Saturday, June 13, 2026
Homeಜಿಲ್ಲಾ ಸುದ್ದಿಗಳುಉತ್ತರ ಕನ್ನಡಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಯಾದ ಸಂಜು ತಂದೆ ಅರ್ಜುನ್ ನವಲ ಇತನಿಗೆ ಗೂಂಡಾ...

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಯಾದ ಸಂಜು ತಂದೆ ಅರ್ಜುನ್ ನವಲ ಇತನಿಗೆ ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲು ಆದೇಶ: ಕೇಂದ್ರ ಕಾರಾಗೃಹ ಬಳ್ಳಾರಿಗೆ ರವಾನೆ

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಆಸಾಮಿಯಾದ ಸಂಜು ತಂದೆ ಅರ್ಜುನ್ ನವಲ ಇತನಿಗೆ ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲು ಆದೇಶ: ಕೇಂದ್ರ ಕಾರಾಗೃಹ ಬಳ್ಳಾರಿಗೆ ರವಾನೆ

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜು ತಂದೆ ಅರ್ಜುನ್ ನವಲೆ, ಪ್ರಾಯ-24 ವರ್ಷ ವೃತ್ತಿ-ವೆಲ್ಡಿಂಗ್ ಕೆಲಸ ಸಾ||ಗಾಂಧಿ ನಗರ, ಮುಂಡಗೋಡ ಈತನ ಮೇಲೆ ಮುಂಡಗೊಡ ಪೊಲೀಸ್ 01] 2 : 10/2019 0-395, 397, 201 2,2,2, 02] 2 : 98/2021 0-341, 302 2 34 2,2,2, 3] 2 : 130/2024 : 194 (2) 2,2,2, 04] 2 : 04/2025 : 140(2), 140(3), 61(2), 109(1), 310(2), 351(2) ಬಿ,ಎನ್,ಎಸ್-2023, ಹಾಗೂ 05] ಹುಬ್ಬಳ್ಳಿ ಸಬ್-ಅರ್ಬನ್ ಪೊಲೀಸ್ ಗುನ್ನಾ :-118/2023 500:-143. 147. 148. 120(໖) 307. 302 28 149 2 25 ಕಾಯ್ದೆ ನೇದರಂತೆ 05 ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.

ಆದ್ದರಿಂದ ಸದರಿ ಆಸಾಮಿಯ ಮೇಲೆ ದಿ ನಾಂಕ: 13-08-2021 ರಂದು ರೌಡಿ ಹಾಳೆಯನ್ನು ತೆರೆದು ಅವನ ಚಲವಲನಗಳ ಮೇಲೆ ನಿಗಾವಹಿಸಲಾಗಿತ್ತು. ಆದರೂ ಸಹ ಇವನು ಸುಧಾರಣೆಗೊಳ್ಳದೇ ಕ್ರಿಮಿನಲ್ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ.

ಈ ತನ ಮೇಲೆ ದರೋಡೆ-01, ಕೊಲೆ-02, ಸಾರ್ವಜನಿಕ ಸ್ಥಳದಲ್ಲಿ ಜಗಳ-01 ಹಾಗೂ ಕೊಲೆ ಯತ್ನ-01 ಪ್ರಕರಣಗಳು ದಾಖಲಾಗಿದ್ದರಿಂದ ಇವನು ಸಮಾಜದ ಮೇಲೆ ವ್ಯತರಿಕ್ತ ಪರಿಣಾಮ ಬೀರಬಹುದು ಅಂತ ಕಂಡುಬಂದಿದ್ದರಿಂದ ಸದರಿಯವನ ವಿರುದ್ಧ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲು ದಿನಾಂಕ: 07-05-2026 ರಂದು ಪೊಲೀಸ್ ನಿರೀಕ್ಷಕರು ಮುಂಡಗೋಡ ಪೊಲೀಸ್ ಠಾಣೆರವರು ಮಾನ್ಯ ಪೊಲೀಸ್ ಅಧೀಕ್ಷಕರು ಉ.ಕ ಕಾರವಾರ ರವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳು ಉ.ಕ ಕಾರವಾರ ರವರಲ್ಲಿ ಪ್ರಸ್ಥಾವನೆ ಸಲ್ಲಿಸಿದ್ದು ಇರುತ್ತದೆ.

ದಿನಾಂಕ: 08-06-2026 ರಂದು ಮಾನ್ಯ ಜಿಲ್ಲಾಧಿಕಾರಿಗಳು ಉ.ಕ ಕಾರವಾರ ರವರು ಕರ್ನಾಟಕ ಕಳ್ಳಭಟ್ಟಿ ವ್ಯಾಪಾರಿಗಳ, ಔಷಧ ನಿಯಮಗಳನ್ನು ಉಲ್ಲಂಘಿಸುವವರ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಸಂಬಂಧಿ ಅಪರಾಧಿಗಳ, ಕೊಳಗೇರಿ ವಶಪಡಿಸಿಕೊಳ್ಳುವವರ ಮತ್ತು ವಿಡಿಯೋ ಅಥವಾ ಆಡಿಯೋ ನಕಲು ಮಾಡುವ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ಅಧಿನಿಯಮ, 1985ರ ಕಲಂ 3 ಹಾಗೂ ಪ್ರತಿಬಂಧಕ (ತಿದ್ದುಪಡಿ) ಅಧಿನಿಯಮ-2014ರ ಕಲಂ 2(ಎ)2) ರನ್ವಯ ರೌಡಿ ಆಸಾಮಿಯ ಕ್ರಿಮಿನಲ್ ಚಟುವಟಿಕೆಗಳನ್ನು ಹತ್ತಿಕ್ಕಲು ರೌಡಿ ಸಂಜು ತಂದೆ ಅರ್ಜುನ್ ನವಲೆ, ಇವನ ಮೇಲೆ ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಮಾಡಿದ್ದು ಇರುತ್ತದೆ. ಮಾನ್ಯರವರ ಆದೇಶದಂತೆ ಸದರಿ ಗೂಂಡಾ ಆಸಾಮಿಗೆ ಈ ದಿವಸ ದಿನಾಂಕ: 09-06-2026 ರಂದು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.

ಹೆಚ್ಚಿನ ಸುದ್ದಿ