Monday, February 9, 2026
Homeಆಧ್ಯಾತ್ಮಕಿತ್ತೂರು ರಾಣಿ ಚನ್ನಮ್ಮಾಜಿಯವರ ಪುಣ್ಯ ಸ್ಮರಣೆ ದಿನ.....

ಕಿತ್ತೂರು ರಾಣಿ ಚನ್ನಮ್ಮಾಜಿಯವರ ಪುಣ್ಯ ಸ್ಮರಣೆ ದಿನ…..

ಚನ್ನಮ್ಮನ ಕಿತ್ತೂರು: ಐತಿಹಾಸಿಕ ರಾಣಿ ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಶ್ರೀ ಕಲ್ಮಠದ ಆವರಣದಲ್ಲಿ ಕಿತ್ತೂರು ಚನ್ನಮ್ಮಾಜಿಯವರ ಪುಣ್ಯಸ್ಮರಣೆಯಂದು ಕಲ್ಮಠದ ರಾಣಿ ಚನ್ನಮ್ಮಳ ಪುತ್ಥಳಿಗಳಿಗೆ ಪುಷ್ಪ ನಮನ ಅರ್ಪಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಕಿತ್ತೂರು ರಾಣಿ ಚನ್ನಮ್ಮನವರು ಮಹಿಳಾ ಶಕ್ತಿಯ ಪ್ರತೀಕವಾಗಿದ್ದು ಇಂದಿನ ಯುವ ಪೀಳಿಗೆಗೆ ಪ್ರೇರಕ ಶಕ್ತಿ ಎಂದು ತಿಳಿಸಿದರು.

ಡಾ.ಎಸ್.ಬಿ.ದಳವಾಯಿಯವರು ಪುರುಷ ಪ್ರಧಾನ ಸಮಾಜದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ವನಿತೆ ಚನ್ನಮ್ಮ ಮಹಿಳಾ ಶಕ್ತಿಯ ಜೀವಂತ ಉದಾಹರಣೆಯಾಗಿದ್ದು ಅವರ ಸಾಹಸ, ಸ್ವಾಭಿಮಾನ, ದೇಶ ಪ್ರೇಮ ಮತ್ತು ತ್ಯಾಗ ಬಲಿದಾನಗಳು ಅಜರಾಮರವಾಗಿ ಉಳಿದಿದ್ದು ನಾವುಗಳು ಅವುಗಳನ್ನು ಪ್ರತಿ ದಿವಸ ಸ್ಮರಿಸುವದು ಅವಶ್ಯಕವಾಗಿದೆ ಎಂದರು.

ರಾಜಗುರು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಜರುಗಿದ ಪ್ರಾರ್ಥನೆ ಮತ್ತು ಚನ್ನಮ್ಮಾಜಿಯವರ ಕುರಿತಾದ ಗೀತೆಗಳು ಸಮಾರಂಭದ ಆಕರ್ಷಣೆಗಳಾಗಿದ್ದವು. ರಾಜಗುರು ಶಿಕ್ಷಣ ಸಂಸ್ಥೆಯ ಶಿಕ್ಷಕರು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕರಾದ ಶ್ರೀಮತಿ ರಾಜೇಶ್ವರಿ ಕಳಸಣ್ಣವರ ಸ್ವಾಗತಿಸಿದರು. ಶ್ರೀ ಆನಂದ ಶಿವಳ್ಳಿಮಠ ನಿರೂಪಿಸಿ ವಂದಿಸಿದರು.
ಸರಕಾರ ಮತ್ತು ಜನಪ್ರತಿನಿಧಿಗಳು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯ ನಾಡಾದ ಐತಿಹಾಸಿಕ ಚನ್ನಮ್ಮನ ಕಿತ್ತೂರನ್ನು ಪ್ರವಾಸಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು. ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ತಿಳಿಸಿದರು..

ಹೆಚ್ಚಿನ ಸುದ್ದಿ