Thursday, March 26, 2026
HomeUncategorizedಗಾಂಜಾ ಸಪ್ಲೆ: ಆಗರದಹಳ್ಳಿ ಕ್ಯಾಂಪ್‌ ಮೇಲೆ ರೇಡ್‌ ಇಬ್ಬರು ಅರೆಸ್ಟ್.

ಗಾಂಜಾ ಸಪ್ಲೆ: ಆಗರದಹಳ್ಳಿ ಕ್ಯಾಂಪ್‌ ಮೇಲೆ ರೇಡ್‌ ಇಬ್ಬರು ಅರೆಸ್ಟ್.

ಭದ್ರಾವತಿ: ತಾಲ್ಲೂಕಿನ ಹೊಳೆ ಹೊನ್ನೂರು ಸಮೀಪದ ಆಗರದಹಳ್ಳಿ ಕ್ಯಾಂಪ್‌ನಲ್ಲಿ ಅಕ್ರಮವಾಗಿ ಸಂಗ್ರಹಿ ಸಿದ್ದ ಗಾಂಜಾವನ್ನ ಹೊಳೆಹೊನ್ನೂರು ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.

ಈ ಸಂಬಂಧ ಆಗರದಹಳ್ಳಿ ಕ್ಯಾಂಪ್‍ನ ಸಂಜೀವ್‍ರಾಜ್ (40) ಹಾಗೂ ಸಿದ್ಧರ ಕಾಲೊನಿಯ ಗುರುಪ್ರಸಾದ್ (24) ಬಂಧಿಸಿದ್ದಾರೆ.

ಉಡುಪಿಯ ವ್ಯಕ್ತಿಯೊಬ್ಬರಿಗೆ ಸರಬ ರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಹಿನ್ನಲೆಯಲ್ಲಿ ಹೊಳೆ ಹೊನ್ನೂರು ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.

ಆಗರದಹಳ್ಳಿ ಕ್ಯಾಂಪ್‍ನ ಮನೆ ಯೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರ ತಂಡ 6.5 ಕೆ.ಜಿ. ಒಣ ಗಾಂಜಾ ಸೀಜ್‌ ಮಾಡಿದೆ.

ಈ ಗಾಂಜವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಗಾಂಜಾ ತರಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಇತ್ತು..

( ಶಿವು ರಾಠೋಡ್ ಭದ್ರಾವತಿ )

ಹೆಚ್ಚಿನ ಸುದ್ದಿ