
ಮಾರನಾಳ ತಂಡ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳ ತಂಡದ ಸಮೀಪದಲ್ಲಿ ಇರುವ ರಾಮರಾವು ನಗರದಲ್ಲಿ ಇಂದು ಬಂಜಾರ ಸಮುದಾಯದವರ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಮೀಸಲಿಟ್ಟಿದ್ದ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತೋತ್ಸವದಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತು.
18ನೇ ಶತಮಾನದಲ್ಲಿ ಬಂಜಾರ ಸಮುದಾಯವನ್ನು ಸಂಘಟಿಸಿ, ಅದಕ್ಕೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸ್ವರೂಪ ನೀಡಿ ಶ್ರಮಿಸಿದ ಸೇವಾಲಾಲರ ತತ್ವಾದರ್ಶಗಳು ಇಂದಿಗೂ ನಮ್ಮೆಲ್ಲರಿಗೆ ಮಾದರಿಯಾಗಿವೆ. ಹಾಗೂ
ಭರತ ಖಂಡದ ಧಾರ್ಮಿಕ ರಾಯಭಾರಿ ಎಂದು ಹೆಸರಾದ ಸಂತ ಸೇವಾಲಾಲ್ ಮಹಾರಾಜರು ಹಲವು ಪವಾಡಗಳ ಮೂಲಕ ಜನರ ಮನ – ಗೆದ್ದವರು. ತಮ್ಮ ಲೀಲೆಗಳನ್ನು ಪ್ರದರ್ಶನ ಮಾಡುತ್ತಾ ಜಗದಂಬೆಯ ಆರಾಧಕರಾಗಿ ಇಡೀ ಜೀವನಮಾನ ಉದ್ದಕ್ಕೂ ಬ್ರಹ್ಮಚರ್ಯವನ್ನೇ ಪಾಲನೆ ಮಾಡಿದ ಸಂತ ಸೇವಾಲಾಲ್ ಇಂದಿಗೂ ಜನ ಮಾನಸಿನಲ್ಲಿ ಗುರುವಿನ ಸ್ಥಾನವನ್ನು ಪಡೆದಿದ್ದಾರೆ.
ಇತಃ ಮಾಹಾನ ಸಂತರ ದಿನವನ್ನಿ ಇಂದು ಆಚರಿಸುವುದು ಬಹಳ ಸಂತೋಷಧಾಯಕ ಎಂದು ಗುರು – ಹಿರಿಯರು ಮನದಾಳದ ಮಾತನು ಹೇಳಿದರು
ಇದೆ ಸಂದರ್ಭದಲ್ಲಿ ತಿರುಪತಿ ಚವ್ಹಾಣ, ಬಾಬು ಚವ್ಹಾಣ, ಧೀರು ನಾಯಕ , ಚಂದು, ಹಾಗೂ ಊರಿನ ಗುರು – ಹಿರಿಯರು ಉಪಸ್ಥಿತರಿದ್ದರು.
ವರದಿ : ಶಿವು ರಾಠೋಡ ಯಾದಗಿರಿ.
