
ಬೆಳಗಾವಿ: ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಕೈವಲ್ಲಿ ಆಶ್ರಮದಲ್ಲಿ “ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026” ರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗದ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ನೀಡಲಾಯಿತು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಎನ್. ರವಿ ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ನಡೆದ “ಮತಗಟ್ಟೆ ಕಾರ್ಯಾಗಾರ” ವಿಷಯದ ಕುರಿತು ಮಾತನಾಡಿದ ಅವರು, ಸಂಘಟನೆಯಲ್ಲಿ ಮತಗಟ್ಟೆ ಮಟ್ಟದ ಕಾರ್ಯಕರ್ತರ ಪಾತ್ರ ಅತ್ಯಂತ ಪ್ರಮುಖವಾದದ್ದು. ಪ್ರತಿಯೊಂದು ಮತಗಟ್ಟೆಯನ್ನು ಸಶಕ್ತಗೊಳಿಸುವ ಮೂಲಕ ಪಕ್ಷದ ಸಿದ್ದಾಂತ ಹಾಗೂ ಸರ್ಕಾರದ ಸಾಧನೆಗಳನ್ನು ತಳಮಟ್ಟಕ್ಕೆ ತಲುಪಿಸಬೇಕು ಎಂದು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಸುಭಾಷ್ ಪಾಟೀಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಹಾಗೂ ಶಾಸಕರಾದ ಶ್ರೀ ವಿಠ್ಠಲ್ ರಾವ್ ಹಲಗೇಕರ್ ಉಪಸ್ಥಿತರಿದ್ದು ಸಂಘಟನಾತ್ಮಕ ವಿಷಯಗಳ ಕುರಿತು ಮಾತನಾಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು:
ಮಾಜಿ ಶಾಸಕರುಗಳಾದ
ಶ್ರೀ ಮಹಾಂತೇಶ್ ದೊಡ್ಡಗೌಡರ,
ಶ್ರೀ ಅರವಿಂದ್ ಪಾಟೀಲ್,
ಶ್ರೀ ಜಗದೀಶ್ ಮೆಟ್ಟಗುಡ್ಡ, ಹಾಗೂ
ಶ್ರೀ ಡಾ. ವಿಶ್ವನಾಥ್ ಪಾಟೀಲ್
ಪ್ರಮುಖ ಸಂಘಟಕರಾದ ಪ್ರಶಿಕ್ಷಣ ವರ್ಗದ ತರಬೇತಿಯನ್ನು ಶ್ರೀ ವಿಲಾಸ್ ಪವಾರ್ ಮತ್ತು ಹಿರಿಯ ಮುಖಂಡರಾದ ಶ್ರೀ ಬಸವರಾಜ್ ಸಾಣಿಕೊಪ್ಪ. ಈ ಮಹತ್ವದ ಕಾರ್ಯಾಗಾರದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ಅಪೇಕ್ಷಿತ ಪ್ರಮುಖ ಕಾರ್ಯಕರ್ತರು ಭಾಗವಹಿಸಿ ತರಬೇತಿ ಪಡೆದರು.
