
ಮುಂಡಗೋಡ : ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ ಬೆಂಗಳೂರವರು ೨೫-೫-೨೦೨೬ ರಂದು ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೆಳನ ಹಮ್ಮಿಕೊಂಡಿದ್ದು. ಸಮ್ಮೇಳನದಲ್ಲಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಪತ್ರಕರ್ತ ನಜೀರುದ್ದಿನ ತಾಡಪತ್ರಿವರು ಪತ್ರಿಕಾರಂಗದಲ್ಲಿ ಮಾಡಿದ ಸಾಧನೆಗಾಗಿ ರಾಜ್ಯ ಮಟ್ಟದ ಕಾಯಕಯೋಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಕುರಿತಂತೆ ಕರುನಾಡು ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ರಾಜ್ಯಾಧ್ಯಕ್ಷ ಎಸ್.ಡಿ.ಮುಡೆಣ್ಣವರ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ದೊಡ್ಡಮನಿ ಸೇರಿದಂತೆ ೧೨ ಸದಸ್ಯರು ಚರ್ಚಿಸಿ ತಾಡಪತ್ರಿಯವರಿಗೆ ಪ್ರಶಸ್ತಿಗೆ ಆಯ್ಕೆ ಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಅಂಗವಾಗಿ ರಾಜ್ಯಾಧ್ಯಕ್ಷ ಎಸ್.ಡಿ.ಮುಡೆಣ್ಣವರ ಪತ್ರಕರ್ತ ತಾಡಪತ್ರಿಯವರ ಮನೆಗೆ ಭೇಟಿನೀಡಿ ಪ್ರಶಸ್ತಿ ಸ್ವಿಕರಿಸುವ ಆಮಂತ್ರಣ ಪತ್ರಿಕೆ ನೀಡಿ ಹಾವೇರಿಯಲ್ಲಿ ನಡೆಯುವ ಸಮ್ಮೇಳನದಲ್ಲಿ ತಮಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ತಾವು ಅಗತ್ಯವಾಗಿ ಬಂದು ಪ್ರಶಸ್ತಿ ಸ್ವಿಕರಿಸಬೇಕು ಎಂದು ಕೇಳಿಕೊಂಡಿದ್ದಾರೆ.
ಮುಂಡಗೋಡ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಾಗೂ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್.ಫಕ್ಕಿರಪ್ಪ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಸಂತ ಕೊಣಸಾಲಿ, ಕಸಾಪ ಪದಾಧಿಕಾರಿಗಳಾದ ಸಂಗಪ್ಪಕೊಳೂರ, ಎಸ್.ಬಿ.ಹೂಗಾರ, ವಾಯ್.ಬಿ.ಲಕ್ಷ್ಮಣ ಹಾಗೂ ಎಸ್.ಡಿ.ಮುಡೇಣ್ಣವರ ತಂದೆಯವರು ಆಮಂತ್ರಣ ಪತ್ರನೀಡಿದರು.
