-ವಿಜಯನಗರ ಜಿಲ್ಲೆ ಕೂಡ್ಲಿಗಿ : ವಿದ್ಯುತ್ ಪ್ರವಹಿಸುತ್ತಿರುವ ತಂತಿ ಹರಿದು ಬಿದ್ದು , ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ಸೆ 15ರಂದು ರಾತ್ರಿ ಜರುಗಿದೆ. ಪಟ್ಟಣದ ರಾಜೀವಗಾಂಧೀನಗರ ವಾಸಿ ಯುವಕ ಸಾಗರ(15) , ಮೃತ ಯುವಕ ದುರ್ದೈವಿಯಾಗಿದ್ದಾನೆ. ಪಟ್ಟಣದ ಹಳೇ ಆಸ್ಪತ್ರೆಯ ಬಳಿಯ ತನ್ನ ತಂದೆಯ ತರಕಾರಿ ಅಂಗಡಿಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ , ಅಂಗಡಿಗೆ ಹತ್ತಿರದಲ್ಲಿಯೇ ಇದ್ದ ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಹೊತ್ತಿಕೊಂಡಿದ್ದು. ಗಾಳಿಯ ರಭಸಕ್ಕೆ ವಿದ್ಯುತ್ ಪ್ರವಹಿಸುತ್ತಿರುವ ತಂತಿ ಅಂಗಡಿಯ ಮೇಲೆ ಬಿದ್ದಿದ್ದು , ಯುವಕ ಅಂಗಡಿಯಿಂದ ಹೊರಬರುವ ಪ್ರತ್ನದಲ್ಲಿದ್ದ ಸಂದರ್ಭದಲ್ಲಿ. ಸಾಗರನಿಗೆ ವಿದ್ಯುತ್ ತಾಗಿ ತೀವ್ರ ಅಘಾತಕ್ಕೊಳಗಾಗಿದ್ದು , ಅಕ್ಕ ಪಕ್ಕದ ತರಕಾರಿ ಅಂಗಡಿಯವರು ಸಾರ್ವಜನಿಕರು ಸಾಗರನನ್ನು ರಕ್ಷಿಸಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ತೀವ್ರ ಅಘಾತಕ್ಕೊಳಗಾಗಿದ್ದ ಸಾಗರ ದುರಾದೃಷ್ಟವಶಾತ್ ಮೃತಪಟ್ಟಿದ್ದು , ಏಕೈಕ ಪುತ್ರನ ಅಗಲಿಕೆಯ ಸುದ್ದಿ ತಿಳಿದ ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿತ್ತು. ವಿಷಯ ತಿಳಿದ ಕೂಡಲೇ ಪೊಲೀಸ್ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಯವರು , ಜೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು. ಮತ್ತು ಅಗ್ನಿ ಶಾಮಕ ದಳದ ಅಧಿಕಾರಿಗಳು , ಹಾಗೂ ಸಿಬ್ಬಂದಿಯವರು ಸ್ಥಳಕ್ಕಾಗಮಿಸಿದ್ದಾರೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಿದ್ದಾರೆ. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕರವರು , ಹಾಗೂ ಕೆಲ ಪಪಂ ಸದಸ್ಯರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಲಾಖಾಧಿಕಾರಿಗಳೊಂದಿಗೆ ಸಮಾಲೋಚಿಸಿ , ದುರ್ಘಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಮತ್ತು ವಿದ್ಯುತ್ ಅವಘಡದಿಂದಾಗಿ ಮೃತ ಪಟ್ಟ , ಯುವಕ ಸಾಗರನ ಕುಟುಂಬ ಸದಸ್ಯರಿಗೆ ಸಾಂತ್ವಾನ ತಿಳಿಸಿದ್ದಾರೆ. ಪ್ರಕರಣ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವರದಿ :-ವಿಠ್ಠಲ್ ಮಟ್ಟೂರ.
