ಚನ್ನಮ್ಮನ ಕಿತ್ತೂರು: ತಾಲೂಕಿನ ಅವರಾದಿ ಗ್ರಾಮದಲ್ಲಿ ಆಸ್ತಿಗಾಗಿ ಜೊಡಿ ಕೊಲೆ ಮತ್ತು ಒಂದು ಹಾಪ್ ಮರ್ಡರ್ ನಡೆದಿದೆ.
ಕೊಲೆಯಾದವರು- ರುದ್ರಪ್ಪ ಕುಂದರಗಿ ಉರ್ಪ ಚಿನಗುಡಿ ಆತನ ಮಗಳು ಶಶೀಕಲಾ ಎಂಬುವವರು ಆಗಿದ್ದಾರೆ.


ಕೊಲೆಯಾದವರು ಮೂಲತಃ ಅವರಾದಿ ಗ್ರಾಮದವರು ಇವರು ಧಾರವಾಡದ ನೆಲೆಸಿದ್ದರು, ಆಸ್ತಿ ಸಂಬಂಧಿತವಾಗಿ ಅವರಾದಿ ಗ್ರಾಮ ಪಂಚಾಯಿತಿ ಆಗಮಿಸಿದ್ದರು.
ಗ್ರಾಮ ಪಂಚಾಯಿತಿ ಒಳಗೆ ಇವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಹಾಗೂ ಅವರ ಜೊತೆಗೆ ಬಂದವರಲ್ಲಿ ಒಬ್ಬನಿಗೆ ತೀವ್ರ ಗಾಯಗೊಂಡಿದ್ದಾರೆ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ…
ಕೊಲೆ ಮಾಡಿದ ಆರೋಪಿಗಳು ಸ್ವಂತ ಅಣ್ಣ ಮತ್ತು ತಮ್ಮ ಎಂದು ತಿಳಿದು ಬಂದಿದೆ.
ಸಂಗಪ್ಪ, ಬಸಪ್ಪ ಹಾಗೂ ಬಸಪ್ಪ ಮಗ ಮಡಿವಾಳಪ್ಪ ಕುಂದರಗಿ ಉರ್ಪ ಚಿನಗುಡಿ ಕೊಲೆ ಮಾಡಿದ ಆರೋಪಿತರು ಇವರು ಅವರಾದಿ ಗ್ರಾಮದ ನಿವಾಸಿಗಳು ಆಗಿದ್ದಾರೆ.
ಕೊಲೆಯಾದ ಇವರ ಸಹೋದರ ರುದ್ರಪ್ಪ ಕುಂದರಗಿ ಎನ್ನುವರು ಎಕ್ಸ್ ಆರ್ಮಿ ಆಗಿದ್ದಾರೆ ಇವರು ಊರು ಬಿಟ್ಟು ಧಾರವಾಡದಲ್ಲಿ ನೆಲೆಸಿದ್ದರು..
ಆಸ್ತಿಗಾಗಿ ಅಣ್ಣ-ತಮ್ಮಂದಿರರು ಕೋರ್ಟ್ ಮೆಟ್ಟಿಲೇರಿದ್ದರು ಎಂದು ತಿಳಿದು ಬಂದಿದೆ ಆಸ್ತಿ ಬಗ್ಗೆ ಮಾಹಿತಿ ಪಡೆಯಲು ಅವರಾದಿ ಪಂಚಾಯಿತಿಗೆ ರುದ್ರಪ್ಪ ಕುಂದರಗಿ ಉರ್ಪ ಚಿನಗುಡಿ ಅವರ ಮಗಳು ಶಶೀಕಲಾ ಬಂದಿದ್ದರು ಇದನ್ನು ತಿಳಿದ ಆರೋಪಿಗಳಾದ 1.ಸಂಗಪ್ಪ, 2.ಬಸಪ್ಪ, 3.ಮಡಿವಾಳಪ್ಪ ಬಸಪ್ಪ ಕುಂದರಗಿ ಉರ್ಪ ಚಿನಗುಡಿ ಎಂಬುವವರು ಪಂಚಾಯಿತಿಗೆ ಆಗಮಿಸಿ ಅವರನ್ನು ಕುಡುಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ..
ಹಿನ್ನೆಲೆ –
ಕೋರ್ಟ್ ಆದೇಶದ ಪ್ರಕಾರ ದಾಖಲು ಮಾಡಲು ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ದಿನಾಂಕ 03-09-2026 ರಂದು ಅರ್ಜಿ ಸಲ್ಲಿಸಿದ್ದರು. ಇಂದು ಮುಂಜಾನೆ ಜಮೀಣು ಸರ್ವೆ ಮಾಡುವ ಉದ್ದೇಶದಿಂದ ಧಾರವಾಡದಿಂದ ಅವರಾದಿ ಗ್ರಾಮಕ್ಕೆ ಆಗಮಿಸಿದ್ದರು. ಅದೇ ಸಮಯದಲ್ಲಿ ಅವರು ಅರ್ಜಿ ಏನಾಯಿತು ಎಂದು ಕೇಳಲು ಪಂಚಾಯತ ಕಾರ್ಯಾಲಯಕ್ಕೆ ಆಗಮಿಸಿದ್ದನ್ನು ನೋಡಿದ ಆರೋಪಿಗಳು ಪಂಚಾಯಿತಿ ಕಾರ್ಯಾಲಯದಲ್ಲಿಯೇ ಏಕಾಏಕಿ ರುದ್ರಪ್ಪ ಶಿವನಪ್ಪ ಕುಂದರಗಿ ಅವರನ್ನು ಕುಡಗೋಲನಿಂದ ಕೊಚ್ಚಿದ್ದಾರೆ ಇದನ್ನು ನೋಡಿ ಮಗಳು ಶಶೀಕಲಾ ಜೋರಾಗಿ ಅಳುತ್ತಾ ಬಾಯಿ ಬಾಯಿ ಬಡೆದುಕೊಂಡು ಹೊಯ್ಕೊಳ್ಳುತ್ತಾ ತಂದೆಯನ್ನು ಕಾಪಾಡಲು ತೆರಳಿದಾಗ ಅವಳನ್ನು ಸಹಿತ ಹಿಗ್ಗಾಮುಗ್ಗಾ ಕೊಚ್ಚಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ. ಅವರ ಜೊತೆಗೆ ಬಂದವರೊಬ್ಬರಿಗೂ ಕೊಡ ಕುಡುಗೋಲಿನಿಂದ ಕೊಡುತ್ತಿದ್ದಾರೆ ಆತನಿಗೆ ಗಂಭೀರ ಗಾಯಗೊಂಡಿದ್ದಾನೆ ಆತನ ಬಗ್ಗೆ ಆತನ ಹೆಸರು ತಿಳಿದುಬಂದಿಲ್ಲಾ ಆತನನ್ನು ಮನಸ್ಸು ಇಚ್ಛೆ ಕೊಚ್ಚಿದ್ದಾರೆ ಆತನ ಉಸಿರಾಟ ಇರುವುದರಿಂದ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ತಿಳಿದುಬಂದಿದೆ..

ಸ್ಥಳಕ್ಕೆ ಆಗಮಿಸಿದ ಕಿತ್ತೂರು ಪೊಲೀಸರು ಕೊಲೆ ಮಾಡಿದ ಆರೋಪಿಗಳು ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಆರೋಪಿಗಳನ್ನು ಹಿಡಿಯಲು ಬಲೆ ಬೀಸಿದ್ದಾರೆ. ಆರೋಪಿಗಳಿಗೆ ಯಾರು ಸಹಾಯ ಮಾಡಬಾರದು ಎಂದು ತಿಳಿಸಿದ್ಕಂದಾರೆ ಇವರನ್ನು ಕಂಡ ತಕ್ಷಣ ಪೋಲಿಸ್ ಠಾಣೆಗೆ ತಿಳಿಸಬೇಕು ಎಂದು ಪೋಲಿಸ್ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪಾದಕರು: ರಾಮಚಂದ್ರಪ್ಪ ಪೂಜೇರ
