Sunday, December 22, 2024
HomeUncategorized*ಡಾ//ಬಿ.ಆರ್.ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನಾ ಸಂಪುಡದಿಂದ...

*ಡಾ//ಬಿ.ಆರ್.ಅಂಬೇಡ್ಕರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನಾ ಸಂಪುಡದಿಂದ ಕೈ ಬಿಡುವಂತೆ ಸಂಗಣ್ಣ ಚಿಚೋಳಿ ಆಗ್ರಹ

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಬಣ ಮುಖಂಡರ ವತಿಯಿಂದ ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ಬರೆದಂತ ಮನವಿಪತ್ರವನ್ನು ಕೆಂಭಾವಿ ಉಪ ತಹಶಿಲ್ದಾರ ಕಾರ್ಯಾಲಯದ ಸಿಬ್ಬಂದಿಗಳ ಮುಖಾಂತರ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಮಿತಿಯ ಮುಖಂಡ ಸಂಗಣ್ಣ ಚಿಂಚೋಳಿ ಮಾತನಾಡುತ್ತಾ ಸಂವಿಧಾನ ಶಿಲ್ಪಿ ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ರಾಜ್ಯ ಸಭೆಯಲ್ಲಿ ಸಂವಿಧಾನ ವಿಚಾರದ ಬಗ್ಗೆ ಚರ್ಚೆ ನಡೆದಂತ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿ ಅಂಬೇಡ್ಕರ್ ಅವರಿಗೆ ಅಪಮಾನವುಂಟು ಮಾಡಿದಕ್ಕಾಗಿ ಕೂಡಲೇ ಸಮಸ್ತ ನಾಡಿನ ಜನತೆಯ ಕ್ಷಮೆ ಕೋರ ಬೇಕು ಪ್ರಧಾನ‌ ಮಂತ್ರಿ ನರೇಂದ್ರ ಮೋದಿ ಜೀಯವರು ಹಿಂದುಳಿದ ,ಶೋಷಿತ ಜನಾಂಗಕ್ಕೆ ಸಂವಿಧಾನ ಕೊಟ್ಟಂತ ಮಹಾನ್ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನಾ ಕೇಂದ್ರ ಸಂಪುಟದಿಂದ ಕೂಡಲೇ ವಜಾ ಮಾಡ ಬೇಕು ಎಂದರು.
ಈ ಸಂದರ್ಭದಲ್ಲಿ ಬಸವರಾಜ್ ಕಟ್ಟಿಮನಿ,ಮರೆಪ್ಪ ಮಾಳಹಳ್ಳಿ,ಆರ.್.ಎಸ್.ಮಾಲಗತ್ತಿ,ಬಸವಣ್ಣೆಪ್ಪ ಮಾಳಳ್ಳಿಕರ್,ರಾಯಪ್ಪ ಯತ್ತಾಳ,ದೇವರಾಜ್ ದೊರೆ ಮರೆಪ್ಪ ಕಟ್ಟಿಮನಿ,ಖಂಡಪ್ಪ ಯಾಳಗಿ,ಮಹೇಶ್ ಸಿ ಕಟ್ಟಿಮನಿ,ಪರಮಣ್ಣ ಎಸ್ ಬಡಿಗೇರ್, ಚಂದ್ರು ಯಾಳಗಿ,ಮಲ್ಲು ಕಟ್ಟಿಮನಿ,ರವಿ ಯಾಳಗಿ,ನಿಂಗಪ್ಪ ನಗನೂರ್ ಇತರರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋವಿ*

ಹೆಚ್ಚಿನ ಸುದ್ದಿ