Saturday, June 27, 2026
Homeಆರೋಗ್ಯಮಾನಸಿಕ ಖಿನ್ನತೆಗೆ ಯೋಗವೇ ಪರಿಹಾರ - ಸೌಮ್ಯಾ ರಾಘವೇಂದ್ರ

ಮಾನಸಿಕ ಖಿನ್ನತೆಗೆ ಯೋಗವೇ ಪರಿಹಾರ – ಸೌಮ್ಯಾ ರಾಘವೇಂದ್ರ

ಚನ್ನಮ್ಮನ ಕಿತ್ತೂರು : ಇಂದಿನ ಯಾಂತ್ರಿಕ ಬದುಕಿನಲ್ಲಿ ನಾವೆಲ್ಲರೂ ಇಂದು ಮಾನಸಿಕ ಖಿತನ್ನತೆಯನ್ನು ಅನುಭವಿಸುತ್ತಿದ್ದೇವೆ ಇದರಿಂದ ಅನೇಕ ಜನರು ಆತ್ಮಹತ್ಯೆಗೆ ಶರಣಾಗುತ್ತೀದ್ದಾರೆ ಆದ್ದರಿಂದ ಪ್ರತಿ ದಿನ ಯೋಗಾಭ್ಯಾಸ ವನ್ನು ಮಾಡುವುದರಿಂದ ಮಾನಸಿಕ ಖಿನ್ನತೆಯನ್ನು ದೂರಗೊಳಿಸಬಹುದು ಆದ್ದರಿಂದ ಮಾನಸಿಕ ಖಿನ್ನತೆಗೆ ಯೋಗವೇ ಸೂಕ ್ತಪರಿಹಾರವಾಗಿದೆ ಎಂದು ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ರೋರ‍್ಸ್ ಮತ್ತು ರೇಂರ‍್ಸ್, ಯುಥ್‌ರೆಡ್ ಕ್ರಾಸ್ ವಿದ್ಯಾರ್ಥಿ ಒಕ್ಕೂಟಗಳ ಆಶ್ರಯದಲ್ಲಿ ಆಯೋಜಿಸಿದ್ದ ೧೨ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಸೌಮ್ಯಾ ರಾಘವೇಂದ್ರ ಇಂದು ಅನೇಕ ಯುವಕರು ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತೀದ್ದಾರೆ ಇದಕ್ಕೆ ಇಂದಿನ ಯಾಂತ್ರಿಕ ಜಗತ್ತು, ಕೆಟ್ಟ ಆಹಾರ ಪದ್ಧತಿ, ನಮಗೆ ನಾವು ಸಮಯ ನೀಡದೇ ಇರುವುದು ಬಹುಮುಖ್ಯ ಕಾರಣವಾಗಿದೆ. ಅನೇಕ ಜನರು ಮಾನಸಿಕ ಒತ್ತಡ ತಡೆದುಕೊಳ್ಳಲಾರದೇ ಆತ್ಮಹತ್ಯೆಗೆ ಶರಣಾಗುವುದು ಅಥವಾ ಹೃದಯಾಘಾತದಿಂದ ಸಾವನ್ನಪ್ಪುವುದನ್ನು ಕಾಣುತ್ತಿದ್ದೇವೆ ಆದ್ದರಿಂದ ಇಂದಿನ ಯಾಂತ್ರಿಕ ಜಗತ್ತಿನಲ್ಲಿ ನಾವು ನಮಗಾಗಿ ಒಂದಿಷ್ಟು ಸಮಯವನ್ನು ಮೀಸಲಿಟ್ಟು ತಪ್ಪದೇ ಯೋಗಾಭ್ಯಾಸನ್ನು ಮಾಡುವುದರಿಂದ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಪ್ರತಿ ದಿನ ಯೋಗಾಭ್ಯಾಸ ಮಾಡುವುದರಿಂದ ಸದೃಢ ಶರೀರವನ್ನು ಹಾಗೂ ಮಾನಸಿಕ ಏಕಾಗ್ರತೆಯನ್ನು ಹೊಂದಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಕಿನಾವಿವ ಸಂಘದ ಮಾಜಿ ಚೇರಮನ್ನರಾದ ಜಗದೀಶ ವಸ್ತ್ರದ ಮಾತನಾಡಿ ಇಂದು ನಮ್ಮಲ್ಲಿ ಶಾರೀರಿಕ ಕೆಲಸ ಕಡಿಮೆಯಾಗಿದ್ದು ಇದರಿಂದ ನಮ್ಮ ನರನಾಡಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ನಾವು ಅನೇಕ ರೋಗರುಜಿನಗಳಿಗೆ ತುತ್ತಾಗಿ ನಮ್ಮ ಜೀವಿತಾವಧಿ ಕ್ಷೀಣಿಸುತ್ತೀದೆ. ಆದ್ದರಿಂದ ನಾವು ಯೋಗಾಭ್ಯಾಸವನ್ನು ರೂಢಿ ಮಾಡಿಕೊಳ್ಳುವುದರಿಂದ ನಮ್ಮ ಶರೀರದ ಎಲ್ಲ ಅವಯವಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿ ನಾವು ಆರೋಗ್ಯವಂತರಾಗಿರಲು ಸಾಧ್ಯ. ಯೋಗ ಪ್ರ ಶಿಕ್ಷಣದಲ್ಲಿ ಪಡೆದ ತರಬೇತಿಯನ್ನು ಪ್ರತಿನಿತ್ಯವು ನಾವು ಕೈಗೊಂಡಲ್ಲಿ ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ಕಾಣಬಹುದು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ನಾಗರಾಜ ಎಚ್.ಕೆ ಯೋಗ ಶಿಕ್ಷಣ ನಮಗೆ ಸದೃಢ ಶರೀರದೊಂದಿಗೆ ಮಾನಸಿಕ ನೆಮ್ಮದಿ ಏಕಾಗ್ರತೆಯನ್ನು ಹೊಂದಲು ಸಹಕಾರಿಯಾಗಿದೆ. ಮೊಬೈಲ ಬಳಕೆಯನ್ನು ಕಡಿಮೆ ಮಾಡಿ ಪ್ರತಿದಿನ ಯೋಗಾಭ್ಯಾಸವನ್ನು ನಾವು ಕೈಗೊಂಡರೆ ಈ ಅಂತರಾಷ್ಟಿ çÃಯ ಯೋಗ ದಿನಾಚರಣೆ ಸಾರ್ಥಕವಾಗುತ್ತದೆ. ಪಟ್ಟಣ ಪಂಚಾಯತ ಶಕಿಲಾ ಕಿಲ್ಲೇದಾರ ವಿದ್ಯಾರ್ಥಿಗಳಿಗೆ ನಾಶಾ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪ್ರಮಾಣ ಬೋಧಿಸಿ ವಿದ್ಯಾರ್ಥಿಗಳು ಕೆಟ್ಟ ಚಟಗಳಿಂದ ದೂರವಿರುವಂತೆ ಮನವಿ ಮಾಡಿದರು.

ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ಇವರನ್ನು ಸನ್ಮಾನಿಸಿದರು. ಎನ್.ಸಿ.ಸಿ ಧಾರವಾಡ ಬಟಾಲಿಯನ್ ಅಧಿಕಾರಿ ಕ್ಯಾಪಟನ್ ರಾಮಬಾವು, ಎನ್.ಎಸ್.ಎಸ್ ಅಧಿಕಾರಿ ಹೊನ್ನರಾಜು ಎಸ್. ವ್ಹಿ, ಗ ್ರಂಥಾಲಯ ಸಹಾಯಕಿ ರೇಖಾ ಗಾಣಿಗೇರ, ಪದವಿ ಪೂರ್ವ ಕಾಲೇಜಿನ ಜಗದೀಶ ಮಲಶೆಟ್ಟಿ, ಎಮ್ ಎಮ್ ಕೆರಾಳಿ ಇತರರು ಹಾಜರಿದ್ದರು.

ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ ಶಿವನವ್ವನವರ ಸ್ವಾಗತಿಸಿದರು, ಎನ್.ಸಿ.ಸಿ ಅಧಿಕಾರಿ ಎಮ್.ಜಿ.ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು, ಪ್ರಕಾಶ ಹೊನ್ನಪ್ಪನವರ ವಂದಿಸಿದರು ರೋವರ್ ಲೀಡರ್ ಆನಂದ ಕರೆಪ್ಪನವರ ಕಾರ್ಯಕ ್ರಮ ನಿರೂಪಿಸಿದರು.

ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರದಲ್ಲಿ ಆಯೋಜಿಸಿದ್ದ ೧೨ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ಇವರನ್ನು ಕಿನಾವಿವ ಸಂಘದ ಮಾಜಿ ಚೇರಮನ್ನರಾದ ಜಗದೀಶ ವಸ್ತçದ ಸನ್ಮಾನಿಸಿದರು, . ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರದಲ್ಲಿ ಆಯೋಜಿಸಿದ್ದ ೧೨ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ಮಾತನಾಡಿದರು,

ಕಿನಾವಿವ ಸಂಘದ ಮಾಜಿ ಚೇರಮನ್ನರಾದ ಜಗದೀಶ ವಸ್ತçದ, ಪ್ರಾಚಾರ್ಯ ನಾಗರಾಜ ಎಚ್.ಕೆ, ಎನ್.ಸಿ.ಸಿ ಅಧಿಕಾರಿ ರಾಮಬಾವು, ಎಮ್.ಜಿ.ಹಿರೇಮಠ ಇತರರು ಚಿತ್ರದಲ್ಲಿದ್ದಾರೆ. ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರದಲ್ಲಿ ಆಯೋಜಿಸಿದ್ದ ೧೨ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಕಿನಾವಿವ ಸಂಘದ ಮಾಜಿ ಚೇರಮನ್ನರಾದ ಜಗದೀಶ ವಸ್ತçದ, ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ, ಪ್ರಾಚಾರ್ಯ ನಾಗರಾಜ ಎಚ್.ಕೆ, ಎನ್.ಸಿ.ಸಿ ಅಧಿಕಾರಿ ರಾಮಬಾವು, ಎಮ್.ಜಿ.ಹಿರೇಮಠ ಇತರರು ಚಿತ್ರದಲ್ಲಿದ್ದಾರೆ. ೪. ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಕಿತ್ತೂರದಲ್ಲಿ ಆಯೋಜಿಸಿದ್ದ ೧೨ನೇ ಅಂತರಾಷ್ಟಿ çÃಯ ಯೋಗ ದಿನಾಚರಣೆಯಲ್ಲಿ ಯೋಗ ಶಿಕ್ಷಕಿ ಸೌಮ್ಯಾ ರಾಘವೇಂದ್ರ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುತ್ತೀರುವುದು.

ಸಂಪಾದಕರು: ರಾಮಚಂದ್ರ ಪೂಜೇರ

ಹೆಚ್ಚಿನ ಸುದ್ದಿ