Monday, February 9, 2026
HomeUncategorizedಕಳಪೆ ಮಟ್ಟದ ರಸಗೊಬ್ಬರ, ಬೀಜ ಕ್ರಿಮಿ ಕೀಟನಾಶಕ ಔಷಧಿ ಮಾರಾಟ : ಕ್ರಮಕ್ಕೆ ಪರಶುರಾಮ ಬೋನಾಳ...

ಕಳಪೆ ಮಟ್ಟದ ರಸಗೊಬ್ಬರ, ಬೀಜ ಕ್ರಿಮಿ ಕೀಟನಾಶಕ ಔಷಧಿ ಮಾರಾಟ : ಕ್ರಮಕ್ಕೆ ಪರಶುರಾಮ ಬೋನಾಳ ಆಗ್ರಹ.*

ಕೆಂಭಾವಿ : ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿರುವ ಅಲ್ಲಮಪ್ರಭು ಆಗ್ರೋ ಏಜೇನ್ಸಿಯವರಲ್ಲಿ ಕಳಪೆ ಗುಣಮಟ್ಟದ ಕ್ರಿಮಿಕೀಟನಾಶಕ ಔಷಧಿ ಮಾರಾಟ ಮಾಡುತ್ತಿರುವ
ಖಚಿತ ಮಾಹಿತಿ ಪಡೆದ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕೆಂಭಾವಿ ಹೋಬಳಿ ಘಟಕ ಅಧ್ಯಕ್ಷ ಪರಶುರಾಮ ಬೋನಾಳ ನೇತೃತ್ವದಲ್ಲಿ
ಕೆಂಭಾವಿ ಹೋಬಳಿ ಉಪ ತಹಸೀಲ್ದಾರ ಮೂಲಕ ಜಂಟಿ ಕೃಷಿ ನಿರ್ದೆಶಕರು ಯಾದಗಿರಿ ಜಿಲ್ಲಾ ಇವರಿಗೆ ಮನವಿಪತ್ರವನ್ನು ಸಲ್ಲಿಸಿದರು.
ಎಂ.ಬೊಮ್ಮನಹಳ್ಳಿ ಗ್ರಾಮದ ರೈತ ರಾಮನಗೌಡ ಎಂಬುವರು ತಮ್ಮ ಹೊಲದಲ್ಲಿ ಬೆಳೆದಂತ  ಹತ್ತಿ ಬೆಳೆಗೆ ಔಷಧಿ ಸಿಂಪಡಿಸಿದಾಗ ಹತ್ತಿ ಬೆಳೆ ಸುಟ್ಟು ಸುಮಾರು 5-6 ಲಕ್ಷ ರೂಪಾಯಿಗಳಷ್ಟು ಹತ್ತಿ ಬೆಳೆ  ನಷ್ಟವಾಗಿದ್ದರಿಂದ ರೈತನಿಗೆ ನೀಡಿದ ಕಳಪೆ ಗುಣಮಟ್ಟದ ರಸಗೊಬ್ಬರ ಹಾಗೂ ಬೀಜ,ಕ್ರಿಮಿ ಕೀಟ ನಾಶಕ ಔಷಧಿಯನ್ನು ಗ್ರಾಮೀಣ ಪ್ರದೇಶದ ರೈತರಿಗೆ ಸರಬರಾಜು ಮಾಡುತ್ತಿರುವ ಪಟ್ಟಣದ ಅಲ್ಲಮಪ್ರಭು ಆಗ್ರೋ ಏಜೇನ್ಸಿಯ ಮಾಲೀಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಅವರ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸ ಬೇಕು ಬೆಳೆ ನಷ್ಟವಾದ ರೈತರಿಗೆ ಅಲ್ಲಮಪ್ರಭು ಆಗ್ರೋ ಏಜೆನ್ಸಿ ಮಾಲೀಕರಿಂದ ಹಣ ವಸೂಲಿ ಮಾಡಿ ರೈತರಿಗೆ ನೀಡ ಬೇಕು
ರಸಗೊಬ್ಬರ, ಬೀಜ, ಕ್ರಿಮಿ ಕೀಟ ನಾಶಕ ಅಂಗಡಿಗಳಿಗೆ ಪರವಾನಿಗೆ ಕೊಡ ಬೇಕಾದ್ರೆ  ಕೃಷಿ ಇಲಾಖೆಯ ಅಧಿಕಾರಿಗಳು ಬಿ.ಎಸ್ಸಿ. ಪದವಿ ಪಡೆದ ಬಗ್ಗೆ ಧೃಢೀಕರಿಸಿಕೊಳ್ಳ ಬೇಕು ಯಾವ ಬೆಳೆಗೆ ಯಾವ ಸಮಯದಲ್ಲಿ ಯಾವ ರಸಗೊಬ್ಬರ, ಬೀಜ,ಕ್ರಿಮಿ ಕೀಟನಾಶಕ ಔಷಧಿ ಕೊಡಬೇಕೆಂಬ ಸಾಮಾನ್ಯ ಜ್ಞಾನ ಕೂಡ ಇಲ್ಲದವರಿಗೆ ಪರವಾನಿಗೆ ನೀಡುವುದರಿಂದ ಕಷ್ಟ ಪಟ್ಟು ರೈತ ಬೆಳೆದಂತ ಬೆಳೆಗಳಿಗೆ ಕಳಪೆ ಗುಣಮಟ್ಟದ ರಸಗೊಬ್ಬರ, ಬೀಜ,ಔಷಧಿ ಸರಬರಾಜು ಮಾಡುತ್ತಿರುವುದರಿಂದಲೇ ಇವತ್ತು ರೈತ ಸಂಕಷ್ಟಕ್ಕೀಡಾಗುತ್ತಿರುವುದು ನಮ್ಮ ಸಂಘಟನೆಯಿಂದ ಈ ಹಿಂದೆ ಹಲವಾರು ಬಾರಿ ಸುರಪುರ ತಾಲೂಕು ತಹಸೀಲ್ದಾರ, ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿಪತ್ರ ನೀಡಿದರು ಕೂಡಾ ಯಾವುದೇ ಪ್ರಯೋಜನವಾಗಿಲ್ಲಾ ಎಂದು ಬೇಸರ ವ್ಯಕ್ತಪಡಿಸುತ್ತಾ ಸಂಬಂಧಪಟ್ಟ ಅಧಿಕಾರಿಗಳು ಅಲ್ಲಮಪ್ರಭು ಆಗ್ರೋ ಏಜೆನ್ಸಿ ಮಾಲೀಕರೊಂದಿಗೆ ಶ್ಯಾಮಿಲಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕೆಂಭಾವಿ ಹೋಬಳಿ ಘಟಕ ಪದಾಧಿಕಾರಿಗಳಾದ ರವಿ ವೈ ಮಾಳ್ಳಳ್ಳಿಕರ್,ಸಾಯಿಬಣ್ಣ ಚನ್ನೂರ್,ರಾಮು ಯಾಳಗಿ, ಶ್ರೀಕಾಂತ ಮೊಪುಗಾರ,ಪರಶುರಾಮ ಕಟ್ಟಿಮನಿ ಇತರರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ*

ಹೆಚ್ಚಿನ ಸುದ್ದಿ