Friday, May 8, 2026
Homeಜಿಲ್ಲಾ ಸುದ್ದಿಗಳುಅಧಿಕಾರಿಗಳು ಕಾರ್ಮಿಕರಿಗೆ ಮೂಲ ಸೌಲಭ್ಯ ದೊರಕಿಸುವಂತೆ ಮಾಡಿ: ನ್ಯಾಯಧೀಶರಾದ ಶ್ರೀ ಕವಿತಾ ಎಸ್.ಉಂಡೋಡಿ

ಅಧಿಕಾರಿಗಳು ಕಾರ್ಮಿಕರಿಗೆ ಮೂಲ ಸೌಲಭ್ಯ ದೊರಕಿಸುವಂತೆ ಮಾಡಿ: ನ್ಯಾಯಧೀಶರಾದ ಶ್ರೀ ಕವಿತಾ ಎಸ್.ಉಂಡೋಡಿ

ಕಾರವಾರ, ಮೇ.08:- ರಾಷ್ಟ್ರ ನಿರ್ಮಾದಲ್ಲಿ ಕಾರ್ಮಿಕರ ಪಾತ್ರ ಮುಖ್ಯ, ದೇಶ ಕಟ್ಟುವಲ್ಲಿ ಕಾರ್ಮಿಕರು ಶ್ರಮಿಕರಾಗಿದ್ದಾರೆ ಅವರ ತ್ಯಾಗ ಪರಿಶ್ರಮ ಗುರುತಿಸಿ ಸನ್ಮಾನಿಸಬೇಕು. ಕಾರ್ಮಿಕರಿಗೆ ಮೂಲ ಸೌಲಭ್ಯ ದೊರಕಿಸುವಂತೆ ಕಾರ್ಮಿಕ ಇಲಾಖೆ ಕಾರ್ಯನಿರ್ವಹಿಸವಂತೆ ಸಿ.ಜೆ.ಎಮ್ ನ್ಯಾಯಾಲಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಕವಿತಾ ಎಸ್.ಉಂಡೋಡಿ ಹೇಳಿದರು.
ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ನ್ಯಾಯವಾಧಿಗಳ ಸಂಘ ವತಿಯಿಂದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರನ್ನು ಮೊದಲು 14 ಗಂಟೆಗಳ ಕಾಲ ಕೆಲಸದಲ್ಲಿ ತೋಡಗಿಕೊಳ್ಳುತ್ತಿದ್ದರು. ಈಗಾ ಕಾರ್ಮಿಕರ ಹಿತಾಸಕ್ತಿ ಮತ್ತು ರಕ್ಷಣೆಯಿಂದ 8 ಗಂಟೆಗಳ ಕಾಲ ಕೆಲಸ ಕಾರ್ಯ ನಿರ್ವಹಿಸುವಂತ್ತಾಗಿದೆ. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಕುಟುಂಬಕ್ಕೆ ಬರುವ ಸೌಲಭ್ಯ ಹಾಗೂ ಪರಿಹಾರ ಸದುಪಯೋಗ ಪಡೆದುಕೊಂಡು ಕಾರ್ಮಿಕರ ಮಕ್ಕಳು ಕಾರ್ಮಿಕರಾಗದೇ ಒಳ್ಳೆಯ ಸರ್ಕಾರಿ ಉದ್ಯೋಗ ದೊರಕಿಸಿಕೊಳ್ಳುವಂತೆ ಮಾಡಿ. ಮಕ್ಕಳಲ್ಲಿ ಮಾನವಿಯತೆ ಗುಣ ಬೆಳಸಿ ಎಂದು ಹೇಳಿದರು.
ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಪ್ಯಾನಲ್ ವಕೀಲ್ ಎ.ಆರ್.ಬಿ.ಡಿಸೋಜಾ ಉಪನ್ಯಾಸ ನೀಡಿ, ಬಾಲ ಕಾರ್ಮಿಕರ ರಕ್ಷಣೆಗಾಗಿ ಸರ್ಕಾರ ಅನೇಕ ಯೋಜನೆ ಹಾಗೂ ಕಾಯ್ದೆಗಳ ಅನುಷ್ಠಾನಕ್ಕೆ ತಂದಿದೆ. ತಂದೆ ತಾಯಿಗಳು ಬಡತನದ ಹಿನ್ನಲೆಯಲ್ಲಿ 14 ವರ್ಷದ ಒಳಗಿನ ಮಕ್ಕಳಿಗೆ ಕೆಲಸಕ್ಕೆ ಕಳುಹಿಸದೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಬಾಲ ಕಾರ್ಮಿಕರನ್ನು ಕಾರ್ಖಾನೆ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಕೆಲಸಕ್ಕೆ ತೊಡಗಿಸಿಕೊಂಡರೆ, ಬಾಲ ಕಾರ್ಮಿಕ ಕಾಯ್ದೆ ಅಡಿಯಲ್ಲಿ 10 ತಿಂಗಳು ಅಥವಾ 1 ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ದಂಡ ವಿಧಿಸಲಾಗಿತ್ತದೆ ಎಂದು ಹೇಳಿದರು.
ಕಾರ್ಖಾನೆ, ಹೋಟಲ್, ವಸ್ತು ಸರಬರಾಜು ಕಂಪನಿಗಳಲ್ಲಿ ಕಾರ್ಮಿಕರಿಗೆ ರಕ್ಷಣೆ ನೀಡಬೇಕು. ಕಾರ್ಮಿಕ ಹಾಗೂ ಬಾಲ ಕಾರ್ಮಿಕರ ಮಾಹಿತಿ, ಸೇವೆ, ಸೌಲಭ್ಯ ಹಾಗೂ ಜಾಗೃತಿಗಳ ಬಗ್ಗೆ ಕಾರ್ಮಿಕ ಅಧಿಕಾರಿಗಳು ಅರೀವು ಮೂಡಿಸಿ. ಕಾನೂನು ಕಾಯ್ದೆಗಳ ಸಂಬಧಿಸಿದ ಕಾರ್ಮಿಕರ ಮಾಹಿತಿಗಳನ್ನು, ಕಾರ್ಮಿಕ ಇಲಾಖೆ ಹಾಗೂ ಕಾರ್ಖಾನೆ, ಕಂಪನಿಗಳ ನೋಟಿಸ್ ಬೋರ್ಡ್ನಲ್ಲಿ ಮಾಹಿತಿ ಹಾಗೂ ಸೌಕರ್ಯಗಳ ಪ್ರತಿ ಅಂಟಿಸುವಂತ್ತಾಗಬೇಕು ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಲಲಿತಾ ಸಾತೇನಹಳ್ಳಿ ಮಾತನಾಡಿ, ಕಾರವಾರ ಕಾರ್ಯವ್ಯಾಪ್ತಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಅಡಿಯಲ್ಲಿ ಮದುವೆ, ವೈದ್ಯಕೀಯ, ಹೆರಿಗೆ, ತಾಯಿ ಮಗು ಸಹಾಯ ಹಸ್ತಗಳ, ಸಹಾಯ ಧನ ಮಂಜೂರು ಮಾಡಿದ ಅಂಕಿ ಅಂಶದ ಬಗ್ಗೆ ತಿಳಿಸಿ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಹಾಗೂ ಕಟ್ಟಡ ಮತ್ತು ಇತರೆ ಕಾರ್ಮಿಕ ಸೌಲಭ್ಯಗಳು, ಪ್ರಮಾಣ ಪತ್ರಗಳ ಪಡೆದುಕೊಳ್ಳುವ ಮಾಹಿತಿ ಹಾಗೂ ದೊರೆಯುವ ಸೌಕರ್ಯಗಳ ಬಗ್ಗೆ ಕಾರ್ಮಿಕರಲ್ಲಿ ಅರೀವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಸುರಕ್ಷತಾ ಪರಿಕರಣ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಸಂತೋಷ್.ವಿ.ಭಾಗವತ, ಕಾರ್ಮಿಕ ಇಲಾಖೆಯ ಸಿಬ್ಬದ್ದಿಗಳು, ಕಾರ್ಮಿಕರು ಮತ್ತಿತ್ತರರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಕಾರ್ಮಿಕ ಇಲಾಖೆ ನಿರೀಕ್ಷಕ ಡಿ.ಎಮ್.ವೆಂಕಟೇಶ ಬಾಬು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ವರದಿ: ಸೋಮಶೇಖರ ಲಮಾಣಿ

ಹೆಚ್ಚಿನ ಸುದ್ದಿ