಯದ ಏಳು ಬೆಳ್ಳಿಯ ಬೌಲ , 20,000 ಮೌಲ್ಯದ ಬೆಳ್ಳಿಯ ದೀಪ ಸೇರಿದಂತೆ ಒಟ್ಟು ನಾಲ್ಕು ಲಕ್ಷ 60000 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಯ ಕಳುವುವಾಗಿದೆ.

ಘಟನೆ ಸಪ್ಟೆಂಬರ್ 8ರ ಮಧ್ಯಾಹ್ನ 3 ಗಂಟೆಯಿಂದ ಸಪ್ಟೆಂಬರ್ 9ರ ಸಂಜೆ ಆರು ಗಂಟೆಯ ನಡುವಿನ ಅವಧಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಇತ್ತೀಚಿನ ವರ್ಷಗಳಲ್ಲಿ ಟಿಬೆಟಿಯನ್ ಕ್ಯಾಂಪ್ ನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತ ಇದ್ದು. ಕೆಲ ತಿಂಗಳ ಹಿಂದೆ ಹಣಕ್ಕಾಗಿ ಓವರ್ ಬೌದ್ಧ ಬಿಕ್ಕು ವನ್ನು ಅಪಹರಣ ಮಾಡಿ ಕೊಲೆ ಮಾಡಲಾಗಿತ್ತು . ಟಿಬೆಟಿಯನ್ ಬೌದ್ಧ ಬಿಕ್ಕುಗಳು ತಾಲೂಕಿನಲ್ಲಿ ಆಶ್ರಯ ಪಡೆದಿರುವುದರಿಂದ , ಏನೇ ಘಟನೆ ಸಂಭವಿಸಿದರು ಅದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಾ ಇದ್ದು.. ಈ ಘಟನೆಗಳನೀ ಆಧಾರವಾಗಿಟ್ಟುಕೊಂಡು ಭಾರತ ವಿರೋಧಿ ರಾಷ್ಟ್ರಗಳಿಂದ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ವಿರುದ್ಧ ವ್ಯಾಪ್ತಕ ಅಪಪ್ರಚಾರ ಮಾಡಲಾಗುತ್ತಿದ್ದ. ಆದಕಾರಣ ಜಿಲ್ಲಾ ಆಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುವುದು ಸಾರ್ವಜನಿಕರು ಆಗ್ರವಾಗಿದೆ. –

ವರದಿ : ಬಿ ಎಸ್ ತೊಟಯ್ಯನವರ

ಹೆಚ್ಚಿನ ಸುದ್ದಿ