
ಕಲಬುರಗಿ: ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಿ ರಿಲಿಜಿಯಸ್ ವಿಶ್ವವಿದ್ಯಾಲಯದಿಂದ ‘ವೇದಾಂಗ ಜ್ಯೋತಿಷ್ಯ’ ವಿಷಯದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ಕಲಬುರಗಿಯ ಜ್ಯೋತಿರ್ವಿದ್ವಾಂಸರಾದ ಡಾ. ದಶರಥ ಎಸ್. ನಾಮದಾರ ಮತ್ತು ಡಾ. ಶಿವಕುಮಾರ ಆರ್. ಗಚ್ಚಿನಮಠ ಅವರಿಗೆ ಇದೇ ಏಪ್ರಿಲ್ 5ರಂದು ಭವ್ಯ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಮಾನಸ ವೀಣೆ ವಿದ್ಯಾ ಸಂಸ್ಥೆ, ಪ್ರೊ. ಎಸ್.ಎಸ್. ಆಲಗೂರ ಪ್ರತಿಷ್ಠಾನ ಹಾಗೂ ಗೆಳೆಯರ ಬಳಗದ ವತಿಯಿಂದ ನಗರದ ಹಳೇ ಜೇವರ್ಗಿ ರಸ್ತೆಯ ರಾಮ ಮಂದಿರ ಹತ್ತಿರವಿರುವ ಮೌರ್ಯ ಗ್ರ್ಯಾಂಡ್ ಹೋಟೆಲ್ನಲ್ಲಿ ಭಾನುವಾರ ಬೆಳಿಗ್ಗೆ 11:22ಕ್ಕೆ ಈ ಕಾರ್ಯಕ್ರಮ ನಡೆಯಲಿದೆ.
ಗಣ್ಯರ ಉಪಸ್ಥಿತಿ:
ಶಹಾಬಾದ್ ತಾಲೂಕಿನ ತೊಣಸನಹಳ್ಳಿ (ಎಸ್) ಶ್ರೀ ಅಲ್ಲಮಪ್ರಭು ಸಂಸ್ಥಾನ ಮಠದ ಪೂಜ್ಯ ಶ್ರೀ ಡಾ. ಮಲ್ಲಣ್ಣಪ್ಪ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಬೆಂಗಳೂರಿನ ಸ್ಕೋಪ್ ಜ್ಯೋತಿಷ್ಯ ಸಂಸ್ಥೆಯ ಸಂಸ್ಥಾಪಕರು ಹಾಗೂ ಫ್ಲೋರಿಡಾ ವಿವಿಯ ಕುಲಪತಿಗಳಾದ ಡಾ. ಪ್ರಭಾಕರ ಕೆ. ಕಾಶ್ಯಪ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ಸನ್ಮಾನ್ಯ ಶ್ರೀ ಅರಳಿ ನಾಗರಾಜ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನಸ ವೀಣೆ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ವೀಣಾ ಬಸವರಾಜ ಯರಗೋಳ ಅವರು ವಹಿಸಲಿದ್ದಾರೆ.
ಅತಿಥಿಗಳು:
ಶಾಸಕರಾದ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ. ಸಾಬಣ್ಣ ತಳವಾರ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಬಾಳ, ನಿವೃತ್ತ ಅಪರ ನಿಬಂಧಕ ಶರಣಬಸಪ್ಪ ಎ. ಬೆಣ್ಣೂರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯದ್ರಾಮಿ, ಶ್ರೀ ಗಣೇಶ ಕೋ-ಬ್ಯಾಂಕ್ ಅಧ್ಯಕ್ಷ ಶಾಂತಕುಮಾರ ಬೆಲಗುಂದಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ ಬಿ. ಪಸಾರ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಲಬುರಗಿಯ ಸಾಹಿತ್ಯ ಮತ್ತು ಜ್ಯೋತಿಷ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ವಿದ್ವಾಂಸರಿಗೆ ಸಂದ ಗೌರವವನ್ನು ಸಂಭ್ರಮಿಸಲು ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ
