Saturday, April 4, 2026
Homeಆರೋಗ್ಯAI ತಂತ್ರಜ್ಞಾನದೊಂದಿಗೆ ಸುರಕ್ಷಿತ ಡಯಾಲಿಸಿಸ್ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಗಳು ಸಿದ್ಧ: ದಿನೇಶ್ ಗುಂಡೂರಾವ್

AI ತಂತ್ರಜ್ಞಾನದೊಂದಿಗೆ ಸುರಕ್ಷಿತ ಡಯಾಲಿಸಿಸ್ ಸೇವೆ ನೀಡಲು ಸರ್ಕಾರಿ ಆಸ್ಪತ್ರೆಗಳು ಸಿದ್ಧ: ದಿನೇಶ್ ಗುಂಡೂರಾವ್

ಬೆಂಗಳೂರಿನ K C ಜನರಲ್ ಆಸ್ಪತ್ರೆಯಲ್ಲಿ AI ಚಾಲಿತ ಸ್ಮಾರ್ಟ್ ಮಾನಿಟರಿಂಗ್ ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್

ಬೆಂಗಳೂರಿನಂತ ನಗರದಲ್ಲಿ ಎಲ್ಲ ವ್ಯವಸ್ಥೆ ಲಭ್ಯವಿರುತ್ತದೆ. ಆದರೆ ಗ್ರಾಮೀಣ ಭಾಗಗಳಲ್ಲಿ AI ತಂತ್ರಜ್ಞಾನ ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೆ ವರದಾನ.
AI-ಚಾಲಿತ ಸ್ಮಾರ್ಟ್ ಮಾನಿಟರಿಂಗ್ ಪೋರ್ಟಲ್, ರೋಗಿಗಳ ಸುರಕ್ಷತೆ ಮತ್ತು ಡಯಾಲಿಸಿಸ್ ಆರೈಕೆಯನ್ನು ಬಲಪಡಿಸುವ ಅತ್ಯಾಧುನಿಕ ವ್ಯವಸ್ಥೆ.

ಕ್ಲಿನಿಕಲ್, ಕಾರ್ಯಾಚರಣೆ ಮತ್ತು ನೈರ್ಮಲ್ಯ ಇವುಗಳನ್ನು ಮೇಲ್ವಿಚಾರಣೆ ಮಾಡಲು ಪೋರ್ಟಲ್ ನೈಜ-ಸಮಯದ ವೀಡಿಯೊ ವಿಶ್ಲೇಷಣೆಯನ್ನು ನೀಡುತ್ತದೆ. ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ರೋಗಿಗಳ ಆರೈಕೆಯನ್ನು ಮಾಡಲು ಇದು ಸಹಾಯಕ.

  • ಡಯಾಲಿಸಿಸ್ ಚಿಕಿತ್ಸೆಯ ಅನುಸರಣೆ
  • ಸೋಂಕು ನಿಯಂತ್ರಣ ಪ್ರೋಟೋಕಾಲ್ಗಳು
  • ರೋಗಿ ಆಸ್ಪತ್ರೆಯಲ್ಲಿ ಕಾಯುವ ಸಮಯ
  • ಯಂತ್ರ ಬಳಕೆ
  • ಸಿಬ್ಬಂದಿ ಸ್ಪಂದನೆ
  • ಸಲಕರಣೆಗಳ ನೈರ್ಮಲ್ಯತೆ ಹೀಗೆ ಎಲ್ಲ ವಿಭಾಗಗಳಲ್ಲಿ AI ಮೇಲ್ವಿಚಾರಣೆ ಮಾಡಲಿದೆ. ಸ್ವಯಂಚಾಲಿತ KPI ಟ್ರ್ಯಾಕಿಂಗ್ ಮತ್ತು ಡೇಟಾ ಆಧಾರಿತ ಕ್ಲಿನಿಕಲ್ ನಿರ್ಧಾರಗಳನ್ನು ಇದು ನಿಖರವಾಗಿ ತಿಳಿಸುತ್ತದೆ. ಇದರಿಂದ ರೋಗಿಗಳ ಸುರಕ್ಷಿತೆಗೆ ಇನ್ನಷ್ಟು ಮಹತ್ವ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ಕೆಸಿ ಜನರಲ್ ಆಸ್ಪತ್ರೆಯ ವೈಧ್ಯಾಧಿಕಾರಿಗಳು, ನೆಪ್ರೋಪ್ಲಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