Monday, February 9, 2026
Homeಕ್ರೀಡೆಗುಂಜೂರ್ ನಲ್ಲಿ ರಾಷ್ಟ್ರಮಟ್ಟದ ಬಾಲಕ/ಬಾಲಕಿಯರ ಖೋ-ಖೋ ಚಾಂಪಿಯನ್ ಶಿಪ್ ಪಂದ್ಯಾವಳಿ ಡಿಸೆಂಬರ್ 31 ರಿಂದ ಜನವರಿ...

ಗುಂಜೂರ್ ನಲ್ಲಿ ರಾಷ್ಟ್ರಮಟ್ಟದ ಬಾಲಕ/ಬಾಲಕಿಯರ ಖೋ-ಖೋ ಚಾಂಪಿಯನ್ ಶಿಪ್ ಪಂದ್ಯಾವಳಿ ಡಿಸೆಂಬರ್ 31 ರಿಂದ ಜನವರಿ 4ರ ವರೆಗೆ ನಡೆಯಲಿದೆ

ಬೆಂಗಳೂರು: ಪ್ರೆಸ್ ಕ್ಲಬ್ ಗುಂಜೂರು ಖೋ-ಖೋ ಕ್ಲಬ್ ವತಿಯಿಂದ ಗುಂಜೂರು ವಾಜಪೇಯಿ ಕ್ರೀಡಾಂಗಣದಲ್ಲಿ 44ನೇ ರಾಷ್ಟ್ರಮಟ್ಟದ ಜೂನಿಯರ್ ಬಾಲಕ ಮತ್ತು ಬಾಲಕಿಯರ ಖೋ-ಖೋ ಚಾಂಪಿಯನ್ ಶಿಪ್-2025 ಡಿಸೆಂಬರ್ 31ರಿಂದ 2026 ಜನವರಿ 4ನೇ ತಾರೀಖವರೆಗೆ ಪಂದ್ಯಾವಳಿ ನಡೆಯಲಿದೆ ಇದರ ಕುರಿತು ಮಾಧ್ಯಮಗೋಷ್ಟಿಯಲ್ಲಿ ಆಯೋಜಕರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷರಾದ ಲೋಕೇಶ್ವರ್ ರವರು ಮತ್ತು ಗುಂಜೂರು ಖೋ-ಖೋ ಕ್ಲಬ್ ಅಧ್ಯಕ್ಷರಾದ ಜಿ.ಟಿ.ನಾಗೇಶ್ ರವರು , ಮತ್ತು ರಾಜ್ಯ ಖೋ-ಖೋ ಸಂಸ್ಥೆಯ ಪದಾಧಿಕಾರಿಗಳಾದ ಜಯರಾಮ್, ವೆಂಕಟೇಶ್, ಜಿ.ಟಿ.ಚಂದ್ರಪ್ಪ, ಜಗದೀಶ್ ,ಬಸವರಾಜ್ ರವರು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.

ಲೋಕೇಶ್ವರ್ ರವರು ಮಾತನಾಡಿ ಖೋ-ಖೋ ಇಂದು ಅಂತರಾಷ್ಟ್ರೀಯ ಕ್ರೀಡೆಯಾಗಿದೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೇರ್ಪಡೆಯಾಗಿದೆ. ಪ್ರಧಾನಿ ನರೇಂದ್ರಮೋದಿರವರು ಖೋ-ಖೋ ಕ್ರೀಡೆಯನ್ನು ಮುಂದಿನ ಓಲಂಪಿಕ್ ಗೇಮ್ಸ್ ನಲ್ಲಿ ಖೋ-ಖೋ ಸೇರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಗುಂಜೂರ್ ವಾಜಪೇಯಿ ಕ್ರೀಡಾಂಗಣದಲ್ಲಿ ಹೊನಲು-ಬೆಳಕಿನಲ್ಲಿ ಖೋ-ಖೋ ಪಂದ್ಯಾವಳಿ ನಡೆಯಲಿದೆ.
ನಾಲ್ಕು ಕೋರ್ಟ್ ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಎರಡು ಮ್ಯಾಟ್ ಕೋರ್ಟ್ ಗಳಿಗೆ.
ಭಾರತ ದೇಶ 32 ರಾಜ್ಯಗಳ ತಂಡಗಳು ಭಾಗವಹಿಸಲಿದೆ.
ಖೋ-ಖೋ ಕ್ರೀಡೆಯಲ್ಲಿ ಸಾಧಕರಿಗೆ ಕೇಂದ್ರ, ರಾಜ್ಯ ಸರ್ಕಾರದ ಉತ್ತಮ ಹುದ್ದೆಗಳಲ್ಲಿ ನೇಮಕರಾಗಿದ್ದಾರೆ.
ಖೋ-ಖೋ ಕ್ರೀಡೆ ದೃಹಿಕ, ಬುದ್ದಿಕೌಶಲ್ಯ ಕ್ರೀಡೆಯಾಗಿದೆ. ಮಾನಸಿಕ ಮತ್ತು ದೃಹಿಕವಾಗಿ ಸಧೃಡವಾಗಿ ಇರಬೇಕು ಖೋ-ಖೋ ಕ್ರೀಡೆಯನ್ನು ಚಿಕ್ಕ ವಯಸ್ಸಿನಲ್ಲಿ ಶಾಲಾ ಮಕ್ಕಳು ಕಲಿಯಬೇಕು. ಖೋ-ಖೋ ಕ್ರೀಡೆ ಬೆಳೆಯಬೇಕು ಈ ನಿಟ್ಟಿನಲ್ಲಿ ಪ್ರೋತ್ಸಾಹ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದರು.

ಜಿ.ಟಿ.ನಾಗೇಶ್ ರವರು ಮಾತನಾಡಿ ಗುಂಜೂರ್ ಖೋ-ಖೋ ಕ್ರೀಡೆ ಹೆಸರಾಂತ ಪ್ರದೇಶವಾಗಿದೆ. ನಮ್ಮ ಕ್ಲಬ್ ನಿಂದ ಸಾಕಷ್ಟು ಕ್ರೀಡಾಪಟುಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಆಟಗಾರರು ಇದ್ದಾರೆ ಎಂದು ತಿಳಿಸಿದರು.

ಖೋ-ಖೋ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಶಾಸಕಿ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂಸದ ಪಿ.ಸಿ.ಮೋಹನ್ ಅನೇಕ ಗಣ್ಯರು ಮತ್ತು ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

*ತಾಲೂಕು ಮತ್ತು ಜಿಲ್ಲಾ ವರದಿಗಾರರು ಬೇಕಾಗಿದ್ದಾರೆ*,ಆಸಕ್ತಿ ಹೊಂದಿರುವ ಪ್ರಾಮಾಣಿಕ ವರದಿಗಾರರು ನಮ್ಮನ್ನು ಸಂಪರ್ಕಿಸಿ ಮೋಬೈಲ್ ನಂಬರ್ -9035262956(ಸುದ್ದಿ ಮತ್ತು ಜಾಹಿರಾತುಗಳಿಗೆ ನಮ್ಮನ್ನು ಸಂಪರ್ಕಿಸಿ.

ಹೆಚ್ಚಿನ ಸುದ್ದಿ