Monday, February 9, 2026
HomeUncategorizedತಿಂಥಣಿ & ಹುಣಸಗಿ ಪಟ್ಟಣಕ್ಕೆ ನೂತನ ಬಸ್ಸ್ ಆರಂಭ : ಚಾಲಕ & ನಿರ್ವಾಕರಿಗೆ ಗ್ರಾಮಸ್ಥರಿಂದ...

ತಿಂಥಣಿ & ಹುಣಸಗಿ ಪಟ್ಟಣಕ್ಕೆ ನೂತನ ಬಸ್ಸ್ ಆರಂಭ : ಚಾಲಕ & ನಿರ್ವಾಕರಿಗೆ ಗ್ರಾಮಸ್ಥರಿಂದ ಸನ್ಮಾನ.

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದಕ್ಷಿಣ ಕಾಶಿ ಜಗದ್ಗುರು ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಹುಣಸಗಿ ಪಟ್ಟಣದಿಂದ ತಿಂಥಣಿ ಗ್ರಾಮಕ್ಕೆ ನೂತನ ಬಸ್ ಆರಂಭ.
ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಅದ್ಧೂರಿ ಸನ್ಮಾನ.
ಹುಣಸಗಿ ಪಟ್ಟಣದಿಂದ ಬಲಶೆಟ್ಟಿಹಾಳ ಕ್ರಾಸ್, ನಿಂಗಾಪುರ ಕ್ರಾಸ್, ಕಕ್ಕೇರಾ ಪಟ್ಟಣ, ಪೀರಗಾರ ದೊಡ್ಡಿ, ಹುಣಸಿಹೊಳೆ,ಶಾಂತಪುರ ಕ್ರಾಸ್ ತಿಂಥಣಿ ಗ್ರಾಮದ ಮೂಲಕ ಜಗದ್ಗುರು ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ತೆರಳುವುದು ತಿಂಥಣಿ ಮತ್ತು ಹುಣಸಗಿ ಪಟ್ಟಣಕ್ಕೆ ಇಲ್ಲಿಯವರೆಗೆ ನೇರವಾಗಿ ಯಾವುದೇ ಬಸ್ಸಿನ ಸೌಕರ್ಯವಿಲ್ಲದೆ ಖಾಸಗಿ ವಾಹನಗಳ ಮೊರೆ ಹೋಗಬೇಕಾಗಿತ್ತು ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹುಣಸಗಿ ವತಿಯಿಂದ ಹುಣಸಗಿ ಪಟ್ಟಣಕ್ಕೆ ಹೋಗುವ ಸಾರ್ವಜನಿಕರಿಗೆ ಬಹಳ  ಅನುಕೂಲವಾಗಿದೆ ಎಂದು ತಿಂಥಣಿ ಗ್ರಾಮದ ಸಾರ್ವಜನಿಕರು ಹರ್ಷ ವ್ಯಕ್ತಿ.
ಈ ಸಂದರ್ಭದಲ್ಲಿ ಮೌನೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ದೇವೇಂದ್ರ ಮಹಾಸ್ವಾಮಿ, ದೇವಸ್ಥಾನ ವ್ಯವಸ್ಥಾಪಕ ಶಿವಾನಂದ ಸ್ವಾಮಿ, ಗ್ರಾಮಸ್ಥರಾದ ಶರಣಯ್ಯ ಸ್ವಾಮಿ ಹಿರೇಮಠ, ರಾಮಣ್ಣ ಅಂಬಿಗೇರ್, ದೇವಸ್ಥಾನ ವಾಚಮ್ಯಾನ್ ಭಾಷಸಾಬ ,ಪರಶುರಾಮ ಪೂಜಾರಿ, ಮಾನಪ್ಪ ಅರಣ್ಯ ಇಲಾಖೆ, ಹಣಮಂತ ಅಂಬಿಗೇರ್, ಇತರರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ.*

ಹೆಚ್ಚಿನ ಸುದ್ದಿ