Friday, March 27, 2026
Homeಜಿಲ್ಲಾ ಸುದ್ದಿಗಳುಗುತ್ತಿಗೆದಾರರ ರಡಿಮೇಡ್ ಕಂಟೇನರ್ ತರವು

ಗುತ್ತಿಗೆದಾರರ ರಡಿಮೇಡ್ ಕಂಟೇನರ್ ತರವು

ಲಿಂಗಸ್ಗೂರು : ಪಟ್ಟಣದ ಜೆಸ್ಕಾಂ ವಿಭಾಗದ ಕಚೇರಿ ಆವರಣದಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಗುತ್ತಿಗೆದಾರರ ರೆಡಿಮೇಡ್ ಕಂಟೇನರ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಸುಮಾರು ಒಂದು ವರ್ಷದ ನಿರಂತರ ಹೋರಾಟದ ಫಲಿತಾಂಶವಾಗಿದ್ದು, ಹೋರಾಟಗಾರರ ಪರವಾಗಿ ಅಧಿಕಾರಿಗಳು ಕೊನೆಗೂ ನಿಂತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹಾಗೂ ದಲಿತ ಸಂಘ ಸಮಿತಿ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಾರರ ಸಂಘಟನೆಗಳು ಜೆಸ್ಕಾಂ ಅಧಿಕಾರಿಗಳಿಗೆ ಪದೇಪದೇ ಮನವಿ ಸಲ್ಲಿಸುತ್ತಾ ಬಂದಿದ್ದವು. ಆದರೆ ಇದುವರೆಗೆ ರೆಡಿಮೇಡ್ ಕಂಟೇನರ್ ನಲ್ಲಿ ಗುತ್ತಿಗೆದಾರರ ಸಂಘವು ಅಧಿಕಾರಿಗಳಿಗೆ ಬೆದರಿಕೆ ಹಾಕಿ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾ, ಕಚೇರಿ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿದ್ದ ಬಂದಿರುವ ಆರೋಪಗಳು ಕೇಳಿ ಬಂದಿವೆ.

ಈ ರೀತಿಯ ಘಟನೆಗಳು ಮುಂದಿನ ದಿನಗಳಲ್ಲಿ ಮರುಕಳಿಸಬಾರದು ಎಂದು ಕರ್ನಾಟಕ ದಲಿತ ಸಂಘ, ರಾಯಚೂರು ಜಿಲ್ಲೆಯ ಅಧ್ಯಕ್ಷರಾದ ಜಮಾದಗ್ನಿ ಟಿ ಭವಾನಿ ಹಾಗೂ ಸದಸ್ಯರಾದ ಬಾಲಪ್ಪ ಹಿರೇಮನಿ ಅವರು ನಿರಂತರ ಒಂದು ವರ್ಷದ ಪ್ರಯತ್ನದಿಂದಾಗಿ ಇಂದು ಗುತ್ತಿಗೆದಾರ ಅನಾದಿಕೃತ ಕಚೇರಿ ಯನ್ನು ತೆರವುಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