Thursday, October 8, 2026
Homeರಾಜಕೀಯಸುಳ್ಳು ಆರೋಪ ಮಾಡಿದ ಸಿ.ಎಂ ವಿರುದ್ಧಮೊಕದ್ದಮೆ ದಾಖಲಿಸಿ: ಸಿ.ಟಿ.ರವಿ ಆಗ್ರಹ

ಸುಳ್ಳು ಆರೋಪ ಮಾಡಿದ ಸಿ.ಎಂ ವಿರುದ್ಧಮೊಕದ್ದಮೆ ದಾಖಲಿಸಿ: ಸಿ.ಟಿ.ರವಿ ಆಗ್ರಹ

ಬೆಂಗಳೂರು: ಇ.ವಿ.ಎಂ ವಿಷಯದಲ್ಲಿ ಕಪೆÇೀಲಕಲ್ಪಿತ ಆರೋಪ ಮಾಡಿ ಸಾಬೀತು ಮಾಡಿದವರ ವಿರುದ್ಧ ಚುನಾವಣಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಮುದಾಯದ 60 ರಿಂದ 70 ಲಕ್ಷ ಮತಗಳನ್ನು ಗುರಿ ಮಾಡಿ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆಯಲು ಹೊರಟಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡಿರುವ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಮೊಕದ್ದಮೆ ದಾಖಲಿಸಬೇಕು. ಸಾಬೀತು ಮಾಡದಿದ್ದರೆ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಇವಿಎಂ ಹ್ಯಾಕ್ ಆಗಿದ್ದಿದ್ದರೆ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗುತ್ತಿರಲಿಲ್ಲ. ಅವರ ಪಕ್ಷ ಬಹುಮತ ಪಡೆಯುತ್ತಿರಲಿಲ್ಲ. ಆದರೆ ಪ್ರಧಾನಿ, ಕೇಂದ್ರ ಗೃಹ ಸಚಿವರ ಮೇಲೆ ಸಿಎಂ ಆರೋಪಿಸಿದ್ದಾರೆ. ಅವರದೇ ಸರ್ಕಾರದ ಅಧಿಕಾರಿಗಳು ಆಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಸಾಂವಿಧಾನಿಕ ಸಂಸ್ಥೆಯನ್ನು ಅಪಮಾನಗೊಳಿಸುತ್ತಿರುವ ಕಾಂಗ್ರೆಸ್ ಮೇಲೆ ಕ್ರಮ ಕೈಗೊಳ್ಳಬೇಕು. ಇಂತಹ ಸಂಚನ್ನು ಬಿಜೆಪಿ ವಿರೋಧಿಸುತ್ತದೆ. ಸಿಎಂ ಹೇಳಿದ್ದು ಅರವತ್ತರಿಂದ ಎಪ್ಪತ್ತು ಲಕ್ಷ. ಆದರೆ ಕೇವಲ̈ 91 ಸಾವಿರ ಫಾರಂ ನಂಬರ್ 7 ಬಂದಿದೆ ಎಂದು ಆಯೋಗ ಹೇಳಿದೆ.

ಇದಕ್ಕೆ ಸಿಎಂ ಉತ್ತರ ಕೊಡಬೇಕು. ಸಿಎಂ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ನ್ಯಾಯಸಮ್ಮತ ಮತದಾರರ ಹೆಸರು ಮಾತ್ರ ಉಳಿಯಬೇಕು ಎಂದು ಹೇಳಿದರು.
ಎಸ್‍ಐಆರ್ ನಲ್ಲಿ ಕಾಂಗ್ರೆಸ್ ಸಾಮೂಹಿಕ ಮ್ಯಾಪಿಂಗ್ ಮಾಡಿಸಿದೆ. ಆ ಮೂಲಕ ತಮಗೆ ಬೇಕಾದ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸುವ ಷಡ್ಯಂತ್ರ ಮಾಡಿದೆ. ನಾವೀಗ ದೂರು ನೀಡಿದ್ದರಿಂದ ಕಾಂಗ್ರೆಸ್ ಮಾಡಿದ ಸಂಚು ಬಯಲಾಗಿದೆ. ಈ ಭಯದಿಂದಲೇ ನಮ್ಮ ಮೇಲೆ ದೂರು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಮಗೆ ಬೇಕಾದ ಮತವನ್ನು ಅನುಕೂಲವಾಗಿ ಮಾಡಿಸಿಕೊಳ್ಳಲು ಕಾಂಗ್ರೆಸ್ ಸಂಚು ರೂಪಿಸಿದೆ. ಎರಡು ಕಡೆ ಮತ ಇದ್ದವರನ್ನು ನಾವು ಬಯಲು ಮಾಡಿ ದೂರು ನೀಡಿದರೆ ನಮ್ಮ ಮೇಲೆಯೇ ಪ್ರಕರಣ ದಾಖಲಿಸುತ್ತಾರೆ. ರಾಹುಲ್ ಗಾಂಧಿ ದೂರು ನೀಡಿದರೆ ಸರಿ. ಆದರೆ ಬಿಜೆಪಿಯವರು ದೂರು ನೀಡಿದರೆ ಅಪರಾಧ ಎಂದು ಆಕ್ಷೇಪಿಸಿದರು.

ಚುನಾವಣಾ ಆಯೋಗದ ಮೇಲೆ ಹೊಣೆಗಾರಿಕೆ.

ಚುನಾವಣಾ ಆಯೋಗವು ಎಲ್ಲಾ ದೂರುಗಳನ್ನು ಪರಿಶೀಲನೆ ಮಾಡಬೇಕು. ಅಕ್ರಮ ಮತದಾರರ ಹೆಸರನ್ನು ತೆಗೆದುಹಾಕಲಿ. ಹಾಗೂ ಅಕ್ರಮ ಮಾಡಿದವರ ವಿರುದ್ಧ ಕ್ರಮವಾಗಲಿ. ದೂರು ಸಲ್ಲಿಸಿದ್ದೇ ತಪ್ಪಾದರೆ ಮುಂದೆ ನ್ಯಾಯಸಮ್ಮತವಾಗಿ ಆಕ್ಷೇಪಣೆ ಸಲ್ಲಿಸಲೂ ಯಾರೂ ಬರುವುದಿಲ್ಲ. ಹಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶವೇ ನೀಡಬಾರದಿತ್ತು. ಆಕ್ಷೇಪಣೆಯ ಸತ್ಯಾಸತ್ಯತೆ ಪರಿಶೀಲಿಸುವ ಹೊಣೆಗಾರಿಕೆ ಚುನಾವಣಾ ಆಯೋಗದ ಮೇಲಿದೆ ಎಂದು ತಿಳಿಸಿದರು.
ದೂರು ಕೊಟ್ಟವರ ಗೌಪ್ಯತೆ ಕಾಪಾಡಬೇಕು. ಯಾರು ದೂರು ಕೊಟ್ಟರು ಎಂಬುದನ್ನು ಬಯಲು ಮಾಡಿದವರ ವಿರುದ್ಧವೂ ಕ್ರಮವಾಗಬೇಕು ಎಂದು ಹೇಳಿದರು. ಸೋನಿಯಾ ಗಾಂಧಿ ಅವರು ದೇಶದ ಪ್ರಜೆ ಆಗುವ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದರು. ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ದಮನಿಸಿದ ಕುಖ್ಯಾತಿಯೂ ಕಾಂಗ್ರೆಸ್‍ಗೆ ಇದೆ ಎಂದು ಆಕ್ಷೇಪಿಸಿದರು.

ಆರ್‍ಎಸ್‍ಎಸ್ ಹೆಸರು ಹೇಳಿಕೊಂಡು ರಾಜಕಾರಣ.

