ಅನ್ಯಜಾತಿ ಮದುವೆ.. ಗರ್ಭಿಣಿ ಮಗಳನ್ನ ಕೊಂದ ಪಾಪಿ ತಂದೆ!

0
60

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾರ್ಯಾದೆ ಹತ್ಯೆ ನಡೆದಿದೆ. ದಲಿತ ಯುವಕನನ್ನ ಮದುವೆಯಾಗಿದ್ದಕ್ಕೆ ಹೆತ್ತ ತಂದೆ ತನ್ನ ಗರ್ಭಿಣಿ ಮಗಳನ್ನೆ ಹತ್ಯೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ 19 ವರ್ಷದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದ ಯುವತಿ ಮಾನ್ಯ ಮತ್ತು ಯುವಕ ವಿವೇಕಾನಂದ ಪೋಷಕರ ವಿರೋಧದ ನಡುವೆ ಕಳೆದ 7 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಪೊಲೀಸರು ಸಮ್ಮುಖದಲ್ಲಿ ಎರಡು ಕುಟುಂಬದವರನ್ನು ರಾಜಿ ಪಂಚಾಯತಿ ಕೂಡ ಮಾಡಿಸಿದ್ದರು. ಆದ್ರೆ ಮಗಳು ದಲಿತ ಯುವಕನನ್ನ ಪ್ರೀತಿಸಿ ಮದುವೆಯಾಗಿದ್ದಾಳೆ ಎಂದು ಯುವತಿಯ ತಂದೆ ಶಂಕರ ಗೌಡ ಮದುವೆಯಾಗಿ ಏಳು ತಿಂಗಳ ಮೇಲೆ ಕೌರ್ಯ ಮೆರೆದಿದ್ದಾನೆ. ಆರೋಪಿಗಳಾದ ಶಂಕರ ಗೌಡ, ಪ್ರಕಾಶ್, ವೀರಣ್ಣ, ಅರುಣ್ ನನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.