ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಕಚೇರಿಯಲ್ಲಿ ಅಧಿಕಾರಿಗಳದ್ದೆ ದರ್ಬಾರ್..
ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿಗಳು
ಸರ್ವಾಧಿಕಾರೆ ನಡೆಸುತ್ತಿರುವ ಅಧಿಕಾರಿಯ ನಡೆಗೆ ಸಾರ್ವಜನಿಕರು ಬೇಸರ..
ಗ್ರಾಮೀಣ ಪ್ರದೇಶಗಳಲ್ಲಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆಯಲು ಬಂದ ಸಾರ್ವಜನಿಕರು..
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆ ಆದರೂ ಕೂಡಾ ಕಚೇರಿಗೆ ಬಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು..
ಯಾದಗಿರಿ ನಗರದಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರಿಂಗ್ ಕಚೇರಿಯಲ್ಲಿರುವ ಕುರ್ಚಿ ಖಾಲಿ ಖಾಲಿ..
ಕಚೇರಿಯಲ್ಲಿ ಅಧಿಕಾರಿಗಳು & ಸಿಬ್ಬಂದಿಗಳು ಇಲ್ಲದೆ ಕಚೇರಿಗೆ ಬಂದು ಬರಿಗೈಯಲ್ಲಿ ವಾಪಸ್ಸು ಆಗುತ್ತಿರುವ ಸಾರ್ವಜನಿಕರು..
ಜಿಲ್ಲೆಯ ಗಡಿ ಭಾಗದಿಂದ ಜಿಲ್ಲಾ ಕೇಂದ್ರಕ್ಕೆ ಬಂದು ಸುಖಾ ಸಮ್ಮನೆ ವಾಪಸ್ಸಾಗುತ್ತಿರುವ ಸಾರ್ವಜನಿಕರು..
ಗ್ರಾಮೀಣ ಪ್ರದೇಶದಿಂದ ಕೆಲಸ ಬಗಸಿ ಬಿಟ್ಟು ಇಂಜಿನಿಯರಿಂಗ್ ಕಚೇರಿಗೆ ಬಂದರೆ ನಿಗದಿತ ಸಮಯಕ್ಕೆ ಬಾರದ ಅಧಿಕಾರಿಗಳ ನಡೆಗೆ ಸಾರ್ವಜನಿಕರ ಆಕ್ರೋಶ..
ಲೇಟ್ ಲತೀಫ್ ಅಧಿಕಾರಿಯ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೊ..ಇಲ್ಲವೋ…. ಎಂಬುದು ಕಾದು ನೋಡೋಣ
ವರದಿ : ಮೌನೇಶ ಆರ್ ಭೋಯಿ



