Monday, February 9, 2026
HomeUncategorizedಅರಿಕೇರಾ ಕೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ವೆಂಕಟೇಶ ಪ್ಯಾಪ್ಲಿ ಆಗ್ರಹ*

ಅರಿಕೇರಾ ಕೆ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ವೆಂಕಟೇಶ ಪ್ಯಾಪ್ಲಿ ಆಗ್ರಹ*

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಅರಿಕೇರಾ (ಕೆ) ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅರಿಕೇರಾ (ಕೆ) ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿವಂತೆ.

ಇಂದು ನಮ್ಮ ಕರ್ನಾಟಕ ಸೇನೆ ಸುರಪುರ ತಾಲೂಕು ಅಧ್ಯಕ್ಷ ವೆಂಕಟೇಶ ಪ್ಯಾಪ್ಲಿ ನೇತೃತ್ವದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.

ನಂತರ ಪತ್ರಿಕಾ ಹೇಳಿಕೆ ನೀಡುವ ಮೂಲಕ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಕಲುಷಿತ ನೀರು ಶೇಖರಣೆಗೊಂಡಿದ್ದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಕಾಲ ಕಳೆಯುತ್ತಿರುವ ಗ್ರಾಮದ ಸಾರ್ವಜನಿಕರು ಹಾಗೂ ಗ್ರಾಮದ ರಸ್ತೆಯ ಮೇಲೆ ಕಲುಷಿತ ನೀರು ನಿಂತ‌ ಪರಿಣಾಮ ವಯೋ ವೃದ್ಧರು, ಶಾಲಾ ಮಕ್ಕಳು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ ಎಂದರು.
ನಮ್ಮ ಭಾರತ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಗೌರವವಿದೆ ಆದರೆ ಈ ಕುಗ್ರಾಮದಲ್ಲಿ ಮಹಿಳೆಯರಿಗೆ ಸುಸಜ್ಜಿತವಾದ ಶೌಚಾಲಯವು ಇಲ್ಲಾ
ಗ್ರಾಮೀಣಾಭಿವೃದ್ಧಿ ಇಲಾಖೆಯ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯಗಳ ಸಲುವಾಗಿ ಸರ್ಕಾರ ಸಾಕಷ್ಟು ಅನುದಾನ ನೀಡಿದರು ಕೂಡಾ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಇಲ್ಲಿಯವರೆಗು ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಕಲುಷಿತ ನೀರು ರಸ್ತೆ ಮೇಲೆ ಹರಿದು ರಸ್ತೆ ಹದಗೆಟ್ಟು ಹೋಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಒಂದು ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ ಆದಷ್ಡು ಬೇಗನೆ ಸುರಕ್ಷಿತವಾದ ರಸ್ತೆ, ಶೌಚಾಲಯ ,ಅಂಗನವಾಡಿ ಕೇಂದ್ರ ಒದಗಿಸಿಕೊಡುವಂತೆ ಆಗ್ರಹ ಮಾಡಿದರು.

ಈ ಸಂದರ್ಭದಲ್ಲಿ ನಾಗರಾಜ್ ಯಾದವ್,ರಾಕೇಶ್ ಉಪ್ಪಾರ,ವೇಣುಗೋಪಾಲ ಪ್ಯಾಪ್ಲಿ, ಶ್ರೇಯಸ್,ಸಿದ್ದಿ ನಾಯ್ಕೋಡಿ,ಕೃಷ್ಣಾ ಜಾಗೀರದಾರ,ದೇವಪ್ಪ ಸಿದ್ದಾಪುರ, ಶಂಕರ್ ಪ್ಯಾಪ್ಲಿ ಹಾಗೂ ನಮ್ಮ ಕರ್ನಾಟಕ ಸೇನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

*ವರದಿ: ಮೌನೇಶ ಆರ್ ಭೋಯಿ*

ಹೆಚ್ಚಿನ ಸುದ್ದಿ