Sunday, May 3, 2026
Homeಜಿಲ್ಲಾ ಸುದ್ದಿಗಳುಕಲಬುರ್ಗಿಕಲಬುರಗಿಗೆ ಹೊಸ ಜಿಲ್ಲಾಧಿಕಾರಿ: ಫೌಜಿಯಾ ತರನ್ನುಮ ವರ್ಗಾವಣೆ, ಇಕ್ರಮುಲ್ಲಾ ಶರೀಫ್ ನೇಮಕ

ಕಲಬುರಗಿಗೆ ಹೊಸ ಜಿಲ್ಲಾಧಿಕಾರಿ: ಫೌಜಿಯಾ ತರನ್ನುಮ ವರ್ಗಾವಣೆ, ಇಕ್ರಮುಲ್ಲಾ ಶರೀಫ್ ನೇಮಕ

ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ಆಡಳಿತಾತ್ಮಕ ಬದಲಾವಣೆಯನ್ನು ಪ್ರಕಟಿಸಿದ್ದು, ಫೌಜಿಯಾ ತರನ್ನುಮ ಬಿ., ಐಎಎಸ್ (ಕೆಎನ್:2015) ಅವರನ್ನು ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಅವರಿಗೆ ಮುಂದಿನ ಆದೇಶದವರೆಗೆ ಬೆಂಗಳೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರ ಹುದ್ದೆಯನ್ನು ನೀಡಲಾಗಿದೆ. ಈ ಮೂಲಕ ಅವರು ಇಂದಿನವರೆಗೆ ವಹಿಸಿಕೊಂಡಿದ್ದ ಏಕಕಾಲಿಕ ಪ್ರಭಾರದಿಂದ ಬಿಡುಗಡೆಗೊಂಡಿದ್ದಾರೆ.

ಇನ್ನೊಂದೆಡೆ, ಬೆಂಗಳೂರು ಹಣಕಾಸು ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ (ಬಜೆಟ್ ಮತ್ತು ಸಂಪನ್ಮೂಲ) ಆಗಿದ್ದ ಮೊಹಮ್ಮದ್ ಇಕ್ರಮುಲ್ಲಾ ಶರೀಫ್, ಐಎಎಸ್ (ಕ.ನಾ:2016) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದ್ದು, ಕಲಬುರಗಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ.

ರಾಜ್ಯ ಸರ್ಕಾರದ ಈ ಆದೇಶದೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಆಡಳಿತಾತ್ಮಕ ಬದಲಾವಣೆ ಸಂಭವಿಸಿದ್ದು, ಹೊಸ ಜಿಲ್ಲಾಧಿಕಾರಿ ಆಗಿ ಇಕ್ರಮುಲ್ಲಾ ಶರೀಫ್ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಸುದ್ದಿ