Monday, February 9, 2026
HomeUncategorizedಕೊಡೇಕಲನಲ್ಲಿ ಜೋಡು ಪಲ್ಲಕ್ಕಿ ಉತ್ಸವ : ಶ್ರೀ ವೃಷಭಂದ್ರ ಅಪ್ಪನವರ.

ಕೊಡೇಕಲನಲ್ಲಿ ಜೋಡು ಪಲ್ಲಕ್ಕಿ ಉತ್ಸವ : ಶ್ರೀ ವೃಷಭಂದ್ರ ಅಪ್ಪನವರ.

ಕೊಡೇಕಲ್: ಇಂದು ಕಾಲಜ್ಞಾನಿ ಕೊಡೇಕಲ್ ಬಸವಣ್ಣನವರ ಜೋಡು ಪಲ್ಲಕ್ಕಿಯ ಮಹೋತ್ಸವವು ಭಾನುವಾರ ಭಕ್ತ ಸಾಗರ ಜಯಘೋಷದೊಂದಿಗೆ ಭಕ್ತಿ-ಸಂಭ್ರಮದಿಂದ ಜರುಗಿತು…..

ಸ್ಥಳೀಯ ಬಸವಪೀಠದ 15ನೇ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪನವರು ನೇತತ್ವದಲ್ಲಿ ಹುಣ್ಣಿಮೆ ದಿನ ಜೋಡು ಪಲ್ಲಕ್ಕಿಗಳಿಗೆ ಚಿನ್ನ ಹಾಗೂ ಬೆಳ್ಳಿಯ ಕಳಸಾರೋಹಣ, ಅಷ್ಟವಿಧಾರ್ಚನೆಯ ಕಾಲಜ್ಞಾನ ವಚನಗಳ ಮಾಲಿಕೆಯಲ್ಲಿ ಪೂಜಾಧಿ ಕೈಂಕರ್ಯಗಳು, ಅಹೋರಾತ್ರಿ

ಭಾನುವಾರ ಬೆಳಗ್ಗೆ ಬಸವಣ್ಣನವರ ಐಕ್ಯ ಸ್ಥಳ (ಊರಾನ ಗುಡಿ)ಯ ರಾಜಗಟ್ಟೆಯ ಮೇಲೆ ಅಲಂಕಾರ ಭೂಷಣವಾಗಿ ಕೂರಿಸಿದ್ದ ಜೋಡು ಪಲ್ಲಕ್ಕಿಗಳಿಗೆ ಶ್ರೀ ವೃಷಭಂದ್ರನಾಥ ಅಪ್ಪನವರು ಹಾಗೂ ಅರಸು ಮನೆತನದ ರಾಜಾ ಜೀತೇಂದ್ರನಾಯಕ ಹಾಗೂ ರಾಜಾ ವೆಂಕಟಪ್ಪನಾಯಕ ಜಹಾಗೀರದಾರ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು.

ನೆರೆದಿದ್ದ ಭಕ್ತರು ಕೊಡೇಕಲ್ ಚೆನ್ನ ಬಸವಣ್ಣ ಮಹಾರಾಜಕೀ ಜೈ …,ಭಕ್ತಿಯ ಜಯ ಘೋಷಣೆಯೊಂದಿಗೆ ಜೋಡು ಪಲ್ಲಕ್ಕಿ ಉತ್ಸವ ಸಾಗುತ್ತಿದ್ದಂತೆ, ದಾರಿಯುದ್ದಕ್ಕೂ ಭಕ್ತರು ಹೂ, ಉತ್ತತ್ತಿ, ಬಾಳೆಹಣ್ಣು, ಪನಿವಾರ, ಬತ್ತಾಸು, ಕಲ್ಲು ಸಕ್ಕರೆ ಎಸೆದು ಭಕ್ತಿ ಸಮರ್ಪಿಸಿದರು….

