Monday, August 10, 2026
Homeರಾಜಕೀಯಕೆ.ಎಚ್. ಮುನಿಯಪ್ಪಗೆ ಡಿಸಿಎಂ ಹುದ್ದೆ ನೀಡಲು ಪಟ್ಟು: ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಮಾದಾರ ಮಹಾಸಭಾ ಮನವಿ

ಕೆ.ಎಚ್. ಮುನಿಯಪ್ಪಗೆ ಡಿಸಿಎಂ ಹುದ್ದೆ ನೀಡಲು ಪಟ್ಟು: ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಮಾದಾರ ಮಹಾಸಭಾ ಮನವಿ

ಬೆಂಗಳೂರು: ರಾಜ್ಯದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿ ಮಾದಾರ ಮಹಾಸಭಾದ ರಾಜ್ಯ ಮುಖಂಡರ ನಿಯೋಗವು ಕಾಂಗ್ರೆಸ್‌ನ ಉನ್ನತ ನಾಯಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ನಗರದಲ್ಲಿ ನಡೆದ ಭೇಟಿ ಕಾರ್ಯಕ್ರಮದಲ್ಲಿ, ಸಮಾಜದ ಮುಖಂಡರು ಕಾಂಗ್ರೆಸ್‌ನ ಉನ್ನತ ವಲಯದ ನಾಯಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ, ಕೆ.ಎಚ್. ಮುನಿಯಪ್ಪ ಅವರ ಸುದೀರ್ಘ ರಾಜಕೀಯ ಸೇವೆ ಹಾಗೂ ಸಮಾಜದ ಹಿತದೃಷ್ಟಿಯಿಂದ ಅವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ (ಡಿಸಿಎಂ) ನೀಡಬೇಕು ಎಂದು ಒತ್ತಾಯಿಸಲಾಯಿತು.

ಯಾರ್ಯಾರ ಭೇಟಿ?
ನಿಯೋಗವು ಕೆಪಿಸಿಸಿ ಅಧ್ಯಕ್ಷ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್,ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಸಂಸದ ಡಿ.ಕೆ. ಸುರೇಶ್, ಹಾಗೂ ಜಿ.ಸಿ. ಚಂದ್ರಶೇಖರ್ಅವರನ್ನು ಭೇಟಿಯಾಗಿ ಸಮಾಜದ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಿತು.

ನಿಯೋಗದಲ್ಲಿ ಯಾರೆಲ್ಲಾ ಇದ್ದರು?
ಮಾದಾರ ಮಹಾಸಭಾದ ರಾಜ್ಯ ಸಂಘಟಕ ಬಿ.ಕೆ. ಶಿವಪ್ಪ,ರಾಜ್ಯ ವಿಶೇಷ ಆಹ್ವಾನಿತ ಸಿ. ರಾಮಕೃಷ್ಣಪ್ಪ,ರಾಜ್ಯ ಜಂಟಿ ಕಾರ್ಯದರ್ಶಿ ಎ. ಮುನಿಯಪ್ಪ ನೇತೃತ್ವದಲ್ಲಿ ನಿಯೋಗವು ತೆರಳಿತ್ತು.
ಈ ಸಂದರ್ಭದಲ್ಲಿ ಮಾದಾರ ಮಾಹಾಸಭದ ರಾಜ್ಯ ಮುಖಂಡರಾದ ಅರುಂಧತಿ ವಿ. ನಾಗರಾಜ,ನರಸಿಂಹ ಮೂರ್ತಿ, ಶ್ರೀಧರ,ಎ. ನಾರಾಯಣ ,ಸಿ. ರಾಜಶೇಖರ,ಎಂ. ಕೋಗಿಲೆ ವೆಂಕಟೇಶ್, ಹಾಗೂ ಎಂ. ವಿಜಯ ಕುಮಾರ್,ಪ್ರತಾಪ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

ಹೆಚ್ಚಿನ ಸುದ್ದಿ