
ದಾವಣಗೆರೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ದಾವಣಗೆರೆಯ ಹೆಸರಾಂತ ‘ವಸಂತ ಬೆಣ್ಣೆದೋಸೆ’ ಹೋಟೆಲ್ಗೆ ಭೇಟಿ ನೀಡಿ, ನಗರದ ಪ್ರಸಿದ್ಧ ಬೆಣ್ಣೆದೋಸೆಯ ರುಚಿ ಸವಿದರು.
ಸ್ಥಳೀಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಬೆಳಿಗ್ಗೆ ಗಣ್ಯರೊಂದಿಗೆ ಹೋಟೆಲ್ಗೆ ಭೇಟಿ ನೀಡಿದರು. ಡಿ.ಕೆ. ಶಿವಕುಮಾರ್ ಅವರಿಗೆ ಆಹಾರ ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ, ದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಸಾಥ್ ನೀಡಿದರು.
ವಿಶೇಷವೆಂದರೆ, ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲ ಅವರು ಕೂಡ ಡಿಸಿಎಂ ಅವರೊಂದಿಗೆ ಉಪಾಹಾರ ಸೇವಿಸಿದ್ದು ಗಮನ ಸೆಳೆಯಿತು. ಹೋಟೆಲ್ನಲ್ಲಿ ಸಾಮಾನ್ಯ ಗ್ರಾಹಕರಂತೆ ಕುಳಿತು ದೋಸೆ ಸವಿದ ನಾಯಕರು, ದಾವಣಗೆರೆಯ ಈ ವಿಶಿಷ್ಟ ಆಹಾರದ ಶೈಲಿಯನ್ನು ಮೆಚ್ಚಿಕೊಂಡರು. ಡಿಸಿಎಂ ಭೇಟಿಯ ಹಿನ್ನೆಲೆಯಲ್ಲಿ ಹೋಟೆಲ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು ಮತ್ತು ನೆಚ್ಚಿನ ನಾಯಕರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು
