Friday, May 8, 2026
Homeಜಿಲ್ಲಾ ಸುದ್ದಿಗಳುಅಕ್ರಮ ಸರಾಯಿ ಮಾರಾಟ ಮಾಡಿದ್ರೆ ರೌಡಿ ಶೀಟ್ ಹಾಕಿ ಗಡಿಪಾರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್...

ಅಕ್ರಮ ಸರಾಯಿ ಮಾರಾಟ ಮಾಡಿದ್ರೆ ರೌಡಿ ಶೀಟ್ ಹಾಕಿ ಗಡಿಪಾರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಎಚ್ಚರಿಕೆ

ಬೆ‌‌ಳಗಾವಿ: ಜಿಲ್ಲೆಯಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಮಾಡಿದರೆ ಮುಲ್ಲಾಜಿಲ್ಲದೆ ರೌಡಿ ಶೀಟ್ ಹಾಕಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ವಾರ್ನಿಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುವುದರಿಂದ ಕೊಲೆ ಪ್ರಕರಣಗಳು ಕಡಿಮಯಾಗಿವೆ. ಅಲ್ಲದೆ ಗ್ರಾಮೀಣ ಜನರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದಾರೆ. ಒಂದು ವೇಳೆ ಅಲ್ಲಲ್ಲಿ ಅಕ್ರಮ ಸರಾಯಿ ಮಾರಾಟ ಕಂಡು ಬಂದರೆ ರೌಡಿ ಶೀಟ್ ದಾಖಲಿಸಿ ಗಡಿಪಾರು ಮಾಡಲಾಗುವುದು ಎಂದರು.ಸಾರ್ವಜನಿಕರು ಸಹ ನಿಮ್ಮ ಮುಂದೆ ಅನ್ಯಾಯವಾಗುತ್ತಿದ್ದರೆ ಸಹಿಸಿಕೊಂಡು ಇರಬಾರದು. ನೀವು ನೀಡುವ ದೂರು ದಾಖಲೆಯಾಗಿ ಉಳಿಯಬೇಕು. ಆದ್ದರಿಂದ ಎಲ್ಲಿಯೇ ಏನೇ ಅಪರಾಧ ಕೃತ್ಯಗಳು ನಡೆಯಬಹುದು ಎನ್ನಿಸಿದರೆ ಕೂಡಲೇ ಕೆಎಸ್ ಪಿ(KSP) ಆ್ಯಪ್ ನಲ್ಲಿ ದೂರು ನೀಡಿದರೆ ನಿಮ್ಮ ಮಾಹಿತಿ ಗೌಪ್ಯವಾಗಿ ಇಡಲಾಗುವುದು. ಇದರಿಂದ ಅಪರಾಧ ಕೃತ್ಯಗಳು ಕಡಿಮೆಯಾಗುತ್ತದೆ. ಒಂದು ದಾಖಲೆಯಾಗಿ ಉಳಿಯುತ್ತದೆ. ಪೊಲೀಸರಿಗೆ ಜನರ ಸಹಕಾರವು ಅತ್ಯಂತ ಮುಖ್ಯವಾಗಿದೆ ಎಂದರು.

ಪೋಷಕರು ಮಕ್ಕಳ ಕೈಯಲ್ಲಿ ಬೈಕ್ ನೀಡಿದರೆ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು.
ಪೋಷಕರು ಸಣ್ಣ ಮಕ್ಕಳ ಕೈಯಲ್ಲಿ ಬೈಕ್ ನೀಡಿದರೆ ಪೋಷಕರು ಒಂದು ದಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಜಿಲ್ಲೆಯ ಎರಡು ಕಡೆಗಳಲ್ಲಿ ಮಕ್ಕಳ ಕೈಯಲ್ಲಿ ಬೈಕ್ ನೀಡಿದ್ದ ಪೋಷಕರಿಗೆ ನ್ಯಾಯಾಲಯ ಒಂದು ದಿನ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಪೋಷಕರು ಮಕ್ಕಳು ಕೈಯಲ್ಲಿ ಬೈಕ್ ಕೊಡುವ ಮುನ್ನ ಎಚ್ಚರಿಕೆಯಿಂದ ಇರಬೇಕು. ಬೈಕ್ ತೂಕ ಮಕ್ಕಳಿಗೆ ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಚಿಕ್ಕ ಮಕ್ಕಳಿಗೆ ಬೈಕ್ ಕೊಟ್ಟರೆ ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು…

ವರದಿಗಾರರು: ಭರತ ಪೂಜಾರ (ಕಲ್ಲೂರ)

ಹೆಚ್ಚಿನ ಸುದ್ದಿ