Friday, September 11, 2026
HomeUncategorizedಕಿತ್ತೂರು ಮಿನಿ ವಿಧಾನಸೌಧದ ಪಕ್ಕದಲ್ಲಿ ಇರುವ ಗಟಾರ್ ಅವ್ಯವಸ್ಥೆ, ಸರ್ವಿಸ್ ರೋಡ್ ಮೇಲೆ ಹರಿಯುತ್ತಿರುವ ಕೊಳಚೆ...

ಕಿತ್ತೂರು ಮಿನಿ ವಿಧಾನಸೌಧದ ಪಕ್ಕದಲ್ಲಿ ಇರುವ ಗಟಾರ್ ಅವ್ಯವಸ್ಥೆ, ಸರ್ವಿಸ್ ರೋಡ್ ಮೇಲೆ ಹರಿಯುತ್ತಿರುವ ಕೊಳಚೆ ನೀರು….

ಮೇಲಿಂದ ಗಟಾರ್ ಮೂಲಕ ಬರುವ ನೀರು ಮುಂದೆ ಹೋಗಲು  ಗಟಾರ್ ಇಲ್ಲ ಅಲ್ಲಿ ಶೇಖರಣೆಯಾದ ನೀರು ಸರ್ವಿಸ್ ರೋಡ್ ಮೇಲೆ ಸದಾ ಹರಿಯುತ್ತಿರುತ್ತದೆ….

ಗಟಾರ್ ನೀರು ಹರಿಯುತ್ತಿರುವ ದೃಶ್ಯ…

ಚನ್ನಮ್ಮನ ಕಿತ್ತೂರು: ಪಟ್ಟಣದ ಕಿತ್ತೂರು ತಾಲೂಕು ಆಡಳಿತ ಕಛೇರಿ/ಮಿನಿ ವಿಧಾನಸೌಧ ಕಿತ್ತೂರು ಇಲ್ಲಿ ಹಲವಾರು ಸಮಸ್ಯೆಗಳನ್ನು ಒಳಗೊಂಡಿದೆ
ಅ ವೈಜ್ಞಾನಿಕ ಕಾಮಗಾರಿಯಿಂದ ಹಲವು ಸಮಸ್ಯೆಗಳನ್ನು ಜನರು ಅನುಭವಿಸುತ್ತಾಗಿದೆ
ಮಿನಿ ವಿಧಾನಸೌಧ ಪಕ್ಕದಲ್ಲಿ ಇರುವ ಗಟಾರ್ ನೀರು ಮುಂದೆ ಹೋಗಿದೆ ನಿಂತಲ್ಲೇ ನಿಂತು ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರೋಡ್ ಮೇಲೆ ನೀರು ನಿತ್ಯ ಹರಿಯುತ್ತಿದ್ದು ಇದರಿಂದ ಅಲ್ಲಿ ಹಲವಾರು ಗುಂಡಿ ಬಿದ್ದಿವೆ ಹಾಗೂ ಹಾಗೂ ಮಿನಿ ವಿಧಾನಸೌಧ ಹಾಗೂ ಕೆ.ಎಸ್.ಆರ್.ಟಿ.ಸಿ ಡಿಪೋ ಘಟಕದಿಂದ ಬರುವ ನೀರು ಮುಂದೆ ಹೋಗಲು ಗಿಟಾರ್ ಇಲ್ಲದೆ ಇರುವುದು ಮುಖ್ಯ ಕಾರಣ…

ಜನರಿಗೆ ಕೂಡ ಸೌಕರ್ಯ ಒದಗಿಸುವ ಆಡಳಿತ ಕಚೇರಿಯ ಅಧಿಕಾರಿಗಳು ತಮ್ಮ ಕಚೇರಿಗೆ ಹೋಗಲು ಇದೇ ರಸ್ತೆ ಬಳಸುತ್ತಿದ್ದು ಎಲ್ಲಿ ಗಟಾರ್ ಮಾಡಬೇಕು ಎಂಬುದನ್ನು ಮರೆತಿದ್ದಾರೆ ಎಂದು ಎಂದು ಕಾಣಿಸುತ್ತದೆ..
ಆಡಳಿತ ಕಛೇರಿ ಸಂಬಂಧಿತ ತಮ್ಮ ಸರ್ಕಾರದ ಹಲವು ಕೆಲಸಗಳಿಗೆ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆ ಬಳಸುತ್ತಿದ್ದಾರೆ ಹಾಗೂ ಈ ರಸ್ತೆ ಮೂಲಕ ಹೊಸ ಚನ್ನಾಪುರ, ಟೀಚರ್ ಕಾಲೋನಿ ಮತ್ತು ಗಿರಿಯಾಲ, ಊರಿನ ಜನರು ದಿನ ನಿತ್ಯ ಈ ರಸ್ತೆ ಮೂಲಕ ತಮ್ಮ ಮನೆಗೆ ತಲುಪುತ್ತಾರೆ. ರಸ್ತೆ ಮೂಲಕ ಹೋಗುವ ಸಂದರ್ಭದಲ್ಲಿ ಕೊಳಚೆ ನೀರು ವಾಹನ ಅದರ ಮೇಲೆ ದಾಟಿ ಹೋದರೆ ಅನಿರು ಹೋಗುವ ಮೇಲೆ ಚಿಮ್ಮುತ್ತದೆ/ಸಿಡಿಯುತ್ತದೆ..
ಕಣ್ಣು ಮುಚ್ಚಿ ಕುಳಿತುಕೊಂಡಿದ್ದಾರೆ ಎಂದು ಆಡಳಿತ ಸೌಧಕ್ಕೆ ಬರುವ ಜನರ ಮಾತಾಗಿದೆ.

ಇನ್ನಾದರು ಎಚ್ಚರಗೊಂಡು ಸಂಬಂಧಿತ ಅಧಿಕಾರಿಗಳು ಕ್ರಮ ಕೈಗೊಂಡು ಗಟಾರ್ ನಿರ್ಮಾಣ ಮಾಡಿ ಸುಲಭವಾಗಿ ನೀರು ಹೋಗುವಂತೆ ಮಾಡಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ…

ಸಂಪಾದಕರು: ರಾಮಚಂದ್ರಪ್ಪ ಪೂಜೇರ. ಚನ್ನಮ್ಮನ ಕಿತ್ತೂರು

ಹೆಚ್ಚಿನ ಸುದ್ದಿ