ಮುದ್ದೇಬಿಹಾಳ: ತಾಲೂಕಿನಲ್ಲಿ 92 ಜನ ಮಾಶಾಸನ ಪಡೆವ ಪಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆಯನ್ನು ತಾಲೂಕಿನ ಯೋಜನಾಧಿಕಾರಿ ಶಿವಾನಂದ ಪಿ. ರವರು ವಿತರಣೆ ಮಾಡಿದರು. ಈ ಪಲಾನುಭವಿಗಳಿಗೆ ಯೋಜನೆಯಿಂದ ಪೂಜ್ಯರು ಪ್ರತಿ ತಿಂಗಳು ತಲಾ ಒಬ್ಬರಿಗೆ 1000 ರಂತೆ 92 ಜನರಿಗೆ 92000 ರು ಮಾಶಾಸನ ನೀಡುತಿದ್ದಾರೆ ಹಾಗೂ ದಿನ ನಿತ್ಯ ಬಳಕೆ ಮಾಡುವ ವಸ್ತುಗಳು ನೀಡಲಾಗಿದೆ ಜೊತೆಗೆ ಪೌಷ್ಟಿಕ ಅಹಾರ್ ಕಿಟ್ ಕೊಡಲಾಗಿದೆ. ತಾಲೂಕಿನಲ್ಲಿ 10 ವಾತ್ಸಲ್ಯ ಮನೆ ರಚನೆ ಮಾಡಿಕೊಡಲಾಗಿದೆ ಪಲಾನುಭವಿಗಳಿಗೆ ಎಂದು ತಿಳಿಸಿದರು.
ಈ ಎಲ್ಲಾ ಸೌಲಭ್ಯಗಳನ್ನು ಪಡೆದ ಪಲಾನುಭವಿಗಳು ಪೂಜ್ಯನೀಯ ಅಮ್ಮನವರಿಗೆ ಕೃತಜ್ಞತೆ ಸಲ್ಲಿಸಿದರು. ಮೇಲ್ವಿಚಾರಕ ನಾಗೇಶ್ ಎಸ್.ಕೆ ಹಾಗೂ ಮೇಲ್ವಿಚಾರಕ ಶ್ರೇಣಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಂಪಾದಕರು: ರಾಮಚಂದ್ರಪ್ಪ ಪೂಜೇರ
