ಅಥಣಿ ಜೂ 19: ಪಟ್ಟಣದ ಶಂಕರ ನಗರದ ಶ್ರೀ ಸಾಯಿ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಬುಧವಾರ ರಂದು ಬೆಂಗಳೂರಿನ ಖ್ಯಾತ ಅಪೊಲೊ ಹಾಸ್ಪಿಟಲ್ ಸಹಯೋಗದೊಂದಿಗೆ ಬೃಹತ್ ಕ್ಯಾಂಪಸ್ ಸಂದರ್ಶನ ನಡೆಯಿತು.
ಈ ಸಂದರ್ಶನದಲ್ಲಿ ಪ್ಯಾರಾಮೆಡಿಕಲ್ ಹಾಗೂ ನರ್ಸಿಂಗ್ ವಿಭಾಗದ ಸುಮಾರು 480 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ಅಥಣಿಯ ಶ್ರೀ ಸಾಯಿ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜು ಹಾಗೂ ಅಂಕಲಿಯ ಶ್ರೀ ಸಾಯಿ ಪ್ಯಾರಾಮೆಡಿಕಲ್ ಕಾಲೇಜಿನ ಒಟ್ಟು 42 ವಿದ್ಯಾರ್ಥಿಗಳು ಅಪೊಲೊ ಹಾಸ್ಪಿಟಲ್‌ಗೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಎಲ್ಲ ವಿದ್ಯಾರ್ಥಿಗಳಿಗೆ ಸಂಸ್ಥೆಯ ಆಡಳಿತ ಮಂಡಳಿಯು ಅಭಿನಂದನೆ ಸಲ್ಲಿಸಿಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು ಈ ಸಾಧನೆಯು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶದ ಬಾಗಿಲು ತೆರೆದಂತಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂತೋಷ ರೆಂಡಾಳೆ, ತಿಳಿಸಿದರು.
ಆಯ್ಕೆಯಾದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಬೆಂಗಳೂರಿನ ಅಪೊಲೊ ಹಾಸ್ಪಿಟಲ್‌ನ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಮಹೇಶ ರೆಂಡಾಳೆ,ಸಿಬ್ಬಂದಿಗಳಾದ ಚಿದಾನಂದ ಕೊಳಂಬಿ,ಅಭಿಜಿತ ಗಾಯಕ್ವಾಡ,ಅಜಾರು ಜಮಾದಾರ,ಸುಹಾಸಿನಿ ಲಟ್ಟಿ,ಐಶ್ವರ್ಯ ಬಿರುನಗಿ,ಅಪೋಲೋ ಹಾಸ್ಪಿಟಲ್ ಸಿಬ್ಬಾದಿಯಾದ ಸುನೀಲ ಬಂಡಾರೆ ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು
