Monday, March 23, 2026
Homeಬೆಂಗಳೂರುಇದು ಬೆಂಗಳೂರು ಡಿಪಾಸಿಡ್ ಸ್ಕ್ಯಾಮ್ - ಮಾಲೀಕರ ವಿರುದ್ಧ ನಾರ್ಥಿ ಯುವತಿ ಆಕ್ರೋಶ…

ಇದು ಬೆಂಗಳೂರು ಡಿಪಾಸಿಡ್ ಸ್ಕ್ಯಾಮ್ – ಮಾಲೀಕರ ವಿರುದ್ಧ ನಾರ್ಥಿ ಯುವತಿ ಆಕ್ರೋಶ…

ಗರಗಳಲ್ಲಿ ಬಾಡಿಗೆ ಮನೆಗಳಿಗೆ ಸಂಬಂಧಿಸಿದ ವಿವಾದಗಳು ಹೆಚ್ಚುತ್ತಿರುವ ನಡುವೆಯೇ, ಬೆಂಗಳೂರಿನಲ್ಲಿ ಮತ್ತೊಂದು ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಮನೆ ಖಾಲಿ ಮಾಡಿದ ನಂತರ ಸೆಕ್ಯೂರಿಟಿ ಡೆಪಾಸಿಟ್ (Deposit) ಹಣವನ್ನು ಸಂಪೂರ್ಣವಾಗಿ ಮರಳಿಸಿಲ್ಲ ಎಂದು ಯುವತಿಯೊಬ್ಬರು ಮನೆ ಮಾಲೀಕರ ವಿರುದ್ಧ ಆರೋಪಿಸಿದ್ದಾರೆ.

ಅರ್ಜ್ ಅರ್ಬನ್ ಬ್ಲೂಮ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಈ ಯುವತಿ, ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದು, ವೀರೇಂದ್ರ ಪಿ. ಖಟ್ವಕರ್ ಮತ್ತು ರೇಖಾ ವಿ. ಖಟ್ವಕರ್ ಅವರಿಗೆ ಸೇರಿದ 3BHK ಫ್ಲಾಟ್‌ನಲ್ಲಿ ಬಾಡಿಗೆಗೆ ನೆಲೆಸಿದ್ದರು. ಮನೆ ಪಡೆಯುವ ವೇಳೆ ₹70,000 ಮೊತ್ತವನ್ನು ಸೆಕ್ಯೂರಿಟಿ ಡೆಪಾಸಿಟ್ ರೂಪದಲ್ಲಿ ಪಾವತಿಸಿದ್ದರು.

ಇತ್ತೀಚೆಗೆ ಫ್ಲಾಟ್ ಮಾಲೀಕರು ಆಸ್ತಿಯನ್ನು ಮಾರಾಟ ಮಾಡುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಸೂಚನೆಯಂತೆ ಮನೆ ಖಾಲಿ ಮಾಡಿದ ಬಳಿಕ, ಯುವತಿಗೆ ₹18,000 ಮಾತ್ರ ವಾಪಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಉಳಿದ ಸುಮಾರು ₹52,000 ಹಣವನ್ನು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಕಡಿತಗೊಳಿಸಲಾಗಿದೆ ಎಂದು ದೂರಿದ್ದಾರೆ.

ಈ ಬಗ್ಗೆ ಯುವತಿ Instagram ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಅದು ಈಗ ವ್ಯಾಪಕವಾಗಿ ವೈರಲ್ ಆಗಿದೆ. ವಿಡಿಯೊ ಲಕ್ಷಾಂತರ ವೀಕ್ಷಣೆ ಗಳಿಸಿದ್ದು, ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಮನೆ ಮಾಲೀಕರ ನಡೆಗೆ ವಿರೋಧ ವ್ಯಕ್ತಪಡಿಸಿ, ಬಾಡಿಗೆದಾರರ ಹಕ್ಕುಗಳ ಕುರಿತು ಚರ್ಚೆ ಆರಂಭಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಬೆಂಗಳೂರು ಸಿಟಿ ಪೊಲೀಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿ, ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

ಹೆಚ್ಚಿನ ಸುದ್ದಿ