Monday, February 9, 2026
HomeUncategorizedನಗರದ ವಿವಿದೆಡ ೬೯ ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ...

ನಗರದ ವಿವಿದೆಡ ೬೯ ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಮಲ್ಲು ಕಬಾಡಗೇರಾ*

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ನಗರದ ವಿವಿದೆಡೆ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯ ವತಿಯಿಂದ ಇಂದು ೬೯ ನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತ,ಬಸ್ ನಿಲ್ದಾಣ ಹತ್ತಿರದ ಆಟೋ ಚಾಲಕರ ಘಟಕ ವೃತ್ತ,ಸಣ್ಣ ಬಜಾರ & ದೊಡ್ಡ ಬಜಾರದಲ್ಲಿರುವ ಕನ್ನಡ ಧ್ವಜ ಸ್ತಂಬಗಳಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಅಧ್ಯಕ್ಷ ಮಲ್ಲು ಕಬಾಡಗೇರಾ ತಾ.ಪ್ರ.ಕಾರ್ಯದರ್ಶಿ ಶಿವಿರಾಜ್ ವಗ್ಗರು ಮಾತನಾಡುತ್ತಾ ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರೇ ಸಾರ್ವಭೌಮರೆಂದರು ಹಾಗೂ ನಾವು ನೀವು ಅತೀ ಹೆಚ್ಚು ನಮ್ಮ ಮಾತೃ ಭಾಷೆಯಾದ ಕನ್ನಡ ಭಾಷೆ, ನಾಡು,ನುಡಿ,ನೆಲ,ಜಲ,ರೈತಪರ,ವಿದ್ಯಾರ್ಥಿಗಳಪರ ಅನ್ಯಾಯವಾದಾಗ ಬೀದಿಗಿಳಿದು ಹೋರಾಟ ಮಾಡಲು ನಾವು ನೀವೆಲ್ಲರೂ ಪಕ್ಷಾತೀತವಾಗಿ,ಜಾತ್ಯಾತೀತವಾಗಿ ಹೋರಾಟ ಮಾಡಿ ನ್ಯಾಯ ಒದಗಿಸಿ ಕೊಡುವ ಕೆಲಸ ಮಾಡ ಬೇಕು ಎಂದರು.
ಕರ್ನಾಟಕದಲ್ಲಿ ಕನ್ನಡಿಗರೇ ಅತೀ ಹೆಚ್ಚು ಉದ್ಯೋಗ ದೊರಕಿಸಿಕೊಡಲು ಹೋರಾಟ ಅನಿವಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ‌ಜಯ ಕರ್ನಾಟಕ ರಕ್ಷಣಾ ಸೇನೆ ಯಾದಗಿರಿ ಜಿಲ್ಲಾ ಕಾರ್ಯಾಧ್ಯಕ್ಷ ಶರಣು ಭೈರಿಮಡ್ಡಿ, ಕಾರ್ಯದರ್ಶಿ ಕೃಷ್ಣಾ ಹಾವಿನ್ ಕುಂಬಾರಪೇಟ,ಪ್ರ.ಸಂ.ರಾಘು ಗೋಗಿಕೇರಿ, ಸ.ಖಂ.ಮುಕ್ತಿಯರ್,ಮುಖಂಡರಾದ ಸಾಯಬಣ್ಣ ಕೋಟೆ,ಹನುಮಂತ ನಾಯಕ ಶಿಬಾರಬಂಡಿ,ದೇವು ನಾಯಕ ಕಲ್ಲೋಡಿ,ವಾಸು ನಾಯಕ ಭೈರಿಮಡ್ಡಿ, ಬಲಭೀಮ ನಾಯಕ,ರೈತ ಘಟಕ ಅಧ್ಯಕ್ಷ ಧನರಾಜ್ ರಾಥೋಡ್,ನಗರ ಘಟಕ ಅಧ್ಯಕ್ಷ ಶಿವಕುಮಾರ್ ದಿವಳಗುಡ್ಡ,ಆಟೋ ಚಾಲಕ ಘಟಕ ಅಧ್ಯಕ್ಷ ಹನುಮಂತ ಶುಕ್ಲಾ,ಪದಾಧಿಕಾರಿಗಳಾದ ರಂಗಪ್ಪ ರತ್ನಾಕರ್,ಗೊಣ್ಣೇಪ್ಪ ಗೌಡ ಹಸನಾಪುರ,ಸತ್ಯ ಚಿದಾನಂದ ಲಕ್ಷ್ಮೀಪುರ,ಮಹಾಂತೇಶ ಮಂಡಗಳ್ಳಿ ಇತರರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ*

ಹೆಚ್ಚಿನ ಸುದ್ದಿ