
ಮಸ್ಕಿ :
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನಲ್ಲಿ ಗೋರ ಸೇನಾ ರಾಷ್ಟ್ರೀಯ ಸಂಘಟನೆ ಮನವಿ ಪತ್ರ ಸಲ್ಲಿಸಿದ್ದೇವೆ
ಶಾಸಕರು ಬಸನಗೌಡ ತುರ್ವಿಹಾಳ ಮಸ್ಕಿ ವಿಧಾನ ಸಭಾ ಕ್ಷೇತ್ರ ಮಸ್ಕಿ ದಿ.28-10-2024 ರಂದು ರಾಜ್ಯಸರ್ಕಾರವು ‘ಒಳ ಮೀಸಲಾತಿ’ ಕುರಿತು ‘ಸಚಿವ ಸಂಪುಟ ಸಭೆಯಲ್ಲಿ’ ನಿರ್ಧರಿಸಲು ತಯಾರಿ ನಡೆಸಿರುವುದನ್ನು ವಿರೋಧಿಸಿ ಸಲ್ಲಿಸುತ್ತಿರುವಎಚ್ಚರಿಕೆ ಮನವಿ.
ಕರ್ನಾಟಕ ರಾಜ್ಯದ ಬಂಜಾರಾ ಸಮುದಾಯಕ್ಕೆ ಮಾರಕವಾಗಿಕಾಡುತ್ತಿರುವ ಒಳಮೀಸಲಾತಿ ಮತ್ತು ವರ್ಗೀಕರಣವನ್ನ “ಗೋರ್ಸೇನಾ” ರಾಷ್ಟ್ರೀಯಸಂಘಟನೆ, ಕರ್ನಾಟಕ ರಾಜ್ಯ ಘಟಕ, ತೀವ್ರವಾಗಿ ವೀರೋಧಿಸುತ್ತದೆ. ಈ ವಿಚಾರವಾಗಿ ರಾಜ್ಯಸರ್ಕಾರವು ‘ಒಳ ಮೀಸಲಾತಿ’ ಕುರಿತು ದಿ.28-10-2024 ರಂದು ‘ಸಚಿವ ಸಂಪುಟ ಸಭೆಯಲ್ಲಿ’ ನಿರ್ಧರಿಸಲು ತಯಾರಿ ನಡೆಸಿರುವುದನ್ನು ಸಹ ಖಂಡಿಸುತ್ತದೆ.
ರಾಜ್ಯದ ಲಂಬಾಣಿ, ಕೊರಚ, ಕೋರಮ ಮತ್ತು ಭೋವಿ ಸಮುದಾಯಗಳನ್ನು ಒಂದು ಗುಂಪಿನಲ್ಲಿ ಸೇರಿಸಿ, ಈ ಸಮುದಾಯಗಳನ್ನ ಸಮಾಜದ ಮುಖ್ಯವಾಹಿನಿಯಿಂದ ಹಿಂದಿಕ್ಕಬೇಕೆಂಬ ಹುನ್ನಾರವನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಬಾಬಾಸಾಹೇಬಾ. ರವರುಸಂವಿಧಾನಾತ್ಮಕವಾಗಿನೀಡಿರುವಮೀಸಲಾತಿಯನ್ನು, ಭೀಮರಾವ್ ಅಂಬೇಡ್ಕರ್ ಅಸಂವಿಧೀನಾತ್ಮಕಮತ್ತು ಅವೈಜ್ಞಾನಿಕವಾಗಿವರ್ಗೀಕರಣಸರ್ಕಾರ ಮಾಡಕೂಡದು.