ಚುನಾವಣಾ ಆಯೋಗವು ಪಾರದರ್ಶಕವಾಗಿ ಮತಪಟ್ಟಿ ಪರಿಷ್ಕರಣೆ ಮಾಡಲು ಮುಂದಾದಾಗ ಈ ವ್ಯವಸ್ಥೆಯನ್ನೇ ವಿರೋಧಿಸುವ ಮೂಲಕ ಅಕ್ರಮವನ್ನು ಕಾಂಗ್ರೆಸ್ ಸಮರ್ಥಿಸುತ್ತಿದೆ. ಅಕ್ರಮ ಮತದಾರರನ್ನು ಪಟ್ಟಿಯಲ್ಲಿ ಉಳಿಸಲು ಸಂಚು ರೂಪಿಸಿದೆ ಎಂದು ಹೇಳಿದರು.
ಹಿಂದೂ ಮತದಾರರ ಹೆಸರು ತೆಗೆಯಿರಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪಣೆ ಸಲ್ಲಿಸಿದ್ದರ ಮಾಹಿತಿ ಕುರಿತ ಪ್ರಶ್ನೆಗೆ ಉತ್ತರಿಸಿದ ರವಿ ಅವರು, ಅಂತಹ ಮಾಹಿತಿ ಇಲ್ಲ. ಇದನ್ನು ಪರಿಶೀಲನೆ ಮಾಡಬೇಕು. ಅಲ್ಪಸಂಖ್ಯಾತರ ಮತಗಳನ್ನು ತೆಗೆಯಲು ಸಂಚು ನಡೆದಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ವಾಸ್ತವವಾಗಿ ಹಿಂದೂ ಮತದಾರರ ಹೆಸರೇ ಹೆಚ್ಚು ತೆಗೆಯಲಾಗಿದೆ ಎಂದರು.

ಎಲ್ಲಕ್ಕೂ ಆರ್‍ಎಸ್‍ಎಸ್ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಾರೆ. ಇಲ್ಲದಿದ್ದರೆ ಅವರಿಗೆ ತಿಂದ ಅನ್ನ ಅರಗುವುದಿಲ್ಲ. ಮತದಾರರ ಹೆಸರು ತೆಗೆಯುವ ಅಧಿಕಾರ ಇರುವುದು ಚುನಾವಣಾ ಆಯೋಗಕ್ಕೆ. ನಾವು ದೂರು ಕೊಟ್ಟಿದ್ದೇವೆ. ಪರಿಶೀಲನೆ ಮಾಡುವುದು ಆಯೋಗದ ಕೆಲಸ. ಅದು ಕಾಂಗ್ರೆಸ್ ಕೆಲಸ ಅಲ್ಲ ಎಂದು ವಿವರಿಸಿದರು.
ಎಫ್‍ಐಆರ್ ಹಾಕಲು ಚುನಾವಣಾ ಆಯೋಗ ದೂರು ನೀಡಿಲ್ಲ. ಯಂಕ, ನಾಣಿ, ಶೀನ ಹೆಸರಲ್ಲಿ ದೂರು ಪಡೆದು ಬಿಜೆಪಿ ಕಾರ್ಯಕರ್ತರ ಮೇಲೆ ಎಫ್‍ಐಆರ್ ಹಾಕಿ ಕಿರುಕುಳ ನೀಡುತ್ತಿದ್ದಾರೆ. ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಆಯೋಗ ಸ್ವಾಯುತ್ತ ಸಂಸ್ಥೆ, ಸರ್ಕಾರದ ಸಂಸ್ಥೆ ಅಲ್ಲ. ನಾವು ಸಾಂವಿಧಾನಿಕ ಮಾರ್ಗದಲ್ಲಿ ಹೋದರೆ ಕಾಂಗ್ರೆಸ್ ಅರಾಜಕತೆ ಸೃಷ್ಟಿ ಮಾಡುತ್ತಿದೆ. ತನಿಖೆ ಮಾಡಿ ಎಂದು ಕೇಳುವುದೇ ಅಪರಾಧವಾಗಿದ್ದರೆ ಯಾವ ಕಾಯ್ದೆ ಅಡಿ ಅಪರಾಧ ಎಂದು ಕಾಂಗ್ರೆಸ್ ಹೇಳಲಿ ಎಂದರು.
ರಾಜ್ಯ ವಕ್ತಾರ ವೆಂಕಟೇಶ ದೊಡ್ಡೇರಿ, ಎಂ.ಡಿ.ಲಕ್ಷ್ಮೀನಾರಾಯಣ್, ದತ್ತಾತ್ರೇಯ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಹೆಚ್ಚಿನ ಸುದ್ದಿ