
ಬೆಂಗಳೂರಿನ K C ಜನರಲ್ ಆಸ್ಪತ್ರೆಯಲ್ಲಿ AI ಚಾಲಿತ ಸ್ಮಾರ್ಟ್ ಮಾನಿಟರಿಂಗ್ ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್
ಬೆಂಗಳೂರಿನಂತ ನಗರದಲ್ಲಿ ಎಲ್ಲ ವ್ಯವಸ್ಥೆ ಲಭ್ಯವಿರುತ್ತದೆ. ಆದರೆ ಗ್ರಾಮೀಣ ಭಾಗಗಳಲ್ಲಿ AI ತಂತ್ರಜ್ಞಾನ ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೆ ವರದಾನ.
AI-ಚಾಲಿತ ಸ್ಮಾರ್ಟ್ ಮಾನಿಟರಿಂಗ್ ಪೋರ್ಟಲ್, ರೋಗಿಗಳ ಸುರಕ್ಷತೆ ಮತ್ತು ಡಯಾಲಿಸಿಸ್ ಆರೈಕೆಯನ್ನು ಬಲಪಡಿಸುವ ಅತ್ಯಾಧುನಿಕ ವ್ಯವಸ್ಥೆ.
ಕ್ಲಿನಿಕಲ್, ಕಾರ್ಯಾಚರಣೆ ಮತ್ತು ನೈರ್ಮಲ್ಯ ಇವುಗಳನ್ನು ಮೇಲ್ವಿಚಾರಣೆ ಮಾಡಲು ಪೋರ್ಟಲ್ ನೈಜ-ಸಮಯದ ವೀಡಿಯೊ ವಿಶ್ಲೇಷಣೆಯನ್ನು ನೀಡುತ್ತದೆ. ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ರೋಗಿಗಳ ಆರೈಕೆಯನ್ನು ಮಾಡಲು ಇದು ಸಹಾಯಕ.
- ಡಯಾಲಿಸಿಸ್ ಚಿಕಿತ್ಸೆಯ ಅನುಸರಣೆ
- ಸೋಂಕು ನಿಯಂತ್ರಣ ಪ್ರೋಟೋಕಾಲ್ಗಳು
- ರೋಗಿ ಆಸ್ಪತ್ರೆಯಲ್ಲಿ ಕಾಯುವ ಸಮಯ
- ಯಂತ್ರ ಬಳಕೆ
- ಸಿಬ್ಬಂದಿ ಸ್ಪಂದನೆ
- ಸಲಕರಣೆಗಳ ನೈರ್ಮಲ್ಯತೆ ಹೀಗೆ ಎಲ್ಲ ವಿಭಾಗಗಳಲ್ಲಿ AI ಮೇಲ್ವಿಚಾರಣೆ ಮಾಡಲಿದೆ. ಸ್ವಯಂಚಾಲಿತ KPI ಟ್ರ್ಯಾಕಿಂಗ್ ಮತ್ತು ಡೇಟಾ ಆಧಾರಿತ ಕ್ಲಿನಿಕಲ್ ನಿರ್ಧಾರಗಳನ್ನು ಇದು ನಿಖರವಾಗಿ ತಿಳಿಸುತ್ತದೆ. ಇದರಿಂದ ರೋಗಿಗಳ ಸುರಕ್ಷಿತೆಗೆ ಇನ್ನಷ್ಟು ಮಹತ್ವ ಸಿಗಲಿದೆ ಎಂದರು.
ಈ ಸಂದರ್ಭದಲ್ಲಿ ಕೆಸಿ ಜನರಲ್ ಆಸ್ಪತ್ರೆಯ ವೈಧ್ಯಾಧಿಕಾರಿಗಳು, ನೆಪ್ರೋಪ್ಲಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
