Thursday, April 2, 2026
Homeಜಿಲ್ಲಾ ಸುದ್ದಿಗಳುದಲ್ಲಾಳಿಗಳೇ ಎಚ್ಚರ.. ಇನ್ಮುಂದೆ ಯಾದಗಿರಿ ನಗರಸಭೆ 'ನೋ ಎಂಟ್ರಿ' ಝೋನ್!

ದಲ್ಲಾಳಿಗಳೇ ಎಚ್ಚರ.. ಇನ್ಮುಂದೆ ಯಾದಗಿರಿ ನಗರಸಭೆ ‘ನೋ ಎಂಟ್ರಿ’ ಝೋನ್!

ಯಾದಗಿರಿ: ಅಡ್ಡದಾರಿ ಹಿಡಿದು ಕೆಲಸ ಮಾಡಿಕೊಡುವ ದಲ್ಲಾಳಿಗಳೇ ಇನ್ನು ಮುಂದೆ ನಿಮ್ಮ ಆಟ ನಡೆಯಲ್ಲ!

ಯಾದಗಿರಿ || ನಗರಸಭೆ ಈಗ ಪಾರದರ್ಶಕತೆಯ ಹಾದಿ ಹಿಡಿದಿದೆ. ಆರ್‌ಟಿಐ ಕಾರ್ಯಕರ್ತರ ಕಾಳಜಿಯುಕ್ತ ಕರೆಗೆ ಪೌರಾಯುಕ್ತ ಉಮೇಶ್ ಚೌಹಾಣ್ ಅವರು ಅಭೂತಪೂರ್ವ ಸ್ಪಂದನೆ ನೀಡಿದ್ದು, ಕಚೇರಿಯ ಗೋಡೆಗಳೇ ಈಗ ದಲ್ಲಾಳಿಗಳಿಗೆ ಎಚ್ಚರಿಕೆ ಸಂದೇಶ ಸಾರುತ್ತಿವೆ.

ಗೋಡೆಗಳ ಮೇಲಿದೆ ಕಾನೂನು ಮದ್ದು:

ಸಾಮಾನ್ಯ ಜನರಿಗೆ ತೊಂದರೆ ನೀಡುವ ಮಧ್ಯವರ್ತಿಗಳನ್ನು ಕಚೇರಿಯಿಂದ ಹೊರಹಾಕಲು ಪೌರಾಯುಕ್ತರು ಈಗ ಅಧಿಕೃತವಾಗಿ ಮುದ್ರೆ ಒತ್ತಿದ್ದಾರೆ. “ಯಾರಾದರೂ ಮಧ್ಯವರ್ತಿಗಳು ಕಚೇರಿ ಪ್ರವೇಶಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಗ್ಯಾರಂಟಿ” ಎನ್ನುವ ಫಲಕಗಳು ರಾರಾಜಿಸುತ್ತಿವೆ. ಅಧಿಕಾರಿ ಮತ್ತು ಕಾರ್ಯಕರ್ತರ ಈ ಜುಗಲ್‌ಬಂದಿ ನಗರದ ದಲ್ಲಾಳಿಗಳ ನಿದ್ದೆಗೆಡಿಸಿದೆ.

ಹೆಚ್ಚಿನ ಸುದ್ದಿ