Tuesday, February 10, 2026
HomeUncategorizedಕುಷ್ಠರೋಗ ನಿರ್ಮೂಲನೆಗೆ.ತಹಸೀಲ್ದಾರ್ ಶಂಶಾಲಂ ಕರೆ

ಕುಷ್ಠರೋಗ ನಿರ್ಮೂಲನೆಗೆ.ತಹಸೀಲ್ದಾರ್ ಶಂಶಾಲಂ ಕರೆ

ಲಿಂಗಸೂಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಕುರಿತು ತಹಸೀಲ್ದಾರ್ ಶಂಶಾಲಂ ಇವರ ಅಧ್ಯಕ್ಷತೆಯಲ್ಲಿ ತಾಲೂಕಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸೀಲ್ದಾರ ರು ಕುಷ್ಠರೋಗ ನಿವಾರಣೆಗೆ ಆರೋಗ್ಯ ಇಲಾಖೆಯಿಂದ ಅರಿವು ಮೂಡಿಸುವುದು,ಮನೆ ಮನೆ ಸಮೀಕ್ಷೆ, ತಪಾಸಣೆ ಹಾಗೂ ಗುಣಾತ್ಮಕ ಚಿಕಿತ್ಸೆ ನೀಡುತ್ತಿದ್ದಾರೆ
ಶಿಶು ಅಭಿವ್ರಧ್ಧಿ,ಪಂಚಾಯತ್ ರಾಜ್ ಇತರೆ ಇಲಾಖೆಯವರು ಹಾಗೂ ಸಮಾಜ ಸೇವಕರು ಜನರಲ್ಲಿ ಜಾಗೃತಿ ಮೂಡಿಸಬೇಕು. ರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸೋಣ,ಅಂಗ ವಿಕಲತೆ ದೂರ ಮಾಡೋಣ ಎಂದು ಕರೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ: ಅಮರೇಶ ಪಾಟೀಲ ಮಾತನಾಡಿ ಕುಷ್ಠರೋಗದ ಲಕ್ಷಣಗಳು ಸ್ಪರ್ಶ ಜ್ಞಾನವನ್ನು ತಿಳಿ ಬಿಳಿ ತಾಮ್ರವರ್ಣದ ಮಚ್ಚೆ,ಕೈ ಕಾಲುಗಳಲ್ಲಿ ,ನರಗಳಲ್ಲಿಯೂ ತೀವ್ರ ಜೋಮು ಕಂಡು ಬಂದು ವಿಕಲತೆ ಆಗಬಹುದು. ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಯಿಂದ ಈ ರೋಗ ಬರುತ್ತದೆ.. ಆದ್ದರಿಂದ ಇಂತಹ ಲಕ್ಷಣ ಅಥವಾ ತೊಂದರೆ ಇದ್ದರೆ ಹತ್ತಿರದ ಆಸ್ಪತ್ರೆ.ಆಶಾ ಕಾರ್ಯಕರ್ತೆಯರು ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಲು ಕೋರಿದರು. ತಾಲೂಕು ಪಂಚಾಯತಿ ಅಧಿಕಾರಿ ಮಂಜುನಾಥ್,ಶಿಕ್ಷಣ ಇಲಾಖೆಯ ಬಸವರಾಜ, ಮೌನೇಶ್,ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ, ವೈದ್ಯಾಧಿಕಾರಿಗಳಾದ ಡಾ: ದಿಗಂಬರ, ಡಾ: ರವಿಕಿರಣ್.ಡಾ: ಶಿವನಾಥ.ಡಾ: ನಿರ್ಮಲಾ ಪಾಟೀಲ, ಡಾ: ಸೂಗೂರೇಶ್.ಡಾ: ಶಂಕರಾಚಾರ್ಯ, ಪ್ರಾಣೇಶ್ ಜೋಶಿ,ರೇಷ್ಮಾಬೇಗಂ,ಶಿವಲೀಲಾ ಮೇಟಿ.ಪದ್ಮಾವತಿ.ನಾಗರತ್ನ.ಅಂಬಮ್ಮ.ಮಂಜುಳಾ.ವಸೀಂರೆಹಮಾನ್,ಶಿವಮ್ಮ ಇತರರು ಭಾಗವಹಿಸಿದ್ದರು.

ಹೆಚ್ಚಿನ ಸುದ್ದಿ