Monday, February 9, 2026
HomeUncategorizedಯೂನಿಯನ್ ಬ್ಯಾಂಕಿನಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ ಮಾಡದೆ ಅಪಮಾನ ಘಟನೆ.

ಯೂನಿಯನ್ ಬ್ಯಾಂಕಿನಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ ಮಾಡದೆ ಅಪಮಾನ ಘಟನೆ.

ಲಿಂಗಸುಗೂರು:ಪಟ್ಟಣದ ಯೂನಿಯನ್ ಬ್ಯಾಂಕಿನಲ್ಲಿ 76 ನೇ ಗಣರಾಜ್ಯೋತ್ಸವ ಆಚರಣೆ ಮಾಡದೆ,
ಧ್ವಜಾರೋಹಣ ಮಾಡದೆ ಅಪಮಾನ ಮಾಡಿರುವ ಘಟನೆ ನಡೆದಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿದರ್ಶನ ಇದ್ದರು ಧ್ವಜಾರೋಹಣ ಮಾಡದೆ ಸರ್ಕಾರದ ಆದೇಶ ಗಾಳಿಗೆ ತೂರಿದಂತಾಗಿದೆ,ಬ್ಯಾಂಕಿನ ವ್ಯವಸ್ಥಾಪಕ ರಮೇಶ ಅವರಿಗೆ ಸಂಪರ್ಕಿಸಿದಾಗ ಹಾರಿಕೆ ಉತ್ತರ ನೀಡಿ ಇದಕ್ಕೂ ನನಗೂ ಸಂಬಂಧವಿಲ್ಲ ಎನ್ನುತ್ತಾರೆ,ಧ್ವಜಾರೋಹಣ ಮಾಡಲೇ ಬೇಕು ಎನ್ನುವ ನಿಯಮ ನಮಗಿಲ್ಲ, ಎಂದು ಹೇಳಿ ಸಂವಿದಾನಕ್ಕೆ ಅಪಮಾನ ಮಾಡುವ ರೀತಿಯಲ್ಲಿ ಮಾತಾಡುತ್ತಾರೆ ಎಂಬುದು ಕಂಡು ಬರುತ್ತಿದೆ. ಗಣರಾಜ್ಯೋತ್ಸವ ಆಚರಣೆ ಮಾಡದೆ ಅಪಮಾನ ಮಾಡಿರುವ ಯೂನಿಯನ್‌ ಬ್ಯಾಂಕಿನ ವ್ಯವಸ್ಥಾಪಕ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಇಲ್ಲವಾದಲ್ಲಿ ಈ ಘಟನೆಗಳು ಮುಂದಿನ ದಿನಗಳಲ್ಲಿ ಇನ್ನುಳಿದ ಬ್ಯಾಂಕ್ ಗಳಲ್ಲಿ, ವಿವಿಧ ಕಾರ್ಯಾಲಯಗಳಲ್ಲಿಯೂ ಸಂಭಾವಿಸಬಹುದಾಗಿದೆ, ದೇಶದ ಮಹತ್ತರವಾದ ದಿನವನ್ನು ಲೆಕ್ಕಿಸದ ವ್ಯವಸ್ಥಾಪಕ ರಮೇಶ ರವರ ಮೇಲೆ ಮೇಲಧಿಕಾರಿಗಳು ಯಾವ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಿದೆ.

ಹೆಚ್ಚಿನ ಸುದ್ದಿ