Monday, April 13, 2026
HomeUncategorizedದ್ವಿತೀಯ ಪಿಯುಸಿ ಫಲಿತಾಂಶ: ಹಾರನಹಳ್ಳಿಯ ಭೂಮಿಕಾಗೆ ಭರ್ಜರಿ ಅಂಕ - ಕೋಲಿ ಬೆಸ್ತ ಸಮಾಜಕ್ಕೆ ಹೆಮ್ಮೆ

ದ್ವಿತೀಯ ಪಿಯುಸಿ ಫಲಿತಾಂಶ: ಹಾರನಹಳ್ಳಿಯ ಭೂಮಿಕಾಗೆ ಭರ್ಜರಿ ಅಂಕ – ಕೋಲಿ ಬೆಸ್ತ ಸಮಾಜಕ್ಕೆ ಹೆಮ್ಮೆ

ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಾರನಹಳ್ಳಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಬಾರಿಕರ ಭೂಮಿಕ 2026ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಸ್ಥಳೀಯ ವಿದ್ಯಾನಿಕೇತನ ಕಾಲೇಜಿನ ವಿದ್ಯಾರ್ಥಿನಿಯಾದ ಇವರು, ಒಟ್ಟು 600 ಅಂಕಗಳಿಗೆ 554 ಅಂಕಗಳನ್ನು ಪಡೆಯುವ ಮೂಲಕ ಗ್ರಾಮದ ಹೆಮ್ಮೆಯ ಮಗಳಾಗಿ ಹೊರಹೊಮ್ಮಿದ್ದಾರೆ. ಇವರು ಹಾರನಹಳ್ಳಿ ಗ್ರಾಮದ ಬಾರಿಕರ ಮಾರುತಿ ಅವರ ಪುತ್ರಿಯಾಗಿದ್ದಾರೆ.

ಮಗಳ ಈ ಅಮೋಘ ಸಾಧನೆಗೆ ತಂದೆ ಬಾರಿಕರ ಮಾರುತಿ ಹರ್ಷ ವ್ಯಕ್ತಪಡಿಸಿದ್ದು, ಹಾರನಹಳ್ಳಿ ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ. ಭೂಮಿಕಾ ಅವರ ಸಾಧನೆಯು ವಿಜಯನಗರ ಜಿಲ್ಲಾ ಕೋಲಿ ಬೆಸ್ತ ಸಮಾಜಕ್ಕೆ ದೊಡ್ಡ ಗೌರವ ತಂದಿದೆ ಎಂದು ಸಮಾಜದ ಮುಖಂಡರು ಶ್ಲಾಘಿಸಿದ್ದಾರೆ.

ಶುಭಾಶಯಗಳ ಮಹಾಪೂರ:
ವಿದ್ಯಾರ್ಥಿನಿಯ ಸಾಧನೆಗೆ ಜಿಲ್ಲಾ ಕೋಲಿ ಬೆಸ್ತ ಸಮಾಜದ ಅಧ್ಯಕ್ಷರಾದ ಅಂಬಾಡಿ ನಾಗರಾಜ್, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿ, ಮುಂದಿನ ಉನ್ನತ ವ್ಯಾಸಂಗಕ್ಕೆ ಶುಭ ಹಾರೈಸಿದ್ದಾರೆ.

ವರದಿ: ಸರ್ದಾರ್ ಯಮನೂರಪ್ಪ
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು, ಕೋಲಿ ಬೆಸ್ತ ಸಮಾಜ, ವಿಜಯನಗರ ಜಿಲ್ಲೆ

ಹೆಚ್ಚಿನ ಸುದ್ದಿ