Monday, December 23, 2024
Homeಕ್ರೀಡೆಒಲಂಪಿಕ್ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಜಯಸಿದ ಭಾರತ ತಂಡಕ್ಕೆ ಶುಭ ಕೋರಿದ ಸಿಎಂ‌ ಸಿದ್ದರಾಮಯ್ಯ

ಒಲಂಪಿಕ್ ಕ್ರೀಡಾ ಕೂಟದಲ್ಲಿ ಕಂಚಿನ ಪದಕ ಜಯಸಿದ ಭಾರತ ತಂಡಕ್ಕೆ ಶುಭ ಕೋರಿದ ಸಿಎಂ‌ ಸಿದ್ದರಾಮಯ್ಯ

ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವ ಮೂಲಕ ಭಾರತೀಯರ ಹೆಮ್ಮೆಯನ್ನು ನೂರ್ಮಡಿಗೊಳಿಸಿದೆ. ಪದಕ ವಿಜೇತ ತಂಡದ ಆಟಗಾರರೆಲ್ಲರಿಗೂ ಅಭಿನಂದನೆಗಳು. ಭಾರತ ತಂಡದ ಸಾಧನೆ ಅತ್ಯಂತ ಖುಷಿ ಕೊಟ್ಟಿದೆ.

ಹರ್ಮನ್ ಪ್ರೀತ್ ಸಿಂಗ್ ಅವರ ನಿಖರ ಗುರಿಯ ಹೊಡೆತಗಳು, ಎದುರಾಳಿ ಆಟಗಾರರ ಹೊಡೆತಗಳಿಗೆ ತಡೆಗೋಡೆಯಂತೆ ನಿಂತ ಶ್ರೀಜೇಶ್ ಹಾಗೂ ತಂಡದ ಇತರೆ ಎಲ್ಲಾ ಆಟಗಾರರ ಸಂಘಟಿತ ಹೋರಾಟಕ್ಕೆ ಸಂದ ಈ ಜಯ ಹೊಸ ಇತಿಹಾಸ ಸೃಷ್ಟಿಸಿದೆ.
ಈ ಒಲಿಂಪಿಕ್‌ನಲ್ಲಿ ಭಾರತ ಮತ್ತಷ್ಟು ಪದಕಗಳನ್ನು ಗೆದ್ದು ಬರಲಿ ಎಂದು ಹಾರೈಸುತ್ತೇನೆ.

ಹೆಚ್ಚಿನ ಸುದ್ದಿ