ಮೀಸಲಾತಿ ವರ್ಗೀಕರಣ, ರಾಜ್ಯದಲ್ಲಿ ಇರುವ ಎಲ್ಲ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಮತ್ತು ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೆ ತರಾತುರಿಯಲ್ಲಿ ಮಾಡಕೂಡದು. ಪರಿಶಿಷ್ಟರ ಜಾತಿ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಗಳು, ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸದೆ ಒಳಮಿಸಲು ಹಂಚಿಕೆ ನಿರ್ಧಾರ ಸಮಂಜ

ದಿನಾಂಕ: 25/10/2024
ಕರ್ನಾಟಕ ರಾಜ್ಯದ ಎಲ್ಲ ಲಂಬಾಣಿ, ಕೋರಚ, ಕೊರಮ ಮತ್ತು ಭೂವಿ ಸಮುದಾಯಗಳ ಪರವಾಗಿ, ‘ಗೋರ್ಸೇನಾ’ ಸಂಘಟನೆ ಮತ್ತು ಸ್ವಾಭಿಮಾನಿ ಗೋರ್ಬಂಜಾರಾಜನಾಂಗ ರಾಜ್ಯಸರ್ಕಾರವು ‘ಒಳ ಮೀಸಲಾತಿ’ ಕುರಿತು ದಿ.28-10-2024 ರಂದು ‘ಸಚಿವ ಸಂಪುಟ ಸಭೆಯಲ್ಲಿ’ ನಿರ್ಧರಿಸಲು ತಯಾರಿ ನಡೆಸಿರುವುದನ್ನು ಸಹ ಖಂಡಿಸುತ್ತದೆ.
ರಾಜ್ಯಸರ್ಕಾರವು ‘ ಸರಿಯಾದ ಅಧ್ಯಯನ ಇಲ್ಲದೆ ಪರಿಶಿಷ್ಟರ ಮೀಸಲಾತಿಯನ್ನು ವರ್ಗೀಕರಿಸಬಾರದೆಂದು ಒತ್ತಾಯಿಸಿ “ಗೋರ್ಸೇನಾ ” ರಾಷ್ಟ್ರೀಯ ಸಂಘಟನೆ, ಕರ್ನಾಟಕ ರಾಜ್ಯ ಘಟಕ ದಿನಾಂಕ 02 ಅಕ್ಟೋಬರ್ 2024 ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ನೆರವೇರಿದ ಸತ್ಯಾಗ್ರಹದಲ್ಲಿ ಭಾಗವಹಿಸಿದ ಸುಮಾರು 500 ಕ್ಕೂ ಹೆಚ್ಚು ಸತ್ಯಾಗ್ರಹಿಗಳನ್ನ ಸಾಕ್ಷಿಯಾಗಿಸಿ, ಅವರೆಲ್ಲರ ಸಮಕ್ಷಮ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುತ್ತದೆ.
‘ಒಳ ಮೀಸಲಾತಿ’ ಕುರಿತು ದಿ.28-10-2024 ರಂದು ‘ಸಚಿವ ಸಂಪುಟ ಸಭೆಯನ್ನು’ ವಿರೂಧಿಸಿ, ರಾಜ್ಯದ ಎಲ್ಲ ಲಂಬಾಣಿ, ಕೊರಚ, ಕೋರಮ ಮತ್ತು ಭೂವಿ ಸಮುದಾಯಕ್ಕೆ ಯಾವುದೇ ಅನ್ಯಾಯ ಆಗಕೂಡದು ಎಂದು “ಗೋರ್ಸೇನಾ” ಕರ್ನಾಟಕರಾಜ್ಯಘಟಕ ಈಎಚ್ಚರಿಕೆ ಮನವಿ ಸಲ್ಲಿಸುತ್ತಿದೆ.ಬಿಜೆಪಿ ಹಠಾವೂ ತಾಂಡಾ ಬಚಾವೂ ಎಂಬ ಘೋಷಣೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಹಠಾವೂಎಂಬ ಘೋಷಣೆಗೆ ಬದಲಾಗದಂತೆ ನಿಗಾವಹಿಸಲು ಎಚ್ಚರಿಸುತ್ತಿದ್ದೆವೆ
ವರದಿಗಾರರು ಅನಿಲ್ ಕುಮಾರ್ ಮಸ್ಕಿ
