ಮುಂಡಗೋಡ: ತಾಲೂಕ ಆದ್ಯಂತ ಬೇರೆ ಔಷಧ ಗೊಬ್ಬರ ಲಿಂಕ್ ಮಾಡುವುದನ್ನು ತಪ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ಇವರಿಂದ ಸೋಮವಾರ ಮನವಿ ಸಲ್ಲಿಸಲಾಯಿತು.
ಮುಂಡಗೋಡ ಪ್ರವಾಸಿ ಮಂದಿರದಿಂದ ಮೌನ ಮೆರವಣಿಗೆ ಹೊರಟು ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಕೃಷಿ ಚಟುವಟಿಕೆ ತೀವ್ರಗೊಂಡಿರುವ ಈ ಸಮಯದಲ್ಲಿ ರೈತರು ರಸಗೊಬ್ಬರ ಪಡೆಯಬೇಕಾದರೆ ಬೇರೆಗೊಬ್ಬರ ಲಿಂಕ್ ಮಾಡಿ ಅದನ್ನು ಖರೀದಿಸಿದರೆ ಮಾತ್ರ ರಸಗೊಬ್ಬರ ವಿತರಣೆ ಕಡ್ಡಾಯಗೊಳಿಸಲಾಗಿದೆ.ಅಗತ್ಯ ಗೊಬ್ಬರ ಪಡೆಯಲು ಹೆಚ್ಚಿನ ಹಣ ನೀಡಿ ಅನಗತ್ಯವಾದ ಲಿಂಕ್ ಗೊಬ್ಬರ ಖರೀದಿಸುವುದು ರೈತರಿಗೆ ಅನಿವಾರ್ಯವಾಗಿದೆ. ಇದು ರೈತರ ಮೇಲೆ ಹೊರೆಯಾಗುತ್ತಿದ್ದು,ತೊಂದರೆ ಅನುಭವಿಸುವಂತಾಗಿದೆ. ಹಾಗಾಗಿ ತಾವುಗಳು ತಕ್ಷಣ ತಾವು ಮಧ್ಯ ಪ್ರವೇಶಿಸಿ ಲಿಂಕ್ ಇಲ್ಲದೆ ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಮಾತ್ರ ನೀಡಿ ರೈತರಿಂದ ಹಣ ಪಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಹಾಗೂ
ಮುಂಡಗೋಡ ತಾಲೂಕಿನಾದ್ಯಂತ ಚಿಲ್ಲರೆ ಸಾರಾಯಿ ಮಾರಾಟ ಆಗುತ್ತಾ ಇದೆ. ಓ ಸಿ ಗುಡಂಗಡಿಗಳಲ್ಲಿ ಹವ್ಯಾತವಾಗಿ ನಡೆಯುತ್ತಾ ಇದೆ. ಇದರಿಂದ ಶಾಲಾ ಮಕ್ಕಳು, ವಯಸ್ಕರರು, ರೈತ ಬಾಂದವರು ಹಾಗೂ ಜನಸಾಮಾನ್ಯರು ಈ ಚಟುವಟಿಕೆಗಳಿಗೆ ದಾಸರಾಗಿದ್ದು ಇದನ್ನು ಕೂಡಲೆ ಬಂದ ಮಾಡಿ ಪರಿಶುದ್ಧ ವಾತಾವರಣ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಸೋಮಲಿಂಗ ಬೆಣ್ಣೆ, ಬಾಬಾಸಾಹೇಬ ಅಂಬೇಡ್ಕರ ಸೇವಾ ಸಮಿತಿ ಅಧ್ಯಕ್ಷ ಫಕ್ಕೀರಪ್ಪ ಹೊಸಮನಿ, ಪ್ರಶಾಂತ ಕರಿಗಾರ, ಯಲ್ಲಪ್ಪ ಮುತ್ತಗಿ, ಸಲೀಂ ಶೇಖ್, ವಿರುಪಾಕ್ಷಿ, ಮಾರುತಿ ಲಮಾಣಿ, ತುಕಾರಾಮ, ರವಿ ಟೋಪೋಜಿ, ನಾಗರಾಜ, ಈರಪ್ಪಕಾರಿ, ಬಸವರಾಜ ಮುಂತಾದವರು ಉಪಸ್ಥಿತರಿದ್ದರು.
ವರದಿ: ಬಸಯ್ಯ ತೋಟಯ್ಯನವರ
ಸಂಪಾದಕರು: ರಾಮಚಂದ್ರಪ್ಪ ಪೂಜೇರ
