Sunday, December 22, 2024
HomeUncategorizedಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಅಗಲಿಕರಣ ಮಾಡಿ ಅಪಘಾತಗಳು ಆಗುವುದನ್ನಾ ತಡೆಯುವಂತೆ ಕ.ರಾ.ದ.ಸಂ.ಸಮಿತಿ ಮುಖಂಡರ ಆಗ್ರಹ

ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಅಗಲಿಕರಣ ಮಾಡಿ ಅಪಘಾತಗಳು ಆಗುವುದನ್ನಾ ತಡೆಯುವಂತೆ ಕ.ರಾ.ದ.ಸಂ.ಸಮಿತಿ ಮುಖಂಡರ ಆಗ್ರಹ

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕುಂಬಾರಪೇಟ ಮುಖ್ಯ ರಸ್ತೆಯಿಂದ ತಿಂಥಣಿ ಬ್ರಿಡ್ಜ್ ಹಾಗೂ ಕುಂಬಾರಪೇಟ ಮುಖ್ಯ ರಸ್ತೆಯಿಂದ ಶಹಾಪುರ ತಾಲೂಕಿನ ಹತ್ತಿಗುಡುರ್ ವರೆಗೆ ಇಕ್ಕಟ್ಟಾದ ಸಿಂಗಲ್ ಡಾಂಬರೀಕರಣ ರಸ್ತೆಯನ್ನು ಅಗಲಿಕರಣ ಮಾಡಿ ಸುಲಭ‌ ಸಂಚಾರಕ್ಕೆ ಅನುವು ಮಾಡಿಕೊಡುವಂತೆ.
ಇಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ) ಬಣ ಮುಖಂಡರು ತಹಸೀಲ್ದಾರರ ಮುಖಾಂತರ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿಪತ್ರವನ್ನು ಸಲ್ಲಿಸಿದರು.
ರಾಜ್ಯ ಹೆದ್ದಾರಿ ರಸ್ತೆಯು ಬೀದರ TO ಶ್ರೀರಂಗಪಟ್ಟಣ ರಸ್ತೆಯಾಗಿದ್ದು, ರಸ್ತೆಯಲ್ಲಿ ಪ್ರತಿ ನಿತ್ಯ ಸುಮಾರು ವಾಹನಗಳು ಚಲಿಸುತ್ತಿರುವುದರಿಂದ ಈ ಒಂದು ರಸ್ತೆಯು ಇಕ್ಕಟ್ಟಾದ ಸಿಂಗಲ್ ಡಾಂಬರೀಕರಣ ರಸ್ತೆಯಾಗಿದೆ.
ರಸ್ತೆಯ ಅಕ್ಕ ಪಕ್ಕದಲ್ಲಿ 3 ಅಡಿಯಷ್ಟು ರಸ್ತೆ ಕೊರೆದಿರುವುದರಿಂದ ಹಗಲಿರಳು ನೂರಾರು ವಾಹನಗಳು ಚಲಿಸುವ ರಸ್ತೆಯಲ್ಲಿ ಹಲವಾರು ಅಪಘಾತಗಳು ಸಂಭವಿಸಿ,ಪ್ರಾಣಹಾನಿಯಾಗಿರುವ ಸಾಕಷ್ಟು ಉದಾಹರಣೆಗಳಿವೆ
ಒಂದು ತಿಂಗಳಲ್ಲಿ ನಾಲ್ಕೈದು ಅಪಘಾತಗಳು ಆಗುವುದಂತ ಖಚಿತ ಎಂದು ಮುಖಂಡರು ಬೇಸರ ವ್ಯಕ್ತಪಡಿಸಿದರು.
ಕೂಡಲೇ ಇಕ್ಕಟ್ಟಾದ ಸಿಂಗಲ್ ಡಾಂಬರೀಕರಣ ರಸ್ತೆಯನ್ನು ಅಗಲಿಕರಣ ಮಾಡಿ ವಾಹನ ಸವಾರರಿಗೆ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದರು.
ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸಿದದ್ದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವುಲಿಂಗ ಹಸನಾಪುರ,ಸುರಪುರ ತಾಲೂಕು ಸಂಚಾಲಕ ತಿಪ್ಪಣ್ಣ ಭಂಡಾರಿ ಶೆಳ್ಳಗಿ, ಸಮಿತಿಯ ಅಲ್ಪಸಂಖ್ಯಾತ ತಾಲೂಕು ಸಂಚಾಲಕ ಎಮ್.ಪಟೇಲ್ ಉಪ ವಿಭಾಗೀಯ ಸಂಚಾಲಕ ರಮೇಶ್ ಬಡಿಗೇರ್ ಬಾಚಿಮಟ್ಟಿ,ಮುಖಂಡರಾದ ರಾಜು ಬಡಿಗೇರ್, ವೆಂಕಟೇಶ ದೇವಾಪೂರ್,ಚನ್ನಬಸವ ತಳವಾರ್,ಶೇಖರ್ ಮಂಗಳೂರು, ಅಬ್ದುಲ್ ಹಲೀಮ್,ಯಂಕಪ್ಪ ಹೊಸಮನಿ,ಗ್ಯಾನಪ್ಪ ಕಾಂಬ್ಳೆ, ಹಣಮಂತ ರತ್ತಾಳ,ಖಾಜಾ ಅಜ್ಮೀರ್,ಶರಮುದ್ದೀನ್ ಖುರೇಶಿ,ಸಿದ್ದಪ್ಪ ಝಂಡದಕೇರಾ,ಮೌನೇಶ ತಳ್ಳಳ್ಳಿ,ಮೌನೇಶ ದೇವತ್ಕಲ್,ದೇವೇಂದ್ರ ಬಡಿಗೇರ್, ಸಮಿತಿಯ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

ವರದಿ : ಮೌನೇಶ ಆರ್ ಭೋಯಿ

ಹೆಚ್ಚಿನ ಸುದ್ದಿ