ಬಸವಣ್ಣನವರು ಕಾಲಜ್ಞಾನ ವಚನ ಬರೆದ ಸ್ಥಳ ( ಪ್ಯಾಟಿಗುಡಿ)ದವರೆಗೆ ಸಾಗಿ ಬೆಳಗ್ಗೆ 10: 30ಕ್ಕೆ ಗಂಟೆಗೆ ಬಾರಾ ಬರೂತಿ ಸಂಪ್ರದಾಯದಂತೆ ಪಟ್ಟಣದ ಹರಗುರು ಚರಮೂರ್ತಿಗಳ ಸನ್ನಿಧಾನದಲ್ಲಿ ಮುಸ್ಲಿಂ ಹಣಗಿ ಮನೆತನದ ವ್ಯಕ್ತಿಯೋರ್ವರು ಮೊಹಮದ್ ಪೈಗಂಬರ್‌ರ ವಾಣಿಯನ್ನು ದೀನ್ ಜಗಾಯಿಸಿದ ನಂತರ ದೂಳಗಾಯಿ ಒಡೆಯಲಾಯಿತು. ಗ್ರಾಮದ ಧಣಿ, ನಾಡಗೇರ, ಕುಲಕರ್ಣಿ, ಮಾಲಿಪಾಟೀಲ್, ಪೊಲೀಸ್‌ಪಾಟೀಲ್, ನೇಕಾರ ಹೀಗೆ ಪ್ರಮುಖ ಮನೆತನಗಳ ಹಿರಿಯರು ಧೂಳಗಾಯಿ ಒಡೆಯುವ ಸಂದರ್ಭದಲ್ಲಿ ಉಪಸ್ಥಿತರಿದ್ದು ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡಿದರು. ಪಲ್ಲಕ್ಕಿ ಉತ್ಸವದ ಮೆರವಣೆಗೆ ಸಾಗುವ ದಾರಿಯುದ್ದಕ್ಕೂ ಬಸವ ಗುರು ಪರಂಪರೆಯ ಗುರುಗಳು, ಕೈಯಲ್ಲಿ ಕಾಲಜ್ಞಾನ ವಚನ ಗ್ರಂಥ ಮಾಲಿಕೆ ಹಿಡಿದು ಪಠಿಸುತ್ತಾ ಹಿಮ್ಮುಖವಾಗಿ ನಡೆದು ಸಾಗುತ್ತಿದ್ದರು. ನಂತರ ಪ್ಯಾಟಿ ಗುಡಿಯಲ್ಲಿರುವ ಹಿರಿಯ ಒಡೆಯ (ಹಿರೋಡೆ ದೇವರು) ಮುಂದೆ ಪ್ರೇತವನ್ನು ನಿಗ್ರಹಿಸಿದ ಕಾರ್ಯದಲ್ಲಿ ಅರ್ಚಕರು ಪಾಲ್ಗೊಂಡರು…

ಪಟ್ಟಣ ಸೇರಿದಂತೆ ಯಾದಗೇರಿಯ ಸುತ್ತಮುತ್ತಲಿನ ಜಿಲ್ಲೆಯ ಹಾಗೂ ವಿವಿಧ ತಾಲೂಕು ಗ್ರಾಮಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಸಮೀಪದ ನಾರಾಯಣಪುರ , ಜೋಕಾಂಡ್ ಬಾವಿ , ಮಾರನಾಳ ತಾಂಡಾ , ಹಗರಟಗಿ, ಎಣ್ಣಿವಡಗೇರಿ, ಬಸಾಪುರ, ಕೋಟೆಗುಡ್ಡ, ಅಮ್ಮಾಪುರ (ಎಸ್.ಕೆ) ಹುಣಸಗಿ, ಮತ್ತಿತರ ಭಕ್ತರು ಕಾಲಜ್ಞಾನಿ ಬಸವೇಶ್ವರನ ದರ್ಶನಕ್ಕೆ ಆಗಮಿಸಿದ್ದರು.

ಮಾಜಿ ಸಚಿವ ನರಸಿಂಹನಾಯಕ, ಹಣಮಂತನಾಯಕ (ಬಬಲುಗೌಡ), ಸಂಗಪ್ಪ ರಾಮನಗೌಡರ, ತಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ , ಉಪ ತಹಸೀಲ್ದಾರ್ ಕಲ್ಲಪ್ಪಗೌಡ ಜಂಜಿಗಡ್ಡಿ, ವಿ.ಎಸ್.ಹಾವೇರಿ. ಶಾಮಸುಂದರ ಜೋಶಿ, ವಿ.ವಿ.ಮಹಲಿನಮಠ, ರಂಗನಾಥ ದೊರೆ, ಹುಣಸಗಿ ತಾಲ್ಲೂಕಿನ ಎಲ್ಲಾ ಕಂದಾಯ ನಿರೀಕ್ಷಕ ಸರ್ವ ಧರ್ಮದ ಜನರು ಪಾಲ್ಗೊಂಡಿದ್ದರು.

ಪೊಲೀಸ್ ಸಿಬ್ಬಂದಿ ವರ್ಗದಿಂದ 5 ಸೆಕ್ಟರ್ ಮೂಲಕ ಬಂದೋಬಸ್ ಅನ್ನು ನೇರವೇರಿಸಿದರು ಮೊದಲನೇ ಸೆಕ್ಟರ್‌ನಲ್ಲಿ (ಪ್ಯಾಟಿಗೂಡಿ ದೇವಸ್ಥಾನ) ಉಸ್ತುವಾರಿ ಭಾಗಣ್ಣ (ತನಿಖಾ) ಪಿಎಸ್‌ಐ ಹುಣಸಗಿ, ಎರಡನೇ ಸೆಕ್ಟರನ್‌ನಲ್ಲಿ (ಊರ ಓರ್ ಒಳಗಿನ) ಉಸ್ತುವಾರಿ ಹುಲಗಪ್ಪ (ತನಿಖಾ) ಪಿಎಸ್‌ಐ ದೇವಸ್ಥಾನ ಬಿ ಗುಡಿ, ಮೂರನೇ ಸೆಕ್ಟರಲ್‌ನಲ್ಲಿ (ಕೊಡೆಕಲ್ಕಿಪ್ಪ) ಉಸ್ತುವಾರಿ ಅಧಿಕಾರಿ ವಹಿಸಿಕೊಂಡರು, ನಾಲ್ಕನೇ ಸೆಕ್ಟರನಲ್ಲಿ ( ಸಂಚಾರಿ ವ್ಯವಸ್ಥೆ) ಉಸ್ತುವಾರಿಯಾಗಿ ನಾರಾಯಣಪುರ ಠಾಣೆಯ ಪಿಎಸ್‌ಐ ರಾಜಶೇಖರ್ ರಾಠೋಡ, ವಹಿಸಿಕೊಂಡಿದ್ದರು, ಕೆಂಬಾವಿ ಪೊಲೀಸ್ ಠಾಣೆ, ಶಾಹಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಸುರಪುರ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಕೊಡೆಕಲ್ ಗ್ರಾಮದೇಶ್ವರ ದೇವಸ್ಥಾನದ ಜಾತ್ರಾ ಬಂದೋಬಸ್ತ್ ಸಂಪೂರ್ಣ ಜವಾಬ್ದಾರಿಯನ್ನು ಸಿಪಿಐ ಸಚಿನ್ ಚಲವಾದಿತ್ವದಲ್ಲಿ ನೂರಾರು ಪೇದೆಗಳು ಬಂದೋಬಸ್ತ್ ಒದಗಿಸಿದ್ದಾರೆ.

ವರದಿಗಾರರು : ಶಿವು ರಾಠೋಡ್ ಯಾದಗಿರಿ

ಹೆಚ್ಚಿನ ಸುದ್ದಿ